ಕೆ.ಎಸ್.ಆರ್.ಟಿ.ಸಿ: ಟಿಕೆಟ್ ಪಡೆಯದ ಪ್ರಯಾಣಿಕರಿಂದ 38420 ರೂ. ದಂಡ ವಸೂಲಿ
ಚಾಮರಾಜನಗರ

ಕೆ.ಎಸ್.ಆರ್.ಟಿ.ಸಿ: ಟಿಕೆಟ್ ಪಡೆಯದ ಪ್ರಯಾಣಿಕರಿಂದ 38420 ರೂ. ದಂಡ ವಸೂಲಿ

July 5, 2018

ಚಾಮರಾಜನಗರ: ಸಾರಿಗೆ ನಿಗಮದ ಚಾಮರಾಜನಗರ ವಿಭಾಗವು ಜೂನ್ ತಿಂಗಳಲ್ಲಿ ನಿಗಮದ ಬಸ್ಸುಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ 315 ಪ್ರಯಾಣಿಕ ರಿಂದ 38420 ರೂ. ದಂಡವನ್ನು ವಸೂಲಿ ಮಾಡಿದೆ. ಜೂನ್ ತಿಂಗಳಲ್ಲಿ 2072 ಬಸ್ಸು ಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 199 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದ್ದಾರೆ.

Translate »