ಇಂದು ಮೈಸೂರಿನ ಹಲವೆಡೆ ನೀರು ವ್ಯತ್ಯಯ
ಮೈಸೂರು

ಇಂದು ಮೈಸೂರಿನ ಹಲವೆಡೆ ನೀರು ವ್ಯತ್ಯಯ

May 24, 2020

ಮೈಸೂರು, ಮೇ23- ಎರಡು ದಿನಗಳ ಹಿಂದೆ ಬಿರುಗಾಳಿ-ಮಳೆಗೆ ಮೈಸೂರು ನಗರಕ್ಕೆ ನೀರು ಸರಬರಾಜಾಗುವ ಬೆಳಗೊಳ ಯಂತ್ರಾಗಾರದಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದರಿಂದ ವಿದ್ಯುತ್ ಸರಬರಾಜು ಕಡಿತವಾಗಿದ್ದು, ನಗರದ ಹಲವು ಬಡಾವಣೆಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮೇ 24ರಂದು ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ ಎಬಿಸಿ ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ತಿಲಕ್‍ನಗರ, ಬಡೇಮಕಾನ್, ಹಲೀಂನಗರ, ದೇವರಾಜ ಮೊಹಲ್ಲಾ, ನಜರ್‍ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ಲೂರ್ದ್ ನಗರ, ಮೀನಾ ಬಜಾರ್, ವಾರ್ಡ್ ಸಂಖ್ಯೆ 8, 17, 18, 19, 23ರಿಂದ 27ರವರೆಗೆ 40, 41, 55, 60, 61 ಹಾಗೂ ಮೇಟಗಳ್ಳಿ ಮತ್ತು ಹೆಬ್ಬಾಳು ಕೈಗಾರಿಕಾ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಾಣಿ ವಿಲಾಸ ವಾಟರ್ ವಕ್ರ್ಸ್‍ನ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »