ಮತಗಟ್ಟೆ, ಹೆಸರು ಗೊಂದಲ
ಮೈಸೂರು

ಮತಗಟ್ಟೆ, ಹೆಸರು ಗೊಂದಲ

April 19, 2019

ಮೈಸೂರು: ಎಂದಿನಂತೆ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಮತಗಟ್ಟೆಯ ಗೊಂದಲ ಮೈಸೂರು -ಕೊಡಗು ಲೋಕಸಭಾ ಚುನಾವಣೆಯಲ್ಲೂ ಕಂಡು ಬಂದಿತು.

ಕೆ.ಆರ್. ಕ್ಷೇತ್ರದಲ್ಲಿ ಕೆಲವು ಮತದಾರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದೆ ಪರ ದಾಡುವಂತಾಯಿತು. ಮತದಾನ ಮಾಡಲು ಆಗಮಿಸಿದ್ದ 79ವರ್ಷದ ವೃದ್ಧೆ ಶೀಲಾ ಶಾಂಭವಮೂರ್ತಿ ಅವರ ಹೆಸರು ಪಟ್ಟಿಯಲ್ಲಿರಲಿಲ್ಲ. ಆದರೆ, ಎಲ್ಲಾ ದಾಖಲೆಗಳಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಹಲವರು ತಮ್ಮ ಹೆಸರು ಪಟ್ಟಿಯಲ್ಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಒಂದೇ ಕುಟುಂಬದ ಸದಸ್ಯರ ಹೆಸರುಗಳು ಬೇರೆ-ಬೇರೆ ಮತಗಟ್ಟೆಗಳಿಗೆ ವಿಂಗಡಣೆಯಾಗಿರುವುದು ಹಾಗೂ ಏಜೆಂಟರ ಬಳಿಯಿರುವ ಪಟ್ಟಿಯಲ್ಲಿ ಹೆಸರುಗಳಿದ್ದರೂ ಮತಗಟ್ಟೆಯ ಅಧಿಕಾರಿಗಳ ಬಳಿಯಿರುವ ಪಟ್ಟಿಯಲ್ಲಿ ಹೆಸರಿಲ್ಲದಿರುವ ಸನ್ನಿವೇಶಗಳು ಕಂಡು ಬಂದವು.

ಮತಚಲಾಯಿಸಿದ ವೃದ್ಧೆ: ಕುರುಬಾರಹಳ್ಳಿಯ 85 ವರ್ಷದ ಪುಟ್ಟತಾಯಮ್ಮ ಅವರು ಪುತ್ರ ಸತೀಶ್ ಅವರೊಂದಿಗೆ ಆಟೋದಲ್ಲಿ ಆಗಮಿಸಿ, ಮತಗಟ್ಟೆ ಸಂಖ್ಯೆ 262ರಲ್ಲಿ ಮತ ಚಲಾಯಿಸಿದರು. ನಂತರ ಪುಟ್ಟತಾಯಮ್ಮ ಮಾತನಾಡಿ, ತಿರು ಗಾಡಲು ಆಗುವುದಿಲ್ಲ. ನಾನು ಬರುವುದಿಲ್ಲ ಎಂದು ಹೇಳಿದೆ. ಆದರೆ, ನನ್ನ ಮಗ ಸತೀಶ ಮತದಾನ ಮಾಡದೆ ಇರಬಾರ ದೆಂದು ಕರೆದುಕೊಂಡು ಬಂದರು. ಮತ ಹಾಕಿದ್ದೀನಿ ಎಂದು ಸಂತಸಪಟ್ಟರು. ಹಾಗೆಯೇ 75 ವರ್ಷದ ವೃದ್ಧ ಕೆ.ಸಿ.ಲೇಔಟ್‍ನ ಗೋಪಾಲ ಗೌಡರು ಪುತ್ರ ವಿಷ್ಣು ಅವರೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

Translate »