ಅತ್ಯಂತ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡ ಗ್ರಂಥಗಳಲ್ಲಿ`ಭಗವದ್ಗೀತೆ’ಯೂ ಪ್ರಮುಖ ಸ್ಥಾನ ಪಡೆದಿದೆ
ಮೈಸೂರು

ಅತ್ಯಂತ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡ ಗ್ರಂಥಗಳಲ್ಲಿ`ಭಗವದ್ಗೀತೆ’ಯೂ ಪ್ರಮುಖ ಸ್ಥಾನ ಪಡೆದಿದೆ

September 16, 2019

ಮೈಸೂರು,ಸೆ.15(ಪಿಎಂ)-`ಭಗವದ್ಗೀತೆ’ 300ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದ್ದು, ಅತ್ಯಂತ ಹೆಚ್ಚಿನ ಭಾಷೆ ಗಳಿಗೆ ಅನುವಾದಗೊಂಡ ಗ್ರಂಥಗಳ ಪೈಕಿ ಇದು ಕೂಡ ಪ್ರಮುಖವಾಗಿದೆ ಎಂದು ಮೈಸೂರು ವಿವಿ ಪ್ರಾಚೀನ ಇತಿ ಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಮುಖ್ಯಸ್ಥರೂ ಆದ ಭಾರತೀಯ ವಿದ್ಯಾಭವನದ (ಬಿವಿಬಿ) ಮೈಸೂರು ಕೇಂದ್ರದ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ ಹೇಳಿದರು.

ಮೈಸೂರಿನ ಗೋಪಾಲಸ್ವಾಮಿ ಶಿಶುವಿಹಾರ ಕಾಲೇಜಿನ ಸಭಾಂಗಣದಲ್ಲಿ ಸಂಸ್ಕøತಿ ಪ್ರಕಾಶನ, ಶ್ರೀನಿಧಿ ಪುಸ್ತಕಗಳು ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಮೈಸೂರು ಮಿತ್ರ’ ಅಂಕಣಕಾರರೂ ಆದ ನಿವೃತ್ತ ತಹಶೀ ಲ್ದಾರ್ ಡಾ.ವಿ.ರಂಗನಾಥ್ ಅವರ `ನೀವು ನಮ್ಮವರಲ್ಲ ನಾವೇ ನಿಮ್ಮವರು!’ (ಮೈಸೂರು ಮಿತ್ರ ಅಂಕಣ ಬರಹಗಳು) ಹಾಗೂ `ನಮ್ಮ ಹೆಮ್ಮೆಯ ರಾಷ್ಟ್ರಧ್ವಜ’ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ.ವಿ.ರಂಗನಾಥ್ ಅವರ `ನೀವು ನಮ್ಮವರಲ್ಲ ನಾವೇ ನಿಮ್ಮವರು!’ ಪುಸ್ತಕದಲ್ಲಿ `ಹಿಗ್ಗಬೇಡ… ಕುಗ್ಗಬೇಡ… ಜಗ್ಗಬೇಡ…’ ಎಂಬ ಲೇಖನವಿದ್ದು, ಇದರಲ್ಲಿ ಭಗವದ್ಗೀತೆ ಯಲ್ಲಿ ಹೇಳಲಾದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಇಂಗ್ಲಿಷ್ ಸೇರಿದಂತೆ 300ಕ್ಕೂ ಹೆಚ್ಚು ಭಾಷೆಗಳಿಗೆ ಅನು ವಾದಗೊಂಡ ಗ್ರಂಥಗಳ ಪೈಕಿ ಭಗವದ್ಗೀತೆಯೂ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ನಾನೂ ಅಂಕಣಕಾರನಾದ ಹಿನ್ನೆಲೆಯಲ್ಲಿ ಅಂಕಣಕಾರರ ಸವಾಲುಗಳೇನೆಂದು ಗೊತ್ತಿದೆ. ಸಾಕಷ್ಟು ಅಧ್ಯಯನ ನಡೆಸಿ ಒಂದು ಅಂಕಣ ಸಿದ್ಧಪಡಿಸಿದ್ದರೂ ಪ್ರಸ್ತುತಕ್ಕೆ ಅನುಗುಣ ವಾಗಿ ಮತ್ತೊಂದು ಅಂಕಣ ಸಿದ್ಧಪಡಿಸುವ ಸನ್ನಿವೇಶವೂ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಕಡಿಮೆ ಸಮಯ ದಲ್ಲಿ ಎಲ್ಲವನ್ನೂ ಕಲೆ ಹಾಕಿ ಅಂಕಣ ಸಿದ್ಧಪಡಿಸುವ ಹೊಣೆ ಗಾರಿಕೆ ನಿಭಾಯಿಸಬೇಕಾಗುತ್ತದೆ ಎಂದು ತಿಳಿಸಿದರು.

ಡಾ.ರಂಗನಾಥ್ ಕೃತಿಯಲ್ಲಿರುವ `ಆಳುವವರಿಗೆ ವಿದ್ಯಾ ರ್ಹತೆ ಬೇಕಲ್ಲವೇ?’ ಲೇಖನ ಪ್ರಸ್ತುತ ರಾಜಕೀಯ ಸನ್ನಿ ವೇಶಕ್ಕೆ ಸೂಕ್ತವಾಗಿದ್ದು, ಜನಪ್ರತಿನಿಧಿಗಳು ವಿದ್ಯಾರ್ಹತೆ ಹೊಂದಿಲ್ಲದಿದ್ದರೆ ಅವರು ಕೇಳುವ ಅಸಂಬದ್ಧ ಪ್ರಶ್ನೆಗಳಿಗೆ ವಿದ್ಯಾವಂತರೂ ಮೌನಕ್ಕೆ ಶರಣಾಗಬೇಕಾಗುತ್ತದೆ. ಮತ್ತೊಂದು ಲೇಖನದಲ್ಲಿ ಆಹಾರ ಪದ್ಧತಿ ಮೇಲೆ ಬೆಳಕು ಚೆಲ್ಲಲಾ ಗಿದ್ದು, ಬದುಕುವುದಕ್ಕೆ ಬೇಕಾದಷ್ಟು ಮಾತ್ರವೇ ತಿನ್ನುವ ಪರಿಪಾಠ ಬೆಳೆಸಿಕೊಳ್ಳಬೇಕಿದೆ. ಇದೇ ಹಿನ್ನೆಲೆಯಲ್ಲಿ ಗಾಂಧಿಯವರ `ಆಹಾರ ರುಚಿಗಲ್ಲ’ ಲೇಖನ ಆಹಾರಕ್ಕೆ ಸಂಬಂಧಿಸಿದಂತೆ ಮಹತ್ವ ವಿಚಾರಗಳನ್ನು ಮನನ ಮಾಡುವಂತೆ ಮಾಡುತ್ತದೆ ಎಂದರು.

ಅಧಿಕಾರ ಶಾಶ್ವತವಲ್ಲ ಎಂಬ ಸಂದೇಶ ಸಾರುವ ಕೃತಿ ಯಲ್ಲಿನ ಲೇಖನ ಅಧಿಕಾರದ ಅಹಂ ಇರಬಾರದೆಂಬ ಎಚ್ಚ ರಿಕೆ ನೀಡುತ್ತದೆ. ಮೇಷ್ಟ್ರುಗಳ ವಿಚಾರದಲ್ಲಿ ನಿವೃತ್ತಿಯಾ ದರೂ ಅವರು ಮೇಷ್ಟ್ರುಗಳಾಗಿಯೇ ಮುಂದುವರೆಯುತ್ತಾರೆ. ಹೀಗಾಗಿ ಶಿಕ್ಷಕ ಸಮುದಾಯ ಸಮಾಜ ತನ್ನ ಮೇಲೆ ಹೊಂದಿ ರುವ ನಂಬಿಕೆಗೆ ಅನುಗುಣವಾಗಿ ನಡೆಯಬೇಕಾದ ಜವಾ ಬ್ದಾರಿ ಹೊಂದಿದೆ. `ಶಿಕ್ಷಣದ ಆರೋಗ್ಯವೇ ಶಿಥಿಲವಾಗು ತ್ತಿದೆ’ ಎಂಬ ಲೇಖನದಲ್ಲಿ ಹಣದ ಹಿಂದೆ ಬಿದ್ದಿರುವ ಶಿಕ್ಷಣ ಸಂಸ್ಥೆಗಳ ನಡೆಯನ್ನು ಡಾ.ರಂಗನಾಥ್ ಖಂಡಿಸಿದ್ದಾರೆ. ಪುಸ್ತಕ ಸಂಸ್ಕøತಿ ಬೆಳೆಸಲು ಅವುಗಳನ್ನೇ ಉಡುಗೊರೆ ನೀಡುವ ಸಲಹೆ ನೀಡುವ ಅವರ ಮತ್ತೊಂದು ಲೇಖನ ಪುಸ್ತಕಗಳ ಮಹತ್ವದ ಮೇಲೆ ಬೆಳಕು ಚೆಲ್ಲಿದೆ ಎಂದರು.

ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಮಹಾರಾಜಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ ಮಾತ ನಾಡಿ, ಪುಸ್ತಕ ಓದಿದರೆ ಮಾತ್ರವೇ ನಮ್ಮ ಆಲೋಚನೆಗಳು ಗಟ್ಟಿಯಾಗಲು ಸಾಧ್ಯ. ಅದೇ ರೀತಿ ಲೇಖಕ ತನ್ನ ಬರ ವಣಿಗೆಯಲ್ಲಿ ಸಾಮಾಜಿಕ ಬದ್ಧತೆ ಕಾಯ್ದುಕೊಳ್ಳಬೇಕು. ಅದನ್ನು ಡಾ.ರಂಗನಾಥ್ ಸಮರ್ಥವಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿಗಳ ಕುರಿತು ಮಾತನಾಡಿದ ವೈದ್ಯೆ ಡಾ.ಜಯಶ್ರೀ ಚಂದ್ರಶೇಖರ್, ಡಾ.ರಂಗನಾಥ್ ದಸರಾ ಮಹೋತ್ಸವ ಕುರಿತು ಸಂಶೋಧನಾ ವರದಿ ಸಾದರಪಡಿಸಿ ಪಿಹೆಚ್.ಡಿ ಪದವಿ ಪಡೆದಿದ್ದಾರೆ. ನಿವೃತ್ತಿ ನಂತರ ತಮ್ಮ ಸಾಮಾಜಿಕ ಬದ್ಧತೆಯಿಂದ ಬರವಣಿಗೆ ಮಾಡುತ್ತಿದ್ದಾರೆ. ಇಂದು ಬಿಡು ಗಡೆಗೊಂಡ ಅವರ `ನಮ್ಮ ಹೆಮ್ಮೆಯ ರಾಷ್ಟ್ರಧ್ವಜ’ ಕೃತಿ ನಮ್ಮ ರಾಷ್ಟ್ರಧ್ವಜದ ಪರಂಪರೆಯ ಮೇಲೆ ಬೆಳಕು ಚೆಲ್ಲಿದೆ. ಜೊತೆಗೆ ಧ್ವಜದ ಪರಿಕಲ್ಪನೆಯ ಐತಿಹಾಸಿಕ ದೃಷ್ಟಿಕೋನದ ಬಗ್ಗೆಯೂ ಪ್ರಸ್ತಾಪವಿದೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಅವರ ಈ ಕೃತಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯವಾಗುವ ಅಗತ್ಯವಿದೆ. `ನೀವು ನಮ್ಮವರಲ್ಲ ನಾವೇ ನಿಮ್ಮವರು!’ ಕೃತಿ 32 ಅಧ್ಯಾಯಗಳ ಮೂಲಕ ನಾನಾ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ ಎಂದರು. ಲೇಖಕ ಸಂಸ್ಕøತಿ ಸುಬ್ರಹ್ಮಣ್ಯ, ಕೃತಿಗಳ ಕರ್ತೃ ಡಾ.ವಿ.ರಂಗನಾಥ್ ಮತ್ತಿತರರು ಹಾಜರಿದ್ದರು.

Translate »