ವಿದ್ಯುತ್ ಪೂರೈಕೆ ಮಾದರಿ ಗ್ರಾಮೀಣ ಭಾಗಕ್ಕೆ ನೀರು ಪೂರೈಕೆ: ವಾಟರ್ ಗ್ರಿಡ್ ಸ್ಥಾಪನೆ
ಮೈಸೂರು

ವಿದ್ಯುತ್ ಪೂರೈಕೆ ಮಾದರಿ ಗ್ರಾಮೀಣ ಭಾಗಕ್ಕೆ ನೀರು ಪೂರೈಕೆ: ವಾಟರ್ ಗ್ರಿಡ್ ಸ್ಥಾಪನೆ

May 18, 2019

ಬೆಂಗಳೂರು: ವಿದ್ಯುತ್ ಪೂರೈಕೆ ಮಾದರಿಯಲ್ಲೇ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಸಲು ವಾಟರ್ ಗ್ರಿಡ್ ಸ್ಥಾಪಿಸಿ, ಜಲಕ್ರಾಂತಿ ಮಾಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ನದಿ ಮೂಲ ಮತ್ತು ಜಲಾಶಯ ಪಾತ್ರಗಳಿಂದ ನೇರವಾಗಿ ಪೈಪ್ ಲೈನ್ ಅಳವಡಿಸಿ, ಕುಡಿಯುವ ನೀರು ಕಲ್ಪಿಸುವುದೇ ಗ್ರಿಡ್‍ನ ಉದ್ದೇಶವಾಗಿದೆ. ಬರುವ ಸೆಪ್ಟೆಂಬರ್‍ನಿಂದಲೇ ಗ್ರಿಡ್ ಸ್ಥಾಪನೆ ಗೊಂಡು ಯೋಜನೆ ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕುಡಿಯುವ ನೀರು ಸಮಸ್ಯೆ ಬಗೆಹರಿ ಸುವ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಯವರು ನೀಡಿದ ಸಲಹೆಯನ್ನು ಮುಖ್ಯಮಂತ್ರಿ ಯವರು ಸಮ್ಮತಿಸಿದ್ದಲ್ಲದೆ, ತಕ್ಷಣವೇ ಯೋಜನೆಗೆ ಚಾಲನೆ ನೀಡುವಂತೆ ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆಗೆ ಆದೇಶ ಮಾಡಿದ್ದಾರೆ. ಅಣೆಕಟ್ಟುಗಳಿಂದ ನಾಲೆಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತಿತ್ತು. ಯಾವ ಉದ್ದೇ ಶಕ್ಕೆ ನೀರು ಹರಿಸಲಾಗುತ್ತಿತ್ತು. ಆ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಫಲ ಕೊಡುತ್ತಿರ ಲಿಲ್ಲ. ನಾಲೆಗಳಲ್ಲಿ ಬರುವ ನೀರನ್ನು ರೈತರು ಕೃಷಿ ಚಟುವಟಿಕೆಗೆ ಕದ್ದು ಬಳಕೆ ಮಾಡಿ ಕೊಳ್ಳುತ್ತಿದ್ದರು, ಜೊತೆ ಜೊತೆಯಲ್ಲೇ ಬಿಸಿ ಲಿನ ಬೇಗೆಗೆ ಆವಿಯಾಗಿ ನೀರು ಪೋಲಾಗು ತ್ತಿತ್ತು. ಸೋರಿಕೆ ಮತ್ತು ನೀರು ಕದಿಯುವುದನ್ನು ತಡೆಗಟ್ಟಿ ನಿರ್ದಿಷ್ಟ ಸ್ಥಳಕ್ಕೆ ಇಂತಿಷ್ಟು ವೇಳೆಯಲ್ಲೇ ತಲುಪಿಸ ಬೇಕೆಂಬ ಉದ್ದೇಶದಿಂದ ಕೊಳವೆ ಪೈಪ್‍ಲೈನ್ ಅಳವಡಿಕೆ ಕಾರ್ಯ ಆರಂಭಗೊಳ್ಳ ಲಿದೆ. ಯೋಜನೆ ಕೈಗೆತ್ತಿಕೊಳ್ಳಲು 1360 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಆದೇಶ ಮಾಡಲಾಗಿದೆ. ಗ್ರಿಡ್ ಆರಂಭಗೊಂಡು, ಪೈಪ್‍ಲೈನ್ ಮೂಲಕ ನೀರು ವಿತರಿಸುವುದರಿಂದ ಎಂತಹ ಬರ ಮತ್ತು ಕಡು ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.

ಬರ ಮತ್ತು ಬೇಸಿಗೆ ಸಂದರ್ಭದಲ್ಲಿ ಕುಡಿಯಲೆಂದೇ ಜಲಾಶಯ ನೀರನ್ನು ಮೀಸಲಿಟ್ಟರೂ, ಅದನ್ನು ನಾಲೆಗಳ ಮೂಲಕ ಹರಿದು ಬಿಟ್ಟ ಸಂದರ್ಭದಲ್ಲಿ ಸೋರಿಕೆ ಮತ್ತು ಕಳ್ಳತನವಾಗುತ್ತದೆ. ಅದನ್ನು ತಪ್ಪಿಸಲು ಮುಂದಾದರೆ ರೈತರು ತಿರುಗಿ ಬೀಳು ತ್ತಾರೆ. ಇಂತಹ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪೈಪ್‍ಲೈನ್ ಅಳವಡಿಸುವುದು ಸೂಕ್ತ ಎಂದು ಮುಖ್ಯ ಕಾರ್ಯದರ್ಶಿಯವರು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟರು. ಪೈಪ್‍ಲೈನ್ ಮೂಲಕ ನೀರು ಹರಿಸಲು ವಿದ್ಯುತ್ ಗ್ರಿಡ್ ಮಾದರಿ ಯಲ್ಲೆ ವಾಟರ್ ಗ್ರಿಡ್ ಸ್ಥಾಪಿಸಬೇಕು ಮತ್ತು ಅಲ್ಲಲ್ಲಿ ಬೃಹತ್ ಪ್ರಮಾಣದಲ್ಲಿ ಜಲ ಸಂಗ್ರಹಾಗಾರಗಳನ್ನು ಸ್ಥಾಪಿಸಿ, ಮಳೆಗಾಲದಲ್ಲಿ ಇವುಗಳಿಗೆ ನೀರು ಸಂಗ್ರಹಿಸಿಟ್ಟುಕೊಳ್ಳ ಬೇಕು. ಇದರ ಜೊತೆ ಜೊತೆಯಲ್ಲೇ ಮಳೆಗಾಲದಲ್ಲಿ ಕೆರೆಗಳಿಗೂ ನೀರು ತುಂಬಲು ಸಾಧ್ಯವಾದಷ್ಟು ಪೈಪ್‍ಲೈನ್ ಅಳವಡಿಸಬೇಕೆಂದು ನೀಡಿದ ಸಲಹೆಗೆ ಸರ್ಕಾರ ಸಮ್ಮತಿಸಿದೆ. ಅಷ್ಟೇ ಅಲ್ಲ ಯೋಜನೆ ಅನುಷ್ಠಾನವನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ.

Translate »