ಕೆ.ಆರ್.ಪೇಟೆ,ಸೆ.14-ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಮತ್ತು ಅವರ ಮಕ್ಕಳ ಕಿರುಕುಳದಿಂದ ಬೇಸತ್ತಿರುವ ಜೆಡಿಎಸ್‍ನ ಇನ್ನೂ 20 ಶಾಸಕರು ನನ್ನಂತೆಯೇ ರಾಜೀನಾಮೆ ನೀಡಿ ಹೊರ ಬರಲು ಸಜ್ಜಾಗಿದ್ದಾರೆ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣ ಗೌಡ ಹೊಸ ಬಾಂಬ್ ಸಿಡಿಸಿದರು. ಕೆ.ಆರ್.ಪೇಟೆಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನಲ್ಲಿ ಎಲ್ಲವೂ ಸರಿ ಇಲ್ಲ. ಸದ್ಯದಲ್ಲಿಯೇ ಜೆಡಿಎಸ್‍ನ ಕೆಲವು ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ ಎಂದು ಹೇಳಿದರು. ಜೆಡಿಎಸ್‍ನಲ್ಲಿ ಇಷ್ಟೆಲ್ಲಾ ಬೆಳವಣಿಗೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೇ ಕಾರಣ….
ಪರಭಾಷಿಕರಿಗೂ ಕನ್ನಡ ಕಲಿಕೆಯ ವಾತಾವರಣ ಸೃಷ್ಟಿಸಿ
November 29, 2018ಕೆ.ಆರ್.ಪೇಟೆ: ಕರ್ನಾಟಕ ರಾಜ್ಯಕ್ಕೆ ಬರುವ ಪರಭಾಷಿಕರಿಗೆ ಕನ್ನಡ ಕಲಿಯದೇ ಇದ್ದರೆ, ಇಲ್ಲಿ ಉಳಿಗಾಲವಿಲ್ಲ ಎಂಬ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರು ಕನ್ನಡಿಗರ ಕೈ ತಪ್ಪುವ ಅಪಾಯವಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು. ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್ ಆವರಣದಲ್ಲಿ ತಾಲೂಕು ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಟ್ರಸ್ಟ್ ಉದ್ಘಾಟನೆಯ ಅಂಗವಾಗಿ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಿ ಅವರು ಮಾತನಾಡಿದರು. ರಾಜಧಾನಿ ಬೆಂಗಳೂರಿನಲ್ಲಿ…
ಕಳಪೆ ರಸ್ತೆ ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ
October 29, 2018ಕೆ.ಆರ್.ಪೇಟೆ: ಕಳಪೆ ಗುಣಮಟ್ಟದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ 8ನೇ ವಾರ್ಡ್‍ನ ನಿವಾಸಿಗಳು ಹಾಗೂ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು.ವಾರ್ಡ್‍ನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ ವಾರ್ಡ್‍ನ ನಿವಾಸಿಗಳು ಪುರಸಭೆ ಇಂಜಿನಿಯರ್‍ಗಳು ಮತ್ತು ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಡಾವಣೆಯ ನಿವಾಸಿ ಕುಮಾರ್ ಮಾತನಾಡಿ, ಡಾಂಬರು ರಸ್ತೆ ಕಳೆಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ತಿಂಗಳ ಹಿಂದೆ ದೂರು ನೀಡಿದ್ದೇವೆ. ಅವರು ಗುಣಮಟ್ಟದ ಕಾಮಗಾರಿ ನಡೆಸಲು…