ಜು.27, ಚಾ.ನಗರದಲ್ಲಿ ಸಂಗೀತ ಜಾತ್ರೆ
ಚಾಮರಾಜನಗರ

ಜು.27, ಚಾ.ನಗರದಲ್ಲಿ ಸಂಗೀತ ಜಾತ್ರೆ

July 5, 2018

ಚಾಮರಾಜನಗರ:  ಶ್ರೀಚಾಮರಾಜೇಶ್ವರಸ್ವಾಮಿ ಆಷಾಢಮಾಸದ ರಥೋ ತ್ಸವದ ಪ್ರಯುಕ್ತ ಕರ್ನಾಟಕ ಸುಗಮ ಸಂಗೀತ ಪರಿಷತ್ ವತಿಯಿಂದ ಜುಲೈ 27 ರಂದು ಸುಗಮ ಸಂಗೀತ ಜಾತ್ರೆ ಹಮ್ಮಿ ಕೊಳ್ಳಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‍ನ ನೂತನ ಜಿಲ್ಲಾಧ್ಯಕ್ಷ ಅರುಣ್‍ಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಸ ಸಭಾಂಗಣದಲ್ಲಿ ಸುಗಮ ಸಂಗೀತ ಪರಿಷತ್‍ನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜು.27 ರಂದು ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ಉದ್ಘಾ ಟನೆ ಹಾಗೂ ನಾಡಿನ ಸುಪ್ರಸಿದ್ದ ಗಾಯಕ, ಗಾಯಕಿಯರಿಂದ ಸಂಗೀತ ಜಾತ್ರೆ ಮತ್ತು ವಾದ್ಯಕಲಾವಿದರಿಂದ ವಾದ್ಯವೈವಿಧ್ಯಮಯ ಕಾರ್ಯಕ್ರಮ ಅಯೋಜಿಲಾಗಿದೆ ಎಂದರು.

ಅಂದು ನಡೆಯುವ ಸಂಗೀತ ಜಾತ್ರೆ ಸಮಾ ರಂಭವನ್ನು ಪರಿಷತ್‍ನ ರಾಜ್ಯ ಗೌರವಾ ಧ್ಯಕ್ಷ ಕರ್ನಾಟಕ ಕಲಾಶ್ರೀ ವೈ.ಕೆ.ಮುದ್ದುಕೃಷ್ಣ ಉದ್ಘಾಟಿಸಲಿದ್ದಾರೆ. ಸಂಗೀತ ಜಾತ್ರೆಯಲ್ಲಿ ಪ್ರಸಿದ್ಧ ಸುಗಮ ಸಂಗೀತ ಕಲಾವಿದರಾದ ಡಾ. ಕಿಕ್ಕೇರಿಕೃಷ್ಣಮೂರ್ತಿ, ನಾಡೋಜ ಡಾ.ಬಿ.ಕೆ. ಸುಮಿತ್ರಾ, ಶ್ರೀನಿವಾಸ ಉಡುಪ, ಪಂಚ ಮಹಳಿಬಂಡಿ, ಮೃತ್ಯುಂಜಯದೊಡ್ಡವಾಡ, ಅಪರ್ಣ ಮೊದಲಾದವರು ಭಾಗವಹಿಸಲಿ ದ್ದಾರೆ. ಈ ಸಮಾರಂಭಕ್ಕೆ ಜಿಲ್ಲೆಯ ಸಚಿವರು, ಸಂಸದರು ಹಾಗೂ ಜನಪ್ರತಿ ನಿಧಿಗಳು, ಸಂಘ-ಸಂಸ್ಥೆಗಳ ಪದಾಧಿ ಕಾರಿಗಳು, ಜಿಲ್ಲೆಯ ಕಲಾವಿದರುಗಳನ್ನು ಆಹ್ವಾನಿಸಲಾಗುವುದು ಎಂದರು.

ಸನ್ಮಾನ: ಕರ್ನಾಟಕ ಸುಗಮ ಸಂಗೀತ ಪರಿಷತ್‍ಗೆ ಆಯ್ಕೆಯಾದ ನೂತನ ಜಿಲ್ಲಾ ಧ್ಯಕ್ಷ ಅರುಣ್‍ಕುಮಾರ್, ಪ್ರಧಾನ ಕಾರ್ಯ ದರ್ಶಿ ಲತಾಪುಟ್ಟಸ್ವಾಮಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಸಲಾಯಿತು.

ಸನ್ಮಾನ ಸ್ವೀಕರಿಸಿದ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಲತಾಪುಟ್ಟಸ್ವಾಮಿ ಮಾತ ನಾಡಿ, ತಮ್ಮನ್ನು ಸುಗಮ ಸಂಗೀತ ಪರಿ ಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ನೇಮಕ ಮಾಡಿರುವುದು ತುಂಬಾ ಸಂತಸವಾಗಿದ್ದು, ಎಲ್ಲರ ವಿಶ್ವಾಸ ಪಡೆದು ಜಿಲ್ಲೆಯಲ್ಲಿ ಸುಗಮ ಸಂಗೀತ ಕಲೆ ಯನ್ನು ಬೆಳೆಸಲು ಶ್ರಮವಹಿಸುತ್ತೇನೆ ಎಂದರು.

ಸಭೆಯಲ್ಲಿ ಗಾಯಕ ಸಿ.ಎಂ. ನರ ಸಿಂಹಮೂರ್ತಿ, ನಗರಸಭಾ ಮಾಜಿ ಸದ ಸ್ಯರಾದ ಗಣೇಶ್‍ದೀಕ್ಷಿತ್, ಕಸಾಪ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಜಿಲ್ಲಾ ಕಾರ್ಯ ದರ್ಶಿ ಜಿ.ರಾಜಪ್ಪ, ವೆಂಕಟೇಶ್ ಮೂರ್ತಿ, ಜೆ.ಬಿ.ಮಹೇಶ್, ಮನೋಜ್ ಗೌಡ, ಪುಟ್ಟಸ್ವಾಮಿ ಇತರರು ಹಾಜರಿದ್ದರು.

Translate »