ಮಂಡ್ಯ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಅಗತ್ಯ: ಎಂ.ಶ್ರೀನಿವಾಸ್
ಮಂಡ್ಯ

ಮಂಡ್ಯ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಅಗತ್ಯ: ಎಂ.ಶ್ರೀನಿವಾಸ್

July 2, 2018

ಮಂಡ್ಯ:  ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ನಗರ ಗಳ ನಡುವೆ ದೊಡ್ಡ ಹಳ್ಳಿಯಂತಿರುವ ಮಂಡ್ಯ ನಗರದ ಅಭಿವೃದ್ಧಿಗೆ ಪತ್ರಕರ್ತರು ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿಂದು ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ಸಹ ಕಾರ ಸಂಘ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಒಂದು ಕಾಲದಲ್ಲಿ ಪ್ರಪಂಚಕ್ಕೆ ಸಕ್ಕರೆ ನೀಡುತ್ತಿದ್ದ ಜಿಲ್ಲೆ ಇಂದು ಕೈಗಾರಿಕೆ, ವ್ಯಾಪಾರ, ಕೃಷಿಯಲ್ಲಿ ಹಿಂದುಳಿದಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ. ಸರ್ಕಾರ, ಸಚಿವರು ಮಂಡ್ಯ ಜಿಲ್ಲೆಗೆ ಮಹತ್ವ ನೀಡದಿರುವುದು ನಮ್ಮ ದೌರ್ಭಾಗ್ಯ. ಈ ನಿಟ್ಟಿನಲ್ಲಿ ಪತ್ರಕರ್ತರು ಕೂಡ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಸಮಸ್ಯೆಗಳ ಬಗ್ಗೆ ಹೆಚ್ಚೆಚ್ಚು ಬರೆದು ಸರ್ಕಾರದ ಗಮನ ಸೆಳೆಯಬೇಕು’ ಎಂದು ಹೇಳಿದರು.

ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ ‘ನಮ್ಮ ದೇಶ ಸ್ವಾತಂತ್ರ್ಯ ಪಡೆ ಯಲು ಪತ್ರಿಕೋದ್ಯಮ ತನ್ನದೇ ಆದ ಪ್ರಭಾವ ಬೀರಿದೆ. ಮೊದಲು ಪತ್ರಿಕೆ ನಡೆಸು ವುದು ಬಹಳ ಕಷ್ಟವಾಗಿತ್ತು. ಹರಿದ ಬಟ್ಟೆ ಹಾಕಿಕೊಂಡು ಪತ್ರಕರ್ತರು ದೇಶ ಕಟ್ಟಲು ಸಹಕಾರ ನೀಡಿದ್ದಾರೆ. ಗಾಂಧೀಜಿ ಕೂಡ ಪತ್ರಕರ್ತರಾಗಿದ್ದರು. ಇಂದು ಪತ್ರಿಕೆ ನಡೆ ಸಲು ಬೇಕಾದ ಎಲ್ಲಾ ಸೌಲಭ್ಯಳು ಸುಲಭ ವಾಗಿ ದೊರೆಯುತ್ತಿವೆ. ಜಾಹೀರಾತು, ವೇತನ ಎಲ್ಲವೂ ಸಿಗುತ್ತಿವೆ. ಹೀಗಾಗಿ ಪತ್ರಕರ್ತರು ಜವಾಬ್ದಾರಿಯಿಂದ ನಡೆಯ ಬೇಕು’ ಎಂದರು.

‘ವಿಶ್ವವೇ ಕತ್ತಲಲ್ಲಿ ಮುಳುಗಿದ ಸಂದರ್ಭ ದಲ್ಲಿ ನಮ್ಮ ಜಿಲ್ಲೆಯ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದಿಸಿ ಬೆಳಕು ನೀಡಲಾ ಯಿತು. ಜಿಲ್ಲೆಯ ಬೆಟ್ಟ, ಗುಡ್ಡ, ನದಿ, ತೊರೆ, ಕೆರೆಗಳು ಸುಂದರವಾಗಿದೆ. ನಮ್ಮ ಜಿಲ್ಲೆ ಯಲ್ಲಿ ಸಾವಿರಾರು ವರ್ಷ ಇತಿಹಾಸ ಹೊಂದಿದ ದೇವಾಲಯಗಳಿವೆ. ಸಾತಂತ್ರ್ಯ ಹೋರಾಟಗಾರರಿದ್ದಾರೆ. ಗೋಖಲೆ, ಗಾಂಧಿ ಹಾಗೂ ತಿಲಕ್ ಅವರ ಲೇಖನ ಪ್ರಕಟಿಸುತ್ತಿದ್ದ ಪತ್ರಕರ್ತ ಅಳಸಿಂಗ ಪೆರುಮಾಳ್ ಅವರು ಮಂಡ್ಯ ಜಿಲ್ಲೆಯ ಅರಕೆರೆಯವರು. ಇವರು ಸ್ವಾಮಿ ವಿವೇ ಕಾನಂದರಿಗೂ ಸ್ಫೂರ್ತಿಯಾಗಿದ್ದರು’ ಎಂದರು.

ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ನಿವೃತ್ತ ಉಪ ನಿರ್ದೇಶಕ ಪಿ.ಎನ್.ಗುರು ಮೂರ್ತಿ ಮತ್ತು ಪ್ರಜಾವಾಣಿ ಜಿಲ್ಲಾ ವರದಿ ಗಾರ ಯೋಗೇಶ್‍ಅವರನ್ನು ಆತ್ಮೀಯ ವಾಗಿ ಅಭಿನಂದಿಸಲಾಯಿತು.ವೇದಿಕೆಯಲ್ಲಿ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಕೌಡ್ಲೆ ಚೆನ್ನಪ್ಪ, ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ನಾಗಯ್ಯ, ಬಸವರಾಜ್ ಹೆಗಡೆ ಮತ್ತಿತರರು ಇದ್ದರು.

Translate »