ನಿಮ್ಮಲ್ಲಿರುವ ಎಲೆಕ್ಟ್ರಾನಿಕ್ ಕಸ ನೀಡಿ ಹಸಿರು ಮೈಸೂರಿಗೆ ಸಹಕರಿಸಿ
ಮೈಸೂರು

ನಿಮ್ಮಲ್ಲಿರುವ ಎಲೆಕ್ಟ್ರಾನಿಕ್ ಕಸ ನೀಡಿ ಹಸಿರು ಮೈಸೂರಿಗೆ ಸಹಕರಿಸಿ

September 16, 2019

ಮೈಸೂರು, ಸೆ.15(ಆರ್‍ಕೆಬಿ)- ರಾಜ್ಯದಲ್ಲಿಯೇ ಪ್ರಥಮ ಬಾರಿಗೆ `ಇ ಕಸದಿಂದ ಮುಕ್ತ- ಹಸಿರು ಮೈಸೂರಿನತ್ತ’ ಕಾರ್ಯಕ್ರಮಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಮಹಾನಗರಪಾಲಿಕೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯೆ ಚಂಪಕ, ಆಯುಕ್ತ ಗುರುದತ್ತ ಹೆಗಡೆ, ಆರೋಗ್ಯಾಧಿಕಾರಿ ಡಾ.ಜಯಂತ್ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ನಾಳೆಯಿಂದಲೇ ಪ್ರತೀ ಮನೆಗೂ ಕೆಟ್ಟ ಅಥವಾ ಬಿಸಾಡುವಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಂಡ ಕಂಡಲ್ಲಿ ಬಿಸಾಡದೆ ಮನೆ ಬಾಗಿಲಿಗೆ ಪೌರ ಕಾರ್ಮಿಕರ ವಾಹನ ಬಂದಾನ ನೀಡುವ ಮೂಲಕ `ಇ ಕಸದಿಂದ ಮುಕ್ತ- ಹಸಿರು ಮೈಸೂರಿನತ್ತ’ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮೈಸೂರು ನಾಗರಿಕರಲ್ಲಿ ಮನವಿ ಮಾಡಿದರು. ಈ ಕುರಿತಂತೆ ಪೌರ ಕಾರ್ಮಿಕರು ಪ್ರತಿ ಮನೆ ಮನೆಗೂ ಕರಪತ್ರ ವಿತರಿಸುತ್ತಿದ್ದು, ಜೊತೆಗೆ ಮನೆ ಮನೆಗೆ ಸ್ಟಿಕ್ಕರ್ ಕೂಡ ಅಂಟಿಸಲಿದ್ದಾರೆ. ಅಲ್ಲದೆ ಪ್ರಚಾರ ವಾಹನವೂ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಸಾರ್ವಜನಿಕರು ತಮ್ಮ ಇ ಕಸವನ್ನು ಪೌರ ಕಾರ್ಮಿಕರಿಗೆ ನೀಡಿದರೆ ಹಸಿರು ಮೈಸೂರು ಪರಿಕಲ್ಪನೆಯ ಯಶಸ್ವಿಯಾಗಲು ಸಾಧ್ಯ ಎಂದರು.

Translate »