ಮಾರಶೆಟ್ಟಿಹಳ್ಳಿ ಜೂಜು ಅಡ್ಡೆ ಮೇಲೆ ಡಿಸಿಐಬಿ ದಾಳಿ: 17 ಮಂದಿ ಸೆರೆ, 97 ಸಾವಿರ ರೂ. ವಶ
ಮೈಸೂರು

ಮಾರಶೆಟ್ಟಿಹಳ್ಳಿ ಜೂಜು ಅಡ್ಡೆ ಮೇಲೆ ಡಿಸಿಐಬಿ ದಾಳಿ: 17 ಮಂದಿ ಸೆರೆ, 97 ಸಾವಿರ ರೂ. ವಶ

June 22, 2020

ಮೈಸೂರು, ಜೂ.21(ಎಂಟಿವೈ)- ಮೈಸೂರು ತಾಲೂಕು ಮಾರಶೆಟ್ಟಿಹಳ್ಳಿ ಬಳಿ ಜಮೀನೊಂದರಲ್ಲಿದ್ದ ಜೂಜು ಅಡ್ಡೆ ಮೇಲೆ ಮೈಸೂರು ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಐಬಿ) ಪೊಲೀಸರು ಭಾನುವಾರ ದಾಳಿ ಮಾಡಿ, ಜೂಜಾಟದಲ್ಲಿದ್ದ 17 ಮಂದಿಯನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 97,450 ರೂ. ನಗದನ್ನೂ ವಶಪಡಿಸಿ ಕೊಂಡಿದ್ದಾರೆ. ಪ್ರತಿದಿನ ಜೂಜು ನಡೆಯುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಸಿ.ರವಿಕುಮಾರ್ ಮತ್ತು ತಂಡ ದಾಳಿ ನಡೆಸಿ, ಜೂಜಾಡುತ್ತಿದ್ದ ರಾಜು, ಗಂಗಾಧರ, ಸಂದೀಪ್, ಸಂಜು, ರಮೇಶ, ರವಿ, ನಂದೀಶ, ಸುರೇಶ, ಮಂಜುನಾಥ, ಅಜಯ್, ನಾಗರಾಜು, ಮಹೇಶ, ಗಿರೀಶ್‍ಕುಮಾರ್, ಸೀನ, ಮಂಜು, ಶಂಕರ್, ನಾಗರಾಜು ಬಂದಿಸಿದರು. ಹರೀಶ್‍ಕುಮಾರ್ ಎಂ.ಕೆ.ಸಂದೀಪ್, ಬಿ.ಆರ್.ಸುನಿಲ್, ಸಿ.ಎಸ್.ರಾಮ್ ಪ್ರಸಾದ್ ಮತ್ತು ಜೀಪ್ ಚಾಲಕ ಚಿಕ್ಕಲಿಂಗು ಕಾರ್ಯಾಚರಣೆಯಲ್ಲಿದ್ದರು. ಪ್ರಕರಣವನ್ನು ಡಿಸಿಐಬಿ ಪೊಲೀ ಸರು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

Translate »