ಕೊಡಗಿನಲ್ಲಿ ಕೊರೊನಾ ದೃಢ: ಮಂಡ್ಯ, ಮೈಸೂರಿನಲ್ಲಿ ಆತಂಕ
ಕೊಡಗು

ಕೊಡಗಿನಲ್ಲಿ ಕೊರೊನಾ ದೃಢ: ಮಂಡ್ಯ, ಮೈಸೂರಿನಲ್ಲಿ ಆತಂಕ

March 20, 2020

ಸೋಂಕಿತ ವ್ಯಕ್ತಿ ಓಡಾಡಿದ ಮಾರ್ಗಗಳ ಸಂಪೂರ್ಣ ವಿವರ
ಮಡಿಕೇರಿ, ಮಾ.19- ಕೊಡಗು ಜಿಲ್ಲೆಯ ಕೊಂಡಂಗೇರಿಯ 35 ವರ್ಷದ ವ್ಯಕ್ತಿಯೊಬ್ಬ ರಿಗೆ ಕೊರೊನಾ ವೈರಸ್ ತಗುಲಿರುವ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜಿನ ವರದಿಯಿಂದ ದೃಢಪಟ್ಟಿದೆ. ಇದರಿಂದಾಗಿ ಇಡೀ ಕೊಡಗು ಜಿಲ್ಲೆ ಮಾತ್ರವಲ್ಲದೇ, ಬೆಂಗಳೂರು, ಮಂಡ್ಯ, ಮೈಸೂರು ಬೆಚ್ಚಿ ಬಿದ್ದಿದೆ. ಈ ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಬಂದಿಳಿದ್ದು, ಬಳಿಕ ರಾಜಹಂಸ ಬಸ್ ನಲ್ಲಿ ಮಂಡ್ಯ, ಮೈಸೂರಿನ ಹೊಟೇಲ್‍ನಲ್ಲಿ ಊಟೋಪಚಾರವನ್ನೂ ಮಾಡಿದ್ದಾನೆ.

ಮಾ.15ರ ಸಂಜೆ 4.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋಂಕಿತ ವ್ಯಕ್ತಿ, ಅಲ್ಲಿಂದ ಬಿಎಂಟಿಸಿ ಬಸ್‍ನಲ್ಲಿ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೇಟ್ ಬಸ್ ನಿಲ್ದಾಣಕ್ಕೆ ಸಂಜೆ 6.30ರ ವೇಳೆಗೆ ಆಗಮಿಸಿದ್ದಾರೆ. ನಂತರ ಅಲ್ಲಿಂದ ಮಲ್ಲೇ ಶ್ವರಂನ ಆಲ್‍ಬೇಕ್ ಹೋಟೆಲ್‍ಗೆ ತೆರಳಿ ಸಂಜೆ 7ಗೆ ಊಟ ಮಾಡಿದ್ದಾರೆ. ನಂತರ ಮತ್ತೆ ಆಟೋದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಸ್ಯಾಟಲೇಟ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ರಾತ್ರಿ 11.30ರವರೆಗೂ ಬಸ್ ನಿಲ್ದಾಣದಲ್ಲೇ ಕಾದು 11.33ಕ್ಕೆ ಹೊರಟ ರಾಜಹಂಸ ಬಸ್ (ಕೆಎ19, ಎಫ್3170, ಮಡಿಕೇರಿ ಘಟಕ) ನಲ್ಲಿ ಹೊರಟಿದ್ದು, ಮಾ.16ರ ಮಧ್ಯರಾತ್ರಿ 2.30ರ ವೇಳೆಗೆ ಮೈಸೂರು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ನಂತರ ಮುಂಜಾನೆ 5.30 ಗಂಟೆಗೆ ಮೂರ್ನಾಡು ತಲುಪಿದ್ದು, ಅಲ್ಲಿಂದ ಆಟೋದಲ್ಲಿ ಕೊಂಡಂಗೇರಿಯ ತಮ್ಮ ಮನೆಗೆ ತೆರಳಿದ್ದಾರೆ. ಮಾ.16ರ ಬೆಳಿಗ್ಗೆ 11 ಗಂಟೆಯವರೆಗೂ ಮನೆಯಲ್ಲಿಯೇ ಇದ್ದು, ನಂತರ 11.30ರ ವೇಳೆಗೆ ಕುಂಜಿಲ ಗ್ರಾಮದಲ್ಲಿ ರುವ ತಮ್ಮ ಸಹೋದರಿ ಮನೆಗೆ ತೆರಳಿ ದ್ದಾರೆ. ಅಲ್ಲಿಂದ ಸಂಜೆ 3ರವರೆಗೆ ಕುಂಜಿಲ ದರ್ಗಾಕ್ಕೆ ತೆರಳಿ ಸಂಜೆ 6ರವರೆಗೆ ಅದೇ ಗ್ರಾಮದಲ್ಲಿದ್ದ ಮತ್ತೊಬ್ಬ ಸಂಬಂಧಿಕರ ಮನೆಗೆ ಹೋಗಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಸ್ವಗ್ರಾಮ ಕೊಂಡಂಗೇರಿಗೆ ಹಿಂತಿರುಗಿದ ಸೋಂಕಿತ ವ್ಯಕ್ತಿ ಮಾ.17ರ ಬೆಳಿಗ್ಗೆ 11 ಗಂಟೆಗೆ ತಮ್ಮ ವಾಹನದಲ್ಲಿ ಸ್ನೇಹಿತನ ಜೊತೆ ಬಂದು ಮಡಿಕೇರಿಯ ಟೋಲ್‍ಗೇಟ್ ಬಸ್ ನಿಲ್ದಾಣದಲ್ಲಿ ಬಿಟ್ಟು ತಾವು ವೈದ್ಯಕೀಯ ಪರೀಕ್ಷೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಹೀಗಾಗಿಯೇ ಈ ಪ್ರಕರಣ ಬೆಂಗಳೂರು, ಮೈಸೂರು ಹಾಗೂ ಕೊಡಗು ಜಿಲ್ಲೆಗೆ ತಲೆ ನೋವಾಗಿ ಪರಿಣಮಿಸಿದೆ. ಈ ಎರಡು ದಿನದ ಅವಧಿಯೇ ಇದೀಗ ಸವಾಲಿನ ದಿನಗಳಾಗಿ ಕಾಡುವಂತಾಗಿದೆ. ದುಬೈನಿಂದ ಬಂದ ವ್ಯಕ್ತಿಯನ್ನು ಸಂಪರ್ಕಿಸಿದ, ಆತ ತನ್ನ ಮನೆಗೆ ತೆರಳಿದ ಆಟೋದಲ್ಲಿ ಪ್ರಯಾಣ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಇದೀಗ ಬಹು ದೊಡ್ಡ ಸವಾಲಾಗಿದ್ದು, ಈ ದಿಸೆಯಲ್ಲಿ ಜಿಲ್ಲಾಡಳಿತ ಯುದ್ದೋ ಪಾದಿಯ ಕಾರ್ಯವನ್ನೇ ಮಾಡಬೇಕಿದೆ.

ಈಗಾಗಲೇ ಕೊಡಗು ಜಿಲ್ಲಾಡಳಿತ ಮಾ.31ರ ವರೆಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ತರಕಾರಿ, ತುರ್ತು ಸೇವೆಗಳನ್ನು ನೀಡುವ ಅಂಗಡಿ ಮಳಿಗೆಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಮಳಿಗೆಗಳನ್ನು ಮುಚ್ಚುವಂತೆ ಮನವಿ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಹೋಂಸ್ಟೇ ಗಳು, ರೆಸಾರ್ಟ್‍ಗಳು ಈ ಆದೇಶದಿಂದ ಬಂದ್ ಮಾಡಲ್ಪಟ್ಟಿವೆ. ಅಲ್ಲಿನ ಕೆಲಸದವ ರನ್ನು ತಾತ್ಕಾಲಿಕ ರಜೆಯ ಮೇಲೆ ತೆರಳು ವಂತೆ ಆಡಳಿತ ಮಂಡಳಿ ಸೂಚಿಸಿದ್ದು, ಕೆಲಸ ಗಾರರಿಗೂ ನುಂಗಲಾರದ ತುತ್ತಾಗಿ ಪರಿಣಮಿ ಸಿದೆ. ಆದರೆ ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಇದು ಅನಿವಾರ್ಯವೂ ಆಗಿದೆ. ಪ್ರಸ್ತುತ ಇದು ಕೇವಲ ಮನವಿ ಯಾಗಿದ್ದು, ಅಗತ್ಯವಿದ್ದಲ್ಲಿ ಸರಕಾರದ ನೀತಿಯ ಪ್ರಕಾರ ಸೆಕ್ಷನ್ 144(3) ಅಡಿ ಯಲ್ಲಿ ಸಂಪೂರ್ಣ ನಿಷೇಧ ಹೇರಲು ಕೂಡ ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ.

Translate »