30 ಯೂನಿಟ್ ರಕ್ತದಾನ ಮಾಡಿದ ನೌಕರರು
ಮೈಸೂರು

30 ಯೂನಿಟ್ ರಕ್ತದಾನ ಮಾಡಿದ ನೌಕರರು

June 22, 2020

ಮೈಸೂರು, ಜೂ.21(ಆರ್‍ಕೆಬಿ)- `ಅಪ್ಪಂದಿರ ದಿನ’ ಆಚರಣೆ ಹಾಗೂ ಜೆ.ಕೆ. ಟೈರ್ಸ್‍ನ ಸಂಸ್ಥಾಪಕ ದಿ. ಹರಿಶಂಕರ್ ಸಿಂಘಾನಿಯ ಹುಟ್ಟುಹಬ್ಬದ ಅಂಗವಾಗಿ ಜೆ.ಕೆ.ಟೈರ್ಸ್‍ನ 30 ನೌಕರರು ಸಯ್ಯಾಜಿ ರಾವ್ ರಸ್ತೆಯ `ಜೀವಧಾರ ರಕ್ತನಿಧಿ ಕೇಂದ್ರ’ದಲ್ಲಿ ಸ್ವಯಂಪ್ರೇರಿತರಾಗಿ ಭಾನು ವಾರ ರಕ್ತದಾನ ಮಾಡಿದರು.

ಬಳಿಕ ಜೆ.ಕೆ.ಟೈರ್ಸ್‍ನ ಮಾನವ ಸಂಪ ನ್ಮೂಲ ಅಧಿಕಾರಿ ವಿಕ್ರಂ ಹೆಬ್ಬಾರ್ ಮಾತ ನಾಡಿ, ಈ ವರ್ಷ ಕೊರೊನಾ ಭೀತಿ ಯಿಂದಾಗಿ ರಕ್ತದ ಅಭಾವವಾಗಿದ್ದು, ಸರಿ ದೂಗಿಸಲು ರಕ್ತದಾನಕ್ಕೆ ಮುಂದಾಗಿದ್ದೇವೆ. ಮುಂದೆ ರಕ್ತದಾನಕ್ಕೆ ಜನರನ್ನು ಪ್ರೇರೇಪಿ ಸಲು ಕುಟುಂಬ ಸಮೇತ ರಕ್ತದಾನ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಪ್ರತಿ ದಿನ 300-400 ಯೂನಿಟ್ ರಕ್ತ ಅವಶ್ಯಕ ವಿದೆ. ಆದರೆ, ಕೊರೊನಾ ಭೀತಿ ಹಿನ್ನೆಲೆ ಯಲ್ಲಿ ರಕ್ತದಾನಿಗಳು ರಕ್ತ ನೀಡಲು ಹಿಂಜರಿ ಯುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ರಕ್ತದಾನ ಹೆಚ್ಚು ಮಹತ್ವ ಪಡೆಯಲಿದೆ. ಹೀಗಾಗಿ ಹೆಚ್ಚು ಮಂದಿ ರಕ್ತದಾನಕ್ಕೆ ಮುಂದಾ ಗಬೇಕು ಎಂದು ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮನವಿ ಮಾಡಿದರು.

ಜೆ.ಕೆ.ಟೈರ್ಸ್ ಹಿರಿಯ ಅಧಿಕಾರಿ ನಾಗ ರಾಜ್, ವೈದ್ಯರಾದ ಡಾ.ಕಿರಣ್, ಡಾ. ಮಮತಾ ಇನ್ನಿತರರು ಉಪಸ್ಥಿತರಿದ್ದರು

Translate »