ಪ್ರಾಚೀನ, ಪಾರಂಪರಿಕ ಮಹತ್ವ ವಸ್ತು ಸಂಗ್ರಹಣೆಗೆ ಸಹಕಾರ ಕೋರಿಕೆ
ಚಾಮರಾಜನಗರ

ಪ್ರಾಚೀನ, ಪಾರಂಪರಿಕ ಮಹತ್ವ ವಸ್ತು ಸಂಗ್ರಹಣೆಗೆ ಸಹಕಾರ ಕೋರಿಕೆ

June 23, 2018

ಚಾಮರಾಜನಗರ: ಜಿಲ್ಲೆಯಲ್ಲಿ ದೊರೆಯುವ ಪ್ರಾಚೀನ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವದ ವಸ್ತುಗಳ ಸಂಗ್ರಹಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ವಸ್ತುಗಳು ಲಭಿಸಿದಲ್ಲಿ ಯಳಂದೂರು ಪಟ್ಟಣದಲ್ಲಿರುವ ದಿವಾನ್ ಪೂರ್ಣಯ್ಯ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ನೀಡುವಂತೆ ಕೋರಲಾಗಿದೆ.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಯಳಂದೂರು ಪಟ್ಟಣದಲ್ಲಿ ದಿವಾನ್ ಪೂರ್ಣಯ್ಯನವರ ಹೆಸರಿನಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಲಾಗಿದೆ. ಇದರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜಿಲ್ಲೆಯಲ್ಲಿ ಇರುವ ಏಕೈಕ ಸರ್ಕಾರಿ ವಸ್ತುಸಂಗ್ರಹಾಲಯ ಇದಾಗಿದ್ದು, ಇದನ್ನು ಆಕರ್ಷಣೀಯ ಪ್ರವಾಸಿ ತಾಣ ಹಾಗೂ ಶೈಕ್ಷಣ ಕ ಚಟುವಟಿಕೆಗಳ ವಸ್ತು ಸಂಗ್ರಹಾಲ ಯವನ್ನಾಗಿ ಪರಿವರ್ತಿಸುವುದು ಇಲಾಖೆಯ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದೊರೆಯುವ ಪ್ರಾಚೀನ ಐತಿಹಾಸಿಕ ಪಾರಂಪರಿಕ ಮಹತ್ವದ ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಮಾಡಲಾಗುತ್ತದೆ. ಸಾರ್ವಜನಿಕರು ಖಾಸಗಿ ಸಂಸ್ಥೆಗಳು ಯಾರೇ ಇರಲಿ ಅವರಲ್ಲಿ ಇರಬಹುದಾದ ಶಾಸನಗಳು, ವೀರಗಲ್ಲು, ಸತಿಕಲ್ಲು, ಮೂರ್ತಿ ಶಿಲ್ಪಗಳು, ತಾಳೆಗರಿಗಳು, ನಾಣ್ಯಗಳು, ಆಯುಧಗಳು, ಕಂಚಿನ ವಿಗ್ರಹಗಳು ಹಾಗೂ 100 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಪ್ರಾಚ್ಯ ವಸ್ತುಗಳು ಕಂಡುಬಂದಲ್ಲಿ ನೀಡಬೇಕು. ಅಲ್ಲದೆ ಮುಖ್ಯವಾಗಿ ದಿವಾನ್ ಪೂರ್ಣಯ್ಯನವರಿಗೆ ಸಂಬಂಧಿಸಿದ ಪುರಾತನ ವಸ್ತುಗಳು ಕಂಡುಬಂದಲ್ಲಿ ಯಳಂದೂರಿನ ದಿವಾನ್ ಪೂರ್ಣಯ್ಯ ಸರ್ಕಾರಿ ವಸ್ತುಸಂಗ್ರಹಾಲಯದ ಮೇಲ್ವಿಚಾರಕರು ಅಥವಾ ಕ್ಯೂರೇಟರ್ ಅವರಿಗೆ ತಲುಪಿಸುವಂತೆ ಕೋರಲಾಗಿದೆ.

ವಿವರಗಳಿಗೆ ದೂ.ಸಂಖ್ಯೆ 0821-2424673, ಮೊಬೈಲ್ ಸಂಖ್ಯೆ 7829404796 ಅಥವಾ 7411517651 ಸಂಪರ್ಕಿಸುವಂತೆ ಕೋರಲಾಗಿದೆ.

Translate »