ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಸಿಎಂ: ಸಿದ್ದರಾಮಯ್ಯ ಲೇವಡಿ
ಮೈಸೂರು

ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಸಿಎಂ: ಸಿದ್ದರಾಮಯ್ಯ ಲೇವಡಿ

September 16, 2019

ಮಂಡ್ಯ, ಸೆ.15 (ನಾಗಯ್ಯ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಚೀಫ್ ಮಿನಿಸ್ಟರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮಂಡ್ಯ ಜಿಲ್ಲೆಯವರಾಗಿ ಗಡಸು ಹೊಂದಿಲ್ಲ. ಅವರು ಹುಟ್ಟಿದ್ದು ಮಾತ್ರ ಮಂಡ್ಯದಲ್ಲಿ, ಆದರೆ ಬೆಳೆದಿದ್ದೆಲ್ಲಾ ಬೇರೆ ಕಡೆ. ಆದ್ದರಿಂದ ಅವರಿಗೆ ಗತ್ತು ಅನ್ನುವುದು ಬಂದಿಲ್ಲ ಎಂದು ಟೀಕಿಸಿದರು.

ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಾಗಿ 45 ದಿನ ಕಳೆದಿದ್ದರೂ, ಇದುವರೆಗೂ ಒಂದೇ ಒಂದು ರೂಪಾಯಿ ನೆರವನ್ನು ಮೋದಿ ಸರ್ಕಾರ ನೀಡಿಲ್ಲ. ಯಡಿ ಯೂರಪ್ಪ 37 ಸಾವಿರ ಕೋಟಿ ನೆರವುಬೇಕೆಂದು ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ, ನೀವು ಹೆಚ್ಚಿನ ಹಣವನ್ನು ಕೇಳಿದ್ದೀರಿ. ಇದಕ್ಕೆ ಸ್ಪಷ್ಟನೆ ಕೊಡಿ ಎಂದು ಆ ಮನವಿಯನ್ನು ವಾಪಸ್ ಕಳು ಹಿಸಿದೆ. ರಾಜ್ಯದಲ್ಲಿನ ಬಿಜೆಪಿ ನಾಯಕರು ಪುಕ್ಕಲರು. ನನ್ನ ಪ್ರಕಾರ ಒಬ್ಬರಿಗೂ ಧೈರ್ಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಕರ್ನಾಟಕದ ಇತಿಹಾಸದಲ್ಲಿಯೇ ಇಂತಹ ನೆರೆ ಹಾನಿ ಆಗಿರಲಿಲ್ಲ. ರಾಜ್ಯದ ಪ್ರವಾಹ ಪೀಡಿತ ಪ್ರದೇ ಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಬೇಕಿತ್ತು. ಆದರೆ, ಅವರನ್ನು ಕೇಳುವ ಗೋಜಿಗೆ ಯಾರೂ ಹೋಗುತ್ತಿಲ್ಲ. ನೆರೆ ಸಂಬಂಧ ಸಚಿವರು, ಸಂಸದರು ಸೇರಿದಂತೆ ಯಾರು ಕೂಡ ಮಾತನಾಡುತ್ತಿಲ್ಲ. ರಾಜ್ಯ ದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ. ಅವರಿಗೆ ಜವಾಬ್ದಾರಿ ಇಲ್ಲವೇ? ಇಂತಹ ಜನದ್ರೋಹಿ ಸರ್ಕಾರ ಹಿಂದೆದೂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬರಗಾಲ, ಪ್ರವಾಹ, ಖರ್ಚು ಮಾಡಿಲ್ಲ ಎಂದು ನೀಡಿದ್ದ ಅನುದಾನವನ್ನು ಕೇಂದ್ರ ವಾಪಸ್ಸು ಪಡೆ ಯುತ್ತಿದೆ. ಎರಡೂ ಸರ್ಕಾರ ರಾಜ್ಯದಲ್ಲಿ ಸಂಕಷ್ಟದಲ್ಲಿ ರುವ ಜನರಿಗೆ ಒಂದೇ ಒಂದು ರೂಪಾಯಿ ಅನು ದಾನ ಕೂಡ ಕೊಟ್ಟಿಲ್ಲ. ಎರಡೂ ಸರ್ಕಾರಗಳಿಗೆ ಬಡ ವರು, ಜನರ ಬಗ್ಗೆ ಕಾಳಜಿ ಇಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಜನ ಅಧಿಕಾರ ಹಿಡಿದಿದ್ದಾರೆ ಎಂದು ಸಿದ್ದ ರಾಮಯ್ಯ ಆರೋಪಿಸಿದರು.

ಶಾಸಕರಿಗೆ ನೀಡಿದ ಅನುದಾನ ಕಡಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯದ ಹಣಕಾಸು ಸ್ಥಿತಿ ಬಗ್ಗೆ ಅರ್ಥವಾಗುತ್ತಿಲ್ಲ. ಬರಗಾಲ, ಪ್ರವಾಹ ಸ್ಥಿತಿ ಯಲ್ಲಿ ಖರ್ಚು ಮಾಡಿಲ್ಲ ಎಂದು ಜನ ವಿರೋಧಿ ಕೇಂದ್ರ ಸರ್ಕಾರ ಅನುದಾನ ವಾಪಸ್ ಪಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ ಎಂದು ಟೀಕಿಸಿದರು.

ಮೈತ್ರಿ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವೇಕೆ ಈಗ ಪ್ರಸ್ತಾಪ ಮಾಡು ತ್ತಿದ್ದೀರಿ, ಮೈತ್ರಿ ವಿಚಾರ ನನಗ್ಯಾಕೆ?, ಬಿಜೆಪಿಯವರು ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದರು. ಆದರೆ, ಈಗ ಕಾಲ ಸರಿಯಿಲ್ಲ ಎಂದು ಸುಮ್ಮನಿದ್ದಾರೆ. ನಮ್ಮ ಪಕ್ಷದಿಂದ ಬಿಜೆಪಿಗೆ ಯಾರು ಕೂಡ ಹೋಗಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ದಿಲ್ಲಿಗೆ ಹೋಗಿದ್ದೆ. ಆದರೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ವಾಪಸ್ ಬಂದೆ, ಆದರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರ ನಾವಿದ್ದೇವೆ. ಅವರ ಬಂಧನ ಖಂಡಿಸಿ ಕಾಂಗ್ರೆಸ್-ಜೆಡಿಎಸ್‍ನವರೂ ಕೂಡ ಈಗಾಗಲೆ ಪ್ರತಿಭಟನೆ ಮೂಲಕ ಬಿಜೆಪಿಯ ರಾಜಕೀಯ ಕುತಂತ್ರವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಗೆ 8.5 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವ ವಿಚಾರ ನನಗೆ ಗೊತ್ತೆ ಇಲ್ಲ. ಆದರೆ, ಘೋಷಣೆ ಮಾಡಿದ್ದು ಮಾತ್ರ ಗೊತ್ತು. ಮಂಡ್ಯಕ್ಕೆ ಅಷ್ಟು ಅನುದಾನ ಬಂದಿದ್ದರೇ ನನಗೂ ಖುಷಿ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು.

Translate »