ಜೂ.25, ಮತ್ತೊಬ್ಬ ಮಾಯಿ ನಾಟಕ ಪ್ರದರ್ಶನ
ಚಾಮರಾಜನಗರ

ಜೂ.25, ಮತ್ತೊಬ್ಬ ಮಾಯಿ ನಾಟಕ ಪ್ರದರ್ಶನ

June 23, 2018

ಚಾಮರಾಜನಗರ: ನಗರದ ಶಾಂತಲಾ ಕಲಾವಿದರ ಸಂಸ್ಥೆಯ ಆಶ್ರಯ ದಲ್ಲಿ ನಗರದಲ್ಲಿ ಜೂನ್ 25ರಂದು ‘ಆಟ-ಮಾಟ’ ತಂಡದಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ನಗರದ ಭ್ರಮರಾಂಬ ಬಡಾವಣೆಯ 3ನೇ ಕ್ರಾಸ್‍ನಲ್ಲಿ ಇರುವ ಕೆ.ವೆಂಕಟರಾಜು ಅವರ ನಿವಾಸ ‘ನೆಲೆ’ಯಲ್ಲಿ ಅಂದು ಸಂಜೆ 7.30ಕ್ಕೆ ನಾಟಕ ಆರಂಭವಾಗಲಿದೆ. ಧಾರವಾಡದ ಆಟ-ಮಾಟ ಸಾಂಸ್ಕøತಿಕ ಪಥ ತಂಡದವರು ‘ಮತ್ತೊಬ್ಬ ಮಾಯಿ’ ನಾಟಕವನ್ನು ಅಭಿನಯಿಸ ಲಿದ್ದಾರೆ. ರಾಘವೇಂದ್ರ ಪಾಟೀಲ ಅವರ ಮೂಲಕಥೆ ಮಹದೇವ ಹಡಪಥ್ ಅವರ ಪರಿಕಲ್ಪನೆಯ ನಿರ್ದೇಶನದ ನಾಟಕ ಇದಾ ಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ದೇಣಿಗೆಯನ್ನು ನೀಡಬಹುದು. ರಂಗಾಸಕ್ತರು ಆಗಮಿಸುವಂತೆ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಕೋರಿದ್ದಾರೆ.

Translate »