ಜಿಲ್ಲೆಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ತರುವಲ್ಲಿ ಸಂಸದರ ಕೊಡುಗೆ ಅಪಾರ
ಚಾಮರಾಜನಗರ

ಜಿಲ್ಲೆಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ತರುವಲ್ಲಿ ಸಂಸದರ ಕೊಡುಗೆ ಅಪಾರ

September 24, 2018

ಕೊಳ್ಳೇಗಾಲ:  ಏಕಲವ್ಯ, ಆದರ್ಶ ವಿದ್ಯಾಲಯ ಸೇರಿದಂತೆ ಹಲವಾರು ಪ್ರತಿ ಷ್ಠಿತ ಶಿಕ್ಷಣ ಕೇಂದ್ರಗಳನ್ನು ಜಿಲ್ಲೆಗೆ ತರು ವಲ್ಲಿ ಸಂಸದ ಆರ್. ಧ್ರುವನಾರಾಯಣ್ ರವರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ಮತ್ತು ಪರಿಶ್ರಮ ಕಾರಣ ಎಂದು ಪ್ರಾಥ ಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು.

ಪಟ್ಟಣದ ಮುಡಿಗುಂಡ ಬಳಿ 4.5 ಕೋಟಿ ರೂ. ಅಂದಾಜಿನಲ್ಲಿ ನಿರ್ಮಾಣ ವಾಗಿರುವ ಆದರ್ಶ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯ ಕ್ಷತೆ ವಹಿಸಿ ಮಾತನಾಡಿದರು. ಸಂಸದ ಆರ್. ಧ್ರುವನಾರಾಯಣ್ ಕ್ರಿಯಾಶೀಲ ನಾಯಕರು. ಆದರ್ಶ ಶಾಲೆ ಕಟ್ಟಡ ನಿರ್ಮಾ ಣಕ್ಕೆ ಸೂಕ್ತ ಸ್ಥಳ ದೊರೆಯದ ಪರಿಸ್ಥಿತಿ ಯಲ್ಲಿ ಅವರಿಗೆ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಮಾಡಬಹುದು ಎಂದು ಹೇಳಿದ್ದೆ. ಅವರು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕರಿಂದ ಹಿಡಿದು ಕ್ಯಾಬಿನೆಟ್‍ನಲ್ಲಿ ಅನುಮತಿ ಪಡೆದು ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ಶಾಲೆ ಕಟ್ಟಡ ನಿರ್ಮಾ ಣಕ್ಕೆ ಸ್ಥಳ ಪಡೆಯುವಲ್ಲಿ ಯಶಸ್ವಿಯಾ ದರು. ಜಿಲ್ಲೆಯ ಹನೂರಿನಲ್ಲಿ ಏಕಲವ್ಯ ಶಾಲೆ. ನಾಲ್ಕು ತಾಲೂಕುಗಳಲ್ಲಿ ಆದರ್ಶ ವಿದ್ಯಾಲಯಗಳು. ಜಿಲ್ಲಾ ಕೇಂದ್ರದಲ್ಲಿ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಅವರು ಬರುವಂತೆ ಮಾಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ, ಬಡ ಹಾಗೂ ದುರ್ಬಲ ವರ್ಗ ಗಳ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಸರಕಾರಿ ಶಾಲೆಗಳ ಸುಧಾರಣೆಗೆ ಕ್ರಮ: ಆದರ್ಶ ಶಾಲೆ ಸೇರಿದಂತೆ ಸರಕಾರಿ ಶಾಲೆ ಗಳಲ್ಲಿ ಓದುವ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ, ಸರಕಾರಿ ಶಾಲೆಯಲ್ಲಿ ಉತ್ತಮ ಬೋಧನೆ ಮಾಡುವ ಶಿಕ್ಷಕರಿದ್ದಾರೆ. ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯ ಗಳ ಕೊರತೆ ಇದ್ದು ಇದನ್ನು ಸರಿಪಡಿ ಸುವ ಕಾರ್ಯ ಮಾಡಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳವರು ಶಿಸ್ತಿನ ಹೆಸರಿನಲ್ಲಿ ಮಕ್ಕಳ ಸ್ವಾತಂತ್ರವನ್ನು ಅರಿವಿಲ್ಲದೆ ಕಸಿದುಕೊಳ್ಳುತ್ತಿವೆ. ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಕ್ರಿಯಾಶೀಲರಾಗಿ ರುವ ಜತೆಗೆ ಬುದ್ಧಿವಂತರಾಗಿರುತ್ತಾರೆ. ಸರಕಾರಿ ಶಾಲೆಯಲ್ಲಿ ಕಲಿಯುವ ಬುದ್ಧಿ ವಂತ ಮಕ್ಕಳು ಹಾಗೂ ಗುರುಗಳನ್ನು ಮುಖಾ ಮುಖಿ ಮಾಡುವ ಕೆಲಸ ಮಾಡಿದರೆ ಸಾಕು ಗುಣ ಮಟ್ಟದ ಕಲಿಕೆ ದೊರೆಯ ಲಿದೆ. ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಲಿಸುವ ಕಾರ್ಯ ಮಾಡ ಬೇಕಿದೆ ಎಂದರು.

ನೂತನ ಕಟ್ಟಡವನ್ನು ಉದ್ಘಾಟಿಸಿದ ಸಂಸದ ಆರ್.ಧ್ರುವನಾರಾಯಣ್ ಮಾತ ನಾಡಿ, ಮಾಜಿ ಪ್ರದಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ಬಂದ ಸರ್ವ ಶಿಕ್ಷಣ ಅಭಿಯಾನ ಕಾರ್ಯ ಕ್ರಮದಿಂದ ಪ್ರಾಥಮಿಕ ಶಿಕ್ಷಣದಲ್ಲಿನ ಕೊರ ತೆಗಳನ್ನು ನೀಗಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧಿ ಕಾರವಾಧಿಯಲ್ಲಿ ಜಾರಿಗೆ ಬಂದ ಮಾಧ್ಯ ಮಿಕ ಶಿಕ್ಷಣ ಅಭಿಯಾನ ಯೋಜನೆಯಿಂದ ಪ್ರೌಢ ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆಯಾ ಯಿತು. ಜಿಲ್ಲೆಯ ನಾಲ್ಕು ತಾಲೂಕುಗಳ ಲ್ಲಿಯೂ ಆದರ್ಶ ವಿದ್ಯಾಲಯ ಇದ್ದು, ಸ್ವಂತ ಕಟ್ಟಡ ಹೊಂದಿವೆ. ಜಾಗದ ಸಮಸ್ಯೆಯಿಂ ದಾಗಿ ಪಟ್ಟಣದಲ್ಲಿ ಆದರ್ಶ ಶಾಲೆ ಕಟ್ಟಡ ನಿರ್ಮಾಣ ವಿಳಂಬವಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರೇಷ್ಮೆ ಇಲಾಖೆ ಭೂಮಿಯನ್ನು ಮಂಜೂರು ಮಾಡಿ ಕೊಟ್ಟು ಈ ಕಟ್ಟಡ ನಿರ್ಮಾಣವಾಗಲು ಕಾರಣೀ ಭೂತರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಈ ಸಾಲಿನಲ್ಲಿ 4500ಕೋಟಿ ಅನು ದಾನ ನೀಡಿದ್ದಾರೆ. ಶಿಕ್ಷಣ ಸಚಿವರು ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿರುವಂತೆ ಸರಕಾರಿ ಶಾಲೆಗಳಲ್ಲಿಯು ಪೋಷಕರ ಕೌನ್ಸಿಲಿಂಗ್ ನಡೆಯುವಂತೆ ಮಾಡಬೇಕು ಎಂದರು,
ಶಾಸಕ ಆರ್.ನರೇಂದ್ರ ಮಾತನಾಡಿದರು. ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಜಯಂತಿ. ನಾಗರಾಜು, ತಾಪಂ ಅಧ್ಯಕ್ಷ ರಾಜು, ಉಪಾ ಧ್ಯಕ್ಷೆ ಲತಾ. ಸ್ಥಾಯಿ ಸಮಿತಿ ಅಧ್ಯಕ್ಷ ಜಾವೇದ್ ಅಹಮ್ಮದ್, ಗುತ್ತಿಗೆದಾರ ಗಿರಿರಾಜ್, ಎಸ್‍ಡಿ ಎಂಸಿ ಅಧ್ಯಕ್ಷ ಇಂದ್ರಕುಮಾರ್, ಸದಸ್ಯ ಸುಂದ್ರಪ್ಪ. ನಗರಸಭಾ ಸದಸ್ಯರಾದ ಪುಷ್ಟ ಲತಾ ಶಾಂತರಾಜು. ನಾಗಸುಂದರಮ್ಮ ಜಗದೀಶ್, ಶಾಕತರಾಕು, ಪ್ರಶಾಂತ್, ರಾಮ ಕೃಷ್ಣ, ಬಿಇಓ ಚಂದ್ರಪಾಟೀಲ್, ಬಿಆರ್‍ಪಿ. ಮಂಜುಳ, ಮುಖ್ಯ ಶಿಕ್ಷಕ ಹನುಮಂತ ಶೆಟ್ಟಿ. ಮುಂತಾದವರಿದ್ದರು.

Translate »