ಗುಂಡ್ಲುಪೇಟೆ ಬಳಿ ಬೈಕ್‍ಗಳ ಮುಖಾಮುಖಿ ಡಿಕ್ಕಿ ಇಬ್ಬರು ಸವಾರರು ಸ್ಥಳದಲ್ಲೇ ಸಾವು
ಚಾಮರಾಜನಗರ

ಗುಂಡ್ಲುಪೇಟೆ ಬಳಿ ಬೈಕ್‍ಗಳ ಮುಖಾಮುಖಿ ಡಿಕ್ಕಿ ಇಬ್ಬರು ಸವಾರರು ಸ್ಥಳದಲ್ಲೇ ಸಾವು

June 23, 2018

ಗುಂಡ್ಲುಪೇಟೆ: ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರೂ ಸ್ಥಳದಲ್ಲಿಯೇ ಸಾವಿಗೀಡಾ ಗಿರುವ ಧಾರುಣ ಘಟನೆ ತಾಲೂಕಿನ ತೆಂಕಲಹುಂಡಿ ಸಮೀಪ ನಡೆದಿದೆ.

ತಾಲೂಕಿನ ತೆಂಕಲಹುಂಡಿ ಗ್ರಾಮದ
ಶಿವು, ಗುಂಡ್ಲುಪೇಟೆಯ ಮಹದೇವು ಮೃತಪಟ್ಟವರು. ಶಿವು ತನ್ನ ಸ್ನೇಹಿತರಾದ ಸಚಿನ್ ಹಾಗೂ ರಮೇಶ್ ಎಂಬುವರೊಡನೆ ಬೈಕಿನಲ್ಲಿ ಗ್ರಾಮದತ್ತ ತೆರಳುತ್ತಿದ್ದರು.ಈ ವೇಳೆ ಇನ್ನೊಂದು ಬೈಕಿನಲ್ಲಿ ಎದುರಿನಿಂದ ಬರುತ್ತಿದ್ದ ಪಟ್ಟಣದ ವಾಸಿ ಪೇಂಟರ್ ಮಹದೇವು ಎಂಬುವರ ಬೈಕ್‍ಗೆ ಮುಖಾಮುಖಿ ಡಿಕ್ಕಿಯಾಗಿದೆ. ಎರಡೂ ಬೈಕ್‍ಗಳ ಡಿಕ್ಕಿಯ ರಭಸಕ್ಕೆ ಎರಡೂ ಬೈಕುಗಳ ಸವಾರರಾದ ಶಿವು(20) ಹಾಗೂ ಮಹದೇವು (25) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಮೃತ ಶಿವು ಸ್ನೇಹಿತರಾದ ಸಚಿನ್ ಹಾಗೂ ರಮೇಶ್ ಇಬ್ಬರಿಗೂ ತೀವ್ರ ಪೆಟ್ಟು ಬಿದ್ದಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಬೈಕ್ ಸವಾರರಾದ ಶಿವು ಮತ್ತು ಮಹದೇವು ಅವರ ಕಳೇಬರಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸ ಲಾಯಿತು. ಈ ಬಗ್ಗೆ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »