ಮೈಸೂರು, ಸೆ.15(ಎಂಕೆ)- ವರ್ಷಕ್ಕೆ ಸುಮಾರು 15 ಲಕ್ಷ ಇಂಜಿನಿಯರ್‍ಗಳು ಪದವಿ ಪಡೆದು ಹೊರಬರುತ್ತಿದ್ದಾರೆ. ಆದರೆ, ಇಂಜಿನಿಯರ್‍ಗಳ ಅವಶ್ಯಕತೆ ಇದ್ದರೂ ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸುವಲ್ಲಿ ಸರ್ಕಾರಗಳು ಹಿಂದೆ ಬಿದ್ದಿದೆ ಎಂದು ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಉಪಕುಲಪತಿ ಡಾ.ಬಿ.ಜಿ.ಸಂಗಮೇಶ್ವರ್ ಅಭಿಪ್ರಾಯಪಟ್ಟರು.
ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಭಾರತೀಯ ಇಂಜಿನಿಯರುಗಳ ಸಂಸ್ಥೆ ಮೈಸೂರು ಘಟಕದ ವತಿಯಿಂದ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ 52ನೇ ಇಂಜಿನಿಯರ್ಸ್‍ಗಳ ದಿನಾಚರಣೆ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿ ನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳಲ್ಲಿ ಒಬ್ಬರು ಇಂಜಿ ನಿಯರ್‍ಗೆ ಆರು ಮಂದಿ ಟೆಕ್ನಿಷಿಯನ್ ಇರುವ ಜಾಗದಲ್ಲಿ ಒಬ್ಬರು ಟೆಕ್ನಿಷಿಯನ್‍ಗೆ ಆರು ಮಂದಿ ಇಂಜಿನಿಯರ್‍ಗಳಿರುವ ಪರಿಸ್ಥಿತಿ ಬಂದಿದೆ. ಇಂಜಿನಿಯರ್ ವಿದ್ಯಾರ್ಥಿಗಳಿಗೂ ಐಟಿಐ, ಡಿಪ್ಲಮೊ ವಿದ್ಯಾರ್ಥಿಗಳಿಗೆ ನೀಡುವಂತೆ ಪ್ರಾಯೋ ಗಿಕ ತರಬೇತಿಯನ್ನು ನೀಡಬೇಕು ಎಂದರು.
ದೇಶದ ಅಭಿವೃದ್ಧಿಗೆ ಇಂಜಿನಿಯರ್ ಗಳ ಕೊಡುಗೆ ಮಹತ್ವದ್ದಾಗಿದೆ. ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸಿದರೆ ಸಮಾಜದ ಅಭಿವೃದ್ಧಿಯತ್ತ ಸಾಗುತ್ತದೆ. ಎಲ್ಲಾ ವೇಳೆಯಲ್ಲಿಯು ನೆನೆಯ ಬೇಕಾದ ಇಂಜಿನಿಯರ್ ಮತ್ತು ಶಿಕ್ಷಕ ಇವರಾಗಿದ್ದಾರೆ ಎಂದು ಬಣ್ಣಿಸಿದರು.
ಸರ್‍ಎಂವಿ ಯಾವ ಕೆಲಸವನ್ನು ನೀಡಿ ದರೂ ಶಿಸ್ತು ಮತ್ತು ಕ್ರಮಬದ್ಧತೆಯಿಂದ ಮಾಡುತ್ತಿದ್ದರು. ಕಠಿಣ ಕೆಲಸಗಳೇ ಅವ ರಲ್ಲಿಗೆ ಬರುತ್ತಿದ್ದವು. ಕಠಿಣ ಕಾರ್ಯ ಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಪ್ರಬುದ್ಧ ಇಂಜಿನಿಯರ್ ಆದರೂ. ನೀರಾ ವರಿ ವ್ಯವಸ್ಥೆಗೆ ಅಪಾರ ಕೊಡುಗೆಯನ್ನು ನಿಡಿದ ಅವರು, ಸ್ಮಾರ್ಟ್ ಸಿಟಿ ಎಂಬ ಪರಿಕಲ್ಪನೆಯನ್ನು ಮೊದಲೇ ಪರಿಚಯಿಸಿ ದ್ದರು ಎಂದರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ವೇಳೆ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ದರು. ಶಿಕ್ಷಣ ಕ್ಷೇತ್ರಕ್ಕೂ ಸೇವೆ ನೀಡಿರುವ ಅವರು, ಕಡೆಯವರೆಗೂ ಸರ್ಕಾರ ವಾಹನ ವನ್ನು ಬಳಸಲಿಲ್ಲ. ಆದರೆ, ಇಂದಿನ ಜನ ಪ್ರತಿ ನಿಧಿಗಳು ನಮಗೆ ಆ ಕಾರು ಬೇಡ… ಈ ಕಾರು ಬೇಡ ಎನ್ನುತ್ತಾರೆ ಎಂದು ಹೇಳಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ದೇಶ ಕಂಡ ಮಹಾನ್ ಚೇತನ ಸರ್.ಎಂ. ವಿಶ್ವೇಶ್ವರಯ್ಯ ಅವರು ಮೈಸೂರಿನ ಕೇಂದ್ರ ಬಿಂದುವಾಗಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರಿನ ಕೋಟ್ಯಾಂತರ ಜನತೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಮಾಡಿ ಕೊಟ್ಟಿದ್ದಾರೆ. ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿಯನ್ನು ಕಲ್ಪಿಸಿದ ಅವರ ಆದರ್ಶ, ಶಿಸ್ತು ಎಲ್ಲರಿಗೂ ಮಾದರಿ ಯಾಗಿದೆ. ಮುಡಾ, ನಗರಪಾಲಿಕೆ ಕಚೇರಿ ಕಟ್ಟಡಗಳು ಸರ್.ಎಂ.ವಿ ಯವರ ದೂರ ದೃಷ್ಟಿಗೆ ಸಾಕ್ಷಿಯಾಗಿವೆ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಯಾವ ಕೆಲಸ ಯಾವ ಹಂತದಲ್ಲಿದೆ ಎಂಬುದ್ನು ನೋಡಿಕೊಳ್ಳುವವರೇ ಇಂಜಿ ನಿಯರ್ಸ್. ಪ್ರಪಂಚದಲ್ಲಿಯೇ ಅಭಿವೃದ್ಧಿ ಕಾರ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಜ ಮನೆತನದ ಮಹಾರಾಜರೆಂದರೇ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಆಳ್ವಿಕೆಯ ಅವಧಿಯಲ್ಲಿ ಕಟ್ಟಿದ ಕಟ್ಟಡಗಳು ಶತಮಾನ ಕಳೆದಿವೆ. ಏಷ್ಯಾ ಖಂಡದಲ್ಲಿಯೇ ಮೊದಲು ಪೈಪ್‍ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಮೈಸೂರಿನಲ್ಲಿ ಎಂದರು.
ಇದೇ ವೇಳೆ ಇಂಜಿನಿಯರ್‍ಗಳಾದ ಕೆ.ಜಿ.ವಿಶ್ವನಾಥ್, ಹೆಚ್.ಎಸ್.ರಂಗ ನಾಥ್, ಶಂಕರೇಗೌಡ, ಡಾ.ಶಂಕರಯ್ಯ, ಶ್ರೀನಾಥ್, ಕೆ.ಎಲ್.ಜಯರಾಮ್, ಸುಪ್ರಿಯಾ ಸಾಲಿಯನ್ ಅವರನ್ನು ಸನ್ಮಾ ನಿಸಿ ಅಭಿನಂದಿಸಲಾಯಿತು. ಅನರ್ಹ ಶಾಸಕ ಹೆಚ್.ವಿಶ್ವನಾಥ್, ಇನ್ಸ್‍ಟಿಟ್ಯೂ ಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಮೈಸೂರು ಘಟಕದ ಅಧ್ಯಕ್ಷ ಡಾ.ಆರ್. ಸುರೇಶ್, ಕಾರ್ಯದರ್ಶಿ ಡಿ.ಕೆ.ದಿನೇಶ್ ಕುಮಾರ್, ಮಾಜಿ ಅಧ್ಯಕ್ಷ ಎಂ.ಲಕ್ಷ್ಮಣ್, ಸಂಚಾಲಕರಾದ ಕೆ.ಬಿ.ಬಾಸ್ಕರ್, ಎ.ಎಸ್. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.