ಎಪಿಎಂಸಿಯಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ರೈತರ ಪರದಾಟ
ಚಾಮರಾಜನಗರ

ಎಪಿಎಂಸಿಯಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ರೈತರ ಪರದಾಟ

July 5, 2018

ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಸಹ ಕುಡಿಯಲು ನೀರು ದೊರ ಕುತ್ತಿಲ್ಲ ಹಾಗೂ ಶುಚಿತ್ವ ಕಾಪಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಮಾರುಕಟ್ಟೆ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಯಿತು. ಇಲ್ಲಿಗೆ ಬರುವ ಕಾರ್ಮಿ ಕರು, ರೈತರು, ವರ್ತಕರು ಹಾಗೂ ವಾಹನ ಗಳ ಚಾಲಕರು ಇಲ್ಲಿ ತಮ್ಮ ದಾಹ ತಣಿಸಿ ಕೊಳ್ಳಲು ಸಾಧ್ಯವಾಗಿತ್ತು. ಆದರೆ ಇದನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮವಾಗಿ ಕೇವಲ ಮೂರು ತಿಂಗಳು ಕಳೆಯುತ್ತಿದ್ದಂತೆ ಕೆಟ್ಟು ನಿಂತಿದೆ. ಇದರಿಂದ ಬೆಳಗ್ಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ರೈತರು ಹಾಗೂ ಇತ ರರಿಗೆ ತೀವ್ರ ತೊಂದರೆಯಾಗುತ್ತಿದೆ.

ಪ್ರಾಂಗಣದಲ್ಲಿ ಕೊಳವೆ ಬಾವಿಯಿದ್ದರೂ ಇದರಿಂದ ಕುಡಿಯುವ ನೀರು ಸರಬ ರಾಜು ಮಾಡಲು ವ್ಯವಸ್ಥೆ ಮಾಡಿಲ್ಲ. ಕಬಿನಿ ಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮಾರ್ಗದಲ್ಲಿ ನೀರಿನ ಸಂಪರ್ಕ ಪಡೆದುಕೊಳ್ಳಲಾಗಿದೆ.
ಆದರೆ ವಾರಕ್ಕೋಮ್ಮೆಯೋ, ಹದಿನೈದು ದಿನಗಳಿಗೋ ಸರಬರಾಜಾಗುವ ನೀರನ್ನು ಹಿಡಿದು ಸಂಗ್ರಹಿಸಲು ವರ್ತಕರಿಂದ ಸಾಧ್ಯ ವಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಎಪಿಎಂಸಿ ಮಾರುಕಟ್ಟೆ ಆಡಳಿತ ಮಂಡ ಳಿಯ ಗಮನಕ್ಕೆ ತಂದಿದ್ದರೂ ಯಾವುದೇ ಉಪಯೋಗವಾಗಿಲ್ಲ. ಪ್ರತಿದಿನವೂ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಮಾರುಕಟ್ಟೆಯಲ್ಲಿ ರೈತರಿಗೆ ಕನಿಷ್ಠ ಕುಡಿಯುವ ನೀರು ಪೂರೈಕೆ ಮಾಡಲೂ ಸಾಧ್ಯವಾಗುತ್ತಿಲ್ಲ.

ಅಲ್ಲದೆ ಪ್ರಾಂಗಣದಲ್ಲಿ ಕೊಳೆತ ತರ ಕಾರಿಗಳನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದು, ಪ್ರತಿ ದಿನವೂ ಸ್ವಚ್ಛಮಾಡುತ್ತಿಲ್ಲ. ಸ್ವಚ್ಛತೆ ನಿರ್ವಹಣೆಯ ಗುತ್ತಿಗೆ ಪಡೆದವರು ಅಸಮರ್ಪಕವಾಗಿ ಕಾರ್ಯನಿರ್ವಸುತ್ತಿರು ವುದರಿಂದ ಅಶುಚಿತ್ವ ತಾಂಡವವಾಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಆದ್ದರಿಂದ ಇನ್ನಾದರೂ ಶುದ್ಧ ಕುಡಿ ಯುವ ನೀರು ಸರಬರಾಜು ಪ್ರಾರಂಭಿಸ ಬೇಕು ಹಾಗೂ ಶುಚಿತ್ವ ಕಾಪಾಡಲು ಆದ್ಯತೆ ನೀಡಬೇಕು ಎಂದು ರೈತ ಮುಖಂಡ ಮಾಡ್ರ ಹಳ್ಳಿ ಮಹದೇವಪ್ಪ ಒತ್ತಾಯಿಸಿದ್ದಾರೆ.

Translate »