ಅಂಗಡಿಗೆ ಆಕಸ್ಮಿಕ ಬೆಂಕಿ
ಕೊಡಗು

ಅಂಗಡಿಗೆ ಆಕಸ್ಮಿಕ ಬೆಂಕಿ

March 20, 2020

ಮಡಿಕೇರಿ, ಮಾ.19- ಮಡಿಕೇರಿ ಭಾಗಮಂಡಲ ರಸ್ತೆಯಲ್ಲಿನ ಬೆಟ್ಟಗೇರಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುಡುಬಿಸಿಲಿನ ಹೊತ್ತಿನಲ್ಲಿಯೇ ಅಂಗಡಿ ಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಅಬ್ದುಲ್ ಖಾದರ್ ಅವರಿಗೆ ಸೇರಿದ ಹಾರ್ಡ್‍ವೇರ್ ಅಂಗಡಿಗೆ ತಗುಲಿದ ಬೆಂಕಿಯಿಂದ ಅಂಗಡಿಯಲ್ಲಿದ್ದ ಸಾವಿ ರಾರು ಮೌಲ್ಯದ ವಸ್ತುಗಳು ಸುಟ್ಟು ಬೂದಿಯಾಗಿ ಅಪಾರ ನಷ್ಟ ಸಂಭವಿಸಿದೆ. ಹಾದಿಹೋಕರು ಮತ್ತು ಬೆಟ್ಟಗೇರಿ ಗ್ರಾಮಸ್ಥರು ಅಂಗಡಿಗೆ ತಗುಲಿದ ಬೆಂಕಿ ನಂದಿಸುವಲ್ಲಿ ಹರಸಾಹಸವನ್ನೇಪಟ್ಟರು. ಮಡಿಕೇರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಸಫಲರಾದರು.

Translate »