ಮೈಸೂರು,ಸೆ.15(ಎಸ್‍ಪಿಎನ್)-ರಾಜ ಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಒಕ್ಕಲಿಗರ `ಧ್ವನಿ ಮತ್ತು ಸಾಧನೆ’ ಸಮಾಜದಲ್ಲಿ ಸಣ್ಣದಾಗಬಾರದು. ಹೀಗೆ ಆದರೆ, ಈ ಸಮುದಾಯವನ್ನು ನಂಬಿಕೊಂಡಿರುವ ಇತರೆ ಸಮುದಾಯಗಳ `ಧ್ವನಿ ಮತ್ತು ಸಾಧನೆ’ ಸಮಾಜದಲ್ಲಿ ಕುಂಠಿತವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮೈಸೂರು ವಿದ್ಯಾರಣ್ಯಪುರಂ ಒಕ್ಕಲಿಗರ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲೆ ಒಕ್ಕಲಿಗರ ಸಂಘದ ವತಿಯಿಂದ ಆಯೋ ಜಿಸಿದ್ದ 2018-19ನೇ ಸಾಲಿನ ಎಸ್‍ಎಸ್ ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗಳಿಗೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಒಕ್ಕಲಿಗ ಸಮುದಾಯ ಅನೇಕ ಸಾಧಕ ರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ರಾಷ್ಟ್ರಕವಿ ಕುವೆಂಪು, ಕೆ.ಎಚ್.ರಾಮಯ್ಯ, ಯಶೋಧರ ತುಳಸಿ ದಾಸಪ್ಪ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ, ಪೀಟಿಲು ಚೌಡಯ್ಯ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಅನೇಕರು ನಮ್ಮ ಸಮುದಾಯದಲ್ಲಿ ಹುಟ್ಟಿ ದೇಶ ಮೆಚ್ಚು ವಂಥ ಸಾಧನೆ ಮಾಡಿದ್ದಾರೆ. ಇವರ ಜೀವನ ಸಾಧನೆ, ಇಂದಿನ ಪೀಳಿಗೆಗೆ ಆದರ್ಶವಾಗಲಿ ಎಂದರು.
ಒಕ್ಕಲಿಗ ಸಮುದಾಯ ಸಮಾಜದ ಇತರೆ ಸಮುದಾಯಗಳನ್ನು ಒಟ್ಟಿಗೆ ಕರೆದು ಕೊಂಡು ಹೋಗುವ ಶಕ್ತಿ ಹೊಂದಿದೆ. ಅಲ್ಲದೆ, ರಾಜಕೀಯವಾಗಿಯೂ ಸದೃಢ ವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶೈಕ್ಷ ಣಿಕ ಕ್ಷೇತ್ರದಲ್ಲಿ ಮುಂದೆ ಬರಲು ಶ್ರಮಿಸ ಬೇಕು ಎಂದ ಶ್ರೀಗಳು, ಹದಿನಾಲ್ಕು ತಿಂಗಳ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಗಿ ಯಶಸ್ವಿ ಆಡಳಿತ ನೀಡಿರುವ ಜಿ.ಟಿ. ದೇವೇಗೌಡರು ರೈತ ಕುಟುಂಬದ ಹಿನ್ನೆಲೆ ಯಿಂದ ಬಂದವರು. ತಮ್ಮ ಚತುರತೆ ಯಿಂದ ರಾಜಕಾರಣದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ ಎಂದರು.
ಒಕ್ಕಲಿಗರ ಸಂಘ ಹಾಗೂ ಆದಿಚುಂಚನ ಗಿರಿ ಮಠ ಕಟ್ಟಲು ನೆರವಾದ ಹಿರಿಯ ರಾದ ಕೆ.ಎಚ್.ರಾಮಯ್ಯನವರು ಸಜ್ಜನ ವ್ಯಕ್ತಿ. ಇವರ ದೂರದರ್ಶಿತ್ವದಿಂದಾಗಿ ಇಂದು ಸಮುದಾಯ ಒಗ್ಗಟ್ಟು ಸಾಧ್ಯ ವಾಗಿದೆ ಎಂದರು.
ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ರೋಹನ್ ವಿ.ಗಂಗಡಕಾರ, ಹೆಚ್.ಕೆ.ನಮಿತ, ಎಸ್.ಸಾಗರ್, ಸ್ವಸ್ತಿಕ್ ಗೌಡ, ನಿಸರ್ಗ ಎಸ್.ಗೌಡ, ಆರ್.ಯಶ ಸ್ವಿನಿ, ಜಿ.ಶಶಾಂಕ, ಹೆಚ್.ಜಿ.ಗೌರವ್, ಎಂ. ಎನ್.ಕೀರ್ತನ, ಎಂ.ಡಿ.ಲೇಖಾ, ಕೆ.ಆರ್. ಯಶಸ್, ಕೆ.ರೋಹಿತ್‍ಗೌಡ, ಎಂ. ಚಂದನ, ಆರ್.ಮಿನುಗು, ಬಿ.ಸಂಜನ, ಆರ್.ಸಿಂಚನ, ಟಿ.ವೈ.ನಂದೀಶ್ ಗೌಡ, ಪ್ರೀತಮ್ ರಾಜ್ ಗೌಡ, ಕೆ.ಆರ್.ಯಾಶಿಕಾ, ಶ್ರೀನಿಧಿ, ಎಂ. ಮೈತ್ರಿ, ಎಸ್.ರಚನಾ, ಆರ್.ಹೇಮಶ್ರೀ, ಹೆಚ್.ಬಿ.ಡಿಂಡಿಮ, ಕೆ.ದಾಮಿನಿ, ಜಿ,ಪುರುಷೋತ್ತಮ್, ಟಿ.ಮನು ಪ್ರಿಯಾ, ವಿಸ್ಮಯ ಎಸ್.ದಿನೇಶ್, ಎಸ್.ಅನುಶ್ರೀ, ಡಿ.ಮೋಹನ್‍ಕುಮಾರ್, ಎಂ.ಜಿ.ರಾಹುಲ್, ಮಾನ್ಯ ಕೃಷ್ಣ, ಎನ್.ಆರ್.ಶಮಂತ್ ಶೌರಿ, ಎಂ.ಪಿ.ಸೃಷ್ಟಿ, ಹೆಚ್.ಎಂ.ಮೋಹನ್, ಬಿ.ಅನುಷ, ರೊಶ್ನಿ ಯು.ಎಸ್.ಗೌಡ, ಸಿ. ಕಾರ್ತಿಕ್, ಎಸ್.ಶ್ವೇತಾಂಜಲಿ, ಎಸ್. ಇಂಚರ, ರಚನಾ ಎಂ.ಗೌಡ, ಹೆಚ್.ಕೆ. ಸಿಂಚಿನ, ಕೆ.ದೀಪ್ತಿ, ಬಿ.ಎಸ್.ಮಾನಸ, ಭೂಮಿಕಾ ಅವರನ್ನು ಸನ್ಮಾನಿಸಲಾಯಿತು.
ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿ ಸಿದ ಎಸ್.ದರ್ಶನ್ ಸಮರ್ಥ, ಕೆ.ಟಿ. ಹೇಮ, ಎಂ.ಎನ್.ಐಶ್ವರ್ಯ, ಎಸ್.ಮೋನಿಕಾ, ಆಂಶಿತಾ ಅರುಣ್, ಸಿ.ಆರ್.ದಿವ್ಯಾ, ನಿಹಾರಿಕ, ಕೆ.ಪಿ.ಧನ್ಯಶ್ರೀ, ಆರ್.ತೇಜಸ್ವಿನಿ, ಕಾರ್ತಿಕ ಚಂದ್ರ, ಸುದೇಶಗೌಡ, ಬಿ.ಎಸ್. ಇಂಚರ, ಎಂ.ನೇಹ, ಲಿಖಿತ ಎಸ್.ಪ್ರಸಾದ್, ಎಸ್.ಆರ್.ಸಹನ, ಸಿ.ದಿವ್ಯ, ಡಿ.ಕೆ.ಅನನ್ಯ ರಾಜ್, ಎನ್.ಸಿಂಚನ, ಹೆಚ್.ಇ.ಅನನ್ಯ, ಎಂ.ಪಾವನ, ಎಂ.ಹೆಚ್.ಸ್ಪಂದನ, ಎಂ.ಆರ್.ತರುಣ್, ಆರ್.ಅಂಜು,ಪ್ರೇರಣ ಕುಮಾರ್, ಬಿ.ಎಂ.ಸ್ನೇಹ, ಕೆ.ಗಗನ, ಜಿ.ಮಹೇಶ್, ವಿ.ದೀಕ್ಷಿತ್, ಎನ್.ನಮ್ರತ, ವಿಜಯ. ಎಸ್.ಗೌಡ, ಕೆ.ಸೋನಿಯಾ, ಎಸ್. ಸೋನು, ಪ್ರಮೋದಿನಿ, ಹೆಚ್.ಯುಕ್ತಗೌಡ, ಸಿ.ಎಲ್.ಗಣೇಶ್, ಎಂ.ಎನ್.ಪ್ರಜ್ವಲ್ ರೂಪನಾಥ್, ಕೆ.ಎಸ್.ಅನಗ, ಎ.ಆರ್.ಮದನ್‍ಗೌಡ, ಆರ್.ನಿರೀಕ್ಷತಾ, ಆರ್.ರೋಹನ್‍ಗೌಡ ಅವರನ್ನು ಸನ್ಮಾನಿ ಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರ ಸಾಧಕರಾದ ಮೈಸೂರು ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್, ರೈತ ಮಹಿಳೆ ಕಲ್ಪನಾ ಬೊಮ್ಮೇಗೌಡ, ಡಾ.ಬಿ.ಎಸ್.ಮಂಜುನಾಥ್, ಯೋಗ ಪಟು ಹೆಚ್.ಎಸ್.ದರ್ಶನ್, ಸುಯೋಗ ಆಸ್ಪತ್ರೆ ಸಂಸ್ಥಾಪಕ ಡಾ.ಎಸ್.ಪಿ. ಯೋಗಣ್ಣ, ಎಂ.ಎನ್.ಬೋಗಯ್ಯ, ಮಹಾ ಲಿಂಗಂ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಸಿ.ಶೇಖರ್, ಕೆ.ವಿ. ಶ್ರೀಧರ್, ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಜಿ. ಕುಮಾರಗೌಡ, ಅಧ್ಯಕ್ಷ ಜಿ.ಮಂಜು, ಉಪಾಧ್ಯಕ್ಷ ಎಸ್.ಗುರುರಾಜ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಬೋರೇಗೌಡ, ಸಹ ಕಾರ್ಯದರ್ಶಿ ಪಿ.ಹೆಚ್.ರಾಜು, ಸುಶೀಲಾ ನಂಜಪ್ಪ ಸೇರಿದಂತೆ ಇತರರಿದ್ದರು.