ಚಾಮರಾಜನಗರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಹಕಾರ ಬ್ಯಾಂಕ್ ಹಾಗೂ ಪಿಕಾರ್ಡ್ ಬ್ಯಾಂಕ್‍ಗಳಿಂದ ಮಧ್ಯಮಾವಧಿ, ದೀರ್ಘಾ ವಧಿ ಸಾಲಗಳನ್ನು ಜನವರಿ ಅಂತ್ಯಕ್ಕೆ ಸುಸ್ತಿಯಾಗಿರುವ ಸಾಲಗಳನ್ನು ಜೂ.30 ರೊಳಗೆ ಸಂಪೂರ್ಣ ಅಸಲನ್ನು ರೈತರು ಪಾವತಿ ಮಾಡಿದರೆ ಸರ್ಕಾ ರವು ಬಡ್ಡಿಯನ್ನು ಭರಿಸಲಿದೆ.
ಮೂರು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆಸಾಲ ಯೋಜನೆ, ಸ್ವ ಸಹಾಯ ಗುಂಪು, ಕಾಯಕ ಯೋಜನೆಯ ಚಾಲ್ತಿ ಸಾಲದ ಕಂತುಗಳನ್ನು ಜೂ.30ರೊಳಗೆ ಪಾವತಿ ಸಿದರೆ, ಬಡ್ಡಿ ಸಹಾಯ ಧನವನ್ನು ಸರ್ಕಾರದಿಂದ ಭರಿಸಲಾಗುವುದು. ರೈತರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಸಹಕಾರ ಸಂಘಗಳ ಉಪ ನಿಬಂಧಕ ಜೆ.ವಿಕ್ರಮರಾಜ್ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.