ದೇವಸ್ಥಾನ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ
ಚಾಮರಾಜನಗರ

ದೇವಸ್ಥಾನ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ

June 23, 2018

ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಲ್ಲಿ ಕ್ಯಾತಲಿಂಗೇಶ್ವರ ಹಾಗೂ ಬನಶಂಕರಿಯಮ್ಮ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಇಂದು ಗ್ರಾಮಸ್ಥರು ಗುದ್ದಲಿ ಪೂಜೆ ನಡೆಯಿತು.

ಪುರಾತನ ಕಾಲದ ಪ್ರಸಿದ್ಧ ದೇವಸ್ಥಾನವಾದ ಕ್ಯಾತಲಿಂಗೇಶ್ವರ ಹಾಗೂ ಬನಶಂಕರಿ ಯಮ್ಮ ದೇವಸ್ಥಾನಗಳು ಶಿಥಿಲಾವಸ್ಥೆಯಾದ್ದರಿಂದ ಗ್ರಾಮದ ಎಲ್ಲಾ ಕೋಮುವಾರರು ಸೇರಿ ಒಮ್ಮತ ಮನಸ್ಸಿನಿಂದ ತೀರ್ಮಾನಿಸಿ ಪುರಾತನ ದೇವಾಲಯಗಳನ್ನು ಸ್ವಯಂ ಪ್ರೇರಿತರಾಗಿ ಜೀರ್ಣೋದ್ಧಾರ ಮಾಡಲು ನಿರ್ಧರಿಸಿ ಗುದ್ದಲಿ ಪೂಜೆ ನೆರವೇರಿಸಿದರು.

ವಾರಕ್ಕೆರಡು ಬಾರಿ ವಿಶೇಷ ಪೂಜೆಗಳು ವರ್ಷಕ್ಕೊಮ್ಮೆ ಶಿವರಾತ್ರಿ ಹಬ್ಬದಂದು ಜಾತ್ರೆಯ ರೀತಿಯಲ್ಲೇ ಹಬ್ಬವನ್ನು ಆಚರಿಸುತ್ತಾರೆ ಹಾಗೂ ಎಂದಿನಂತೆ ದೇವಸ್ಥಾನ ಸದಾ ಭಕ್ತರಿಗೆ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಕೋಮಿನ ಯಜಮಾನರುಗಳು, ಮುಖಂ ಡರು, ಗೌಡಿಕೆಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Translate »