ಮೈಸೂರು ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪಿ.ವಿ.ಸಿಂಧುಗೆ ಆಹ್ವಾನ
ಮೈಸೂರು

ಮೈಸೂರು ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪಿ.ವಿ.ಸಿಂಧುಗೆ ಆಹ್ವಾನ

September 15, 2019

ಬೆಂಗಳೂರು,ಸೆ.14(ಕೆಎಂಶಿ)-ವಿಶ್ವವಿಖ್ಯಾತ ದಸರಾಗೆ ಕೇಂದ್ರದ ಪ್ರಮುಖ ಸಚಿವರನ್ನು ಆಹ್ವಾನಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸ್ಥಳೀಯ ಶಾಸಕರಿಗೆ ಇಂದಿಲ್ಲಿ ಸೂಚಿಸಿದ್ದಾರೆ.

ಮೈಸೂರು ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಉಸ್ತು ವಾರಿ ಸಚಿವ ಸೋಮಣ್ಣ, ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸ್ವಾಗತ ಸಮಿತಿಯ ಶಾಸಕರು, ಪದಾಧಿಕಾರಿಗಳು ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮೈಸೂರು ದಸರಾಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ದಸರಾ ಸಿದ್ಧತೆ ಬಗ್ಗೆ ಸಮಿತಿ ಯಿಂದ ಮಾಹಿತಿ ಪಡೆದ ಮುಖ್ಯಮಂತ್ರಿಯವರು, ಕಾವೇರಿ ಜಲಾನಯನ ಭಾಗದ ಜಲಾಶಯಗಳು ಭರ್ತಿಯಾಗಿವೆ. ಆ ಭಾಗದ ರೈತರು, ಜನರು ಸಂತೃಪ್ತಿಯಿಂದಿದ್ದಾರೆ. ನಾಡದೇವತೆಯ ಪೂಜೆ ಮತ್ತು ಸಡಗರ ವಿಜೃಂಭಣೆಯಿಂದಲೇ ನಡೆಯಲಿ. ಇದರಿಂದ ರಾಜ್ಯಕ್ಕೆ ಒಳ್ಳೆ ಮಳೆ-ಬೆಳೆಯಾಗಲಿ ಎಂದಿದ್ದಲ್ಲದೆ, ಉತ್ಸ ವದ ಸಂದರ್ಭದಲ್ಲಿ ಎಲ್ಲಿಯೂ ಲೋಪವುಂಟಾಗಬಾರದು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆ ಚ್ಚರಿಕಾ ಕ್ರಮ ಕೈಗೊಳ್ಳಿ. ಕೇವಲ ನನ್ನನ್ನು ಮಾತ್ರ ಆಹ್ವಾನಿಸು ವುದು ಮಾತ್ರವಲ್ಲ, ಕೇಂದ್ರ ಸಚಿವರು ಬರುವಂತೆ ನೋಡಿ ಕೊಳ್ಳಿ. ಅಲ್ಲದೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರ ಜೋಳ, ಲಕ್ಷ್ಮಣ್ ಸವದಿ ಹಾಗೂ ಅಶ್ವತ್ಥ್‍ನಾರಾಯಣ್ ಅವ ರನ್ನು ದಸರಾ ಉತ್ಸವಕ್ಕೆ ಆಹ್ವಾನಿಸಿ ಮತ್ತು ಅವರ ವಿಶ್ವಾಸ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು. ಮುಖ್ಯಮಂತ್ರಿಯವರಿಗೆ ಮೈಸೂರು ಪೇಟ, ಶಾಲು ತೊಡಿಸಿದ ಸೋಮಣ್ಣ, ಯಡಿಯೂರಪ್ಪನವರನ್ನು ಕಂಡು ಮಹಾರಾಜ ರಂತೆ ಕಾಣುತ್ತಿದ್ದೀರಿ ಎಂದು ಹೇಳಿ, ಹರ್ಷ ವ್ಯಕ್ತಪಡಿಸಿದರು.

ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ಉಸ್ತು ವಾರಿ ಸಚಿವರು ಮತ್ತು ಶಾಸಕ ಜಿ.ಟಿ.ದೇವೇಗೌಡ, ಸೆ.29ರ ಬೆಳಿಗ್ಗೆ 9 ಗಂಟೆಯ ನಂತರ ಚಾಮುಂಡಿದೇವಿಗೆ ಪೂಜೆ ಸಲ್ಲಿಸ ಲಾಗುವುದು. ನಂತರ ಮೈಸೂರು ದಸರಾಗೆ ಚಾಲನೆ ನೀಡ ಲಾಗುವುದು. 8ನೇ ತಾರೀಖಿನವರೆಗೆ ದಸರಾದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಆ ಎಲ್ಲ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿಯವರನ್ನು ಆಹ್ವಾನಿಸಿದ್ದೇವೆ. ಈಗಾಗಲೇ ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಆಹ್ವಾನಿಸಲಾಗಿದೆ ಎಂದರು. ವಿಶ್ವಖ್ಯಾತಿ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು ಅವರ ಆಗಮನದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಗಳು ಅವರಿಗೆ ಅಧಿಕೃತ ಪತ್ರವನ್ನು ಬರೆದಿದ್ದಾರೆ. ಸಿಂಧು ಅವರನ್ನು ಸರ್ಕಾರಿ ಅತಿಥಿಯಾಗಿ ಆಹ್ವಾನಿಸಿದ್ದಾರೆ ಎಂದರು. ಶಾಸಕ ರಾಮದಾಸ್ ದಸರಾದಿಂದ ದೂರವಿರುವ ವಿಚಾರ ದಲ್ಲಿ ಅವರೂ ನಮ್ಮ ಜೊತೆಯಲ್ಲೇ ಇದ್ದಾರೆ. ದಸರಾ ಉಪ ಸಮಿತಿಗಳಲ್ಲಿ ಅವರ ಜವಾ ಬ್ದಾರಿಯಿದೆ. ಅದನ್ನು ಮೈಸೂರಿನಲ್ಲಿ ನಿಭಾಯಿಸುತ್ತಿದ್ದಾರೆ ಎಂದರು. ಜಿ.ಟಿ.ದೇವೇ ಗೌಡರು ಹಿರಿಯರು. ಅವರಿಗೆ ಮೈಸೂರು ದಸರಾ ಬಗ್ಗೆ ಅನುಭವವಿದೆ. ಆದ್ದರಿಂದ ಅವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಸೋಮಣ್ಣ ಹೇಳಿದರು.

Translate »