ಸಾಲ ಮನ್ನಾ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಬಂದಿಲ್ಲ
ಚಾಮರಾಜನಗರ

ಸಾಲ ಮನ್ನಾ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಬಂದಿಲ್ಲ

September 24, 2018

ಗುಂಡ್ಲುಪೇಟೆ:  ಸರ್ಕಾರವು ಸಾಲ ಮನ್ನಾ ಘೋಷಣೆ ಮಾಡಿದ್ದರೂ ಸಹ ಇನ್ನೂ ಯಾವುದೇ ಸ್ಪಷ್ಟ ಸೂಚನೆ ಬಂದಿಲ್ಲ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್ ಹೇಳಿದರು.

ಪಟ್ಟಣದ ಲ್ಯಾಂಪ್ಸ್ ಸೊಸೈಟಿಯ ಸಮು ದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದುವರೆವಿಗೆ ಸರ್ಕಾರವು ಸಾಲ ಮನ್ನಾ ಘೋಷಣೆ ಮಾಡಿದ್ದರೂ ಸಹ ಇನ್ನೂ ನಮ್ಮ ಬ್ಯಾಂಕಿಗೆ ಯಾವುದೇ ಸೂಚನೆ ನೀಡಿಲ್ಲ. ಈಗಾಗಲೇ ವಿತರಣೆ ಮಾಡಿ ರುವ ಸಾಲ ವಸೂಲಾತಿ ಮಾಡುವಂತೆ ಹಿರಿಯ ಅಧಿಕಾರಿಗಳು ಒತ್ತಡ ಹೇರು ತ್ತಿದ್ದು, ಎಲ್ಲರಲ್ಲಿಯೂ ಈ ಬಗ್ಗೆ ಗೊಂದ ಲವುಂಟಾಗಿದೆ ಎಂದರು. ಬ್ಯಾಂಕಿನ ಸಾಲ ವಸೂಲಾತಿಯಲ್ಲಿ ತೀವ್ರ ಹಿನ್ನಡೆಯಾಗಿದ್ದ ರಿಂದ ಯಾವುದೇ ವ್ಯವಹಾರ ನಡೆಸಲು ಸಾಧ್ಯವಾಗದಂತಾಗಿದೆ. ಈ ಬಗ್ಗೆ ಸೋಮ ವಾರ ನಡೆ ಯಲಿರುವ ಮುಖ್ಯಮಂತ್ರಿಗಳ ಹಾಗೂ ಸಹಕಾರ ಸಚಿವರ ಸಭೆಯಲ್ಲಿ ವಿಷಯ ವನ್ನು ಪ್ರಸ್ತಾಪಿಸಿ ಪರಿಹಾರ ಕಂಡು ಕೊಳ್ಳ ಲಾಗುವುದು ಎಂದರು.

ವಾರ್ಷಿಕ ವರದಿಯನ್ನು ಬ್ಯಾಂಕಿನ ವ್ಯವಸ್ಥಾಪಕ ಎನ್.ನಾಗೇಂದ್ರ ಮಂಡಿಸಿ, 2017-18ನೇ ಸಾಲಿನಲ್ಲಿ 89 ಲಕ್ಷ ರೂಪಾ ಯಿಗಳ ಸಾಲ ವಸೂಲಾತಿಯನ್ನು ಮಾಡಿದೆ. 1.43 ಕೋಟಿ ರೂಪಾಯಿಗಳು ಬಾಕಿ ವಸೂಲಾತಿಯಾಗಬೇಕಾಗಿರುತ್ತದೆ ಎಂದರು. ಸಭೆಯಲ್ಲಿ ಮಾಜಿ ಅಧ್ಯಕ್ಷ ಶಾನಾಡ್ರಹಳ್ಳಿ ಎಸ್.ಎಂ.ಮಲ್ಲಿಕಾರ್ಜುನ, ನಿರ್ದೇಶಕರಾದ ಕೊಡಸೋಗೆ ಶಿವ ಬಸಪ್ಪ, ದೇಪಾಪುರ ಸಿದ್ದಪ್ಪ, ಪಿ.ಬಿ.ರಾಜ ಶೇಖರ್, ಹಂಗಳ ಗಂಗಪ್ಪ, ಎಚ್.ವಿ. ಬಸವ ರಾಜು, ಎಸ್‍ಆರ್‍ಎಸ್ ರಾಜಶೇಖರ್, ಹಂಗಳಪುರ ಗೌರಮ್ಮ, ಚಿರಕನಹಳ್ಳಿ ದೇವಮ್ಮ, ಹಸಗೂಲಿ ಮಹದೇವಪ್ಪ ಸೇರಿದಂತೆ ಸದಸ್ಯರು ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.

Translate »