ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಇನ್ನೆರಡು ತಿಂಗಳಲ್ಲಿ ಪೂರ್ಣ
ಚಾಮರಾಜನಗರ

ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಇನ್ನೆರಡು ತಿಂಗಳಲ್ಲಿ ಪೂರ್ಣ

March 20, 2020

ಸಂದೇಶ್‍ಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ
ಬೆಂಗಳೂರು, ಮಾ.19- ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗಳ ಪೈಕಿ ದೇವಾ ಲಯದ ಸುತ್ತ ನೆಲಹಾಸು ಕಾಮಗಾರಿಯು ಬಾಕಿ ಇದ್ದು, ಈ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಯಿಂದ 100 ಲಕ್ಷ ರೂ. ಅನುದಾನ ಮಜೂರಾಗಿದೆ. ಕಾಮಗಾರಿಗಳ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಸ್ಥಳಾವಕಾಶ ಇಲ್ಲದಿರುವುದರಿಂದ, ದೇವಾ ಲಯದ ಪುನರ್ ಪ್ರತಿಷ್ಠಾಪನೆ ಆಗುವವರೆಗೂ ತಾತ್ಕಾಲಿಕ ವಾಗಿ ಚಿಕ್ಕಜಾತ್ರೆ ಉತ್ಸವವನ್ನು ಸ್ಥಗಿತಗೊಳಿಸ ಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬುಧವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಜೀರ್ಣೋ ದ್ಧಾರ ಕಾಮಗಾರಿಗಳು ಮೂರು ವರ್ಷಗಳಿಂದ ನಿಧಾನ ಗತಿಯಿಂದ ಸಾಗುತ್ತಿವೆ. ಜಾತ್ರೆ, ಉತ್ಸವ, ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳಿಗೆ ಅಡಚಣೆ ಆಗಿರುವ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ದಾನಿಗಳಿಂದ ಯಾಗಶಾಲೆ, ಪಾಕಶಾಲೆ ನಿರ್ಮಾಣ: ಈ ದೇವಾಲಯದ ಜೀಣೋದ್ಧಾರ ಕಾಮಗಾರಿಯನ್ನು 2017ರ ಏಪ್ರಿಲ್ ತಿಂಗಳಲ್ಲಿ, ಪ್ರಾಚ್ಯ ವಸ್ತು ಇಲಾಖೆಯ ವತಿಯಿಂದ 240 ಲಕ್ಷ ರೂ. ವೆಚ್ಚದಲ್ಲಿ ಆರಂಭಿಸ ಲಾಗಿದ್ದು, ಈ ಕಾಮಗಾರಿಗಳು ಪೂರ್ಣಗೊಂಡಿವೆ, ದಾನಿಗಳ ನೆರವಿ ನಿಂದ ದೇವಾಲಯದ ಪಾಕಶಾಲೆ, ಯಾಗ ಶಾಲೆ ಕಾಮಗಾರಿಗಳು ನಡೆಯುತ್ತಿದ್ದು, ಈ ಕಾಮಗಾರಿಗಳು ಶೇಕಡಾ 50 ರಷ್ಟು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಮೇ 27 ರಿಂದ ಜೂನ್ 1ರವರೆಗೆ ಪುನರ್ ಪ್ರತಿಷ್ಠಾಪನೆ: ದೇವಾಲಯದ ಪುನರ್ ಪ್ರತಿಷ್ಠಾಪನೆಗೆ ಮೇ 27 ರಿಂದ ಜೂನ್ 1ರವರೆಗಿನ ಕಾಲವು ಸೂಕ್ತ ಎಂದು ದೇವಾಲಯದ ಆಗಮ ಪಂಡಿತರು ನೀಡಿ ರುವ ವರದಿ ಪರಿಶೀಲನೆಯಲ್ಲಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಏಪ್ರಿಲ್ ಅಂತ್ಯದ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವರು, ಸಂದೇಶ್ ಅವರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಹೆಚ್ಚುವರಿಯಾಗಿ 1500 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾದರೆ, ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಬಿಳಿಗಿರಿ ರಂಗನ ಬೆಟ್ಟವನ್ನು ಪ್ರವಾಸಿ ತಾಣ ಮತ್ತು ಯಾತ್ರಾ ಸ್ಥಳವಾಗಿ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಚಾಮರಾಜೇಶ್ವರ ರಥ ನಿರ್ಮಾಣ: ಚಾಮರಾಜ ನಗರದ, ಚಾಮರಾಜೇಶ್ವರ ಸ್ವಾಮಿಯ ರಥದ ನಿರ್ಮಾಣ ಕಾಮಗಾರಿಯನ್ನು ರಥಶಿಲ್ಪಿ ಬಿ.ಎನ್. ಬಡಿಗೇರ್ ಅಂಡ್ ಸನ್ಸ್ ಕಂಪನಿಯ ಶಿವಕುಮಾರ ಬಿ. ಬಡಿಗೇರ ಅವರಿಗೆ ನೀಡಿದ್ದು, ಲೋಕೋಪಯೋಗಿ ಇಲಾಖೆಯ, ಚಾಮರಾಜನಗರ ವಿಬಾಗದ ಕಾರ್ಯಪಾಲಕ ಅಭಿ ಯಂತರು 28.2.2019 ರಂದು ಕಾರ್ಯಾದೇಶ ನೀಡಿ ದ್ದಾರೆ, ಕರಾರಿನಂತೆ ಕಾಮಗಾರಿಯು ದಿನಾಂಕ 28.2.2020 ರಂದು ಪೂರ್ಣಗೊಳ್ಳಬೇಕಾಗಿತ್ತು.

ಚಾಮರಾಜೇಶ್ವರ ಸ್ವಾಮಿಯ ರಥವು ಸುಟ್ಟುಹೋದ ಮೇಲೆ ರಥೋತ್ಸವ ನಿಂತು ಹೋಗಿದ್ದು, ಈ ಭಾಗದ ಜನರ ಧಾರ್ಮಿಕ ಭಾವನೆಗಳಿಗೆ ಕುಂದು ಉಂಟಾ ಗಿದೆ, ರಥ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕೆಂಬ ಸಂದೇಶ್ ಅವರ ಇನ್ನೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು.

ರಥ ನಿರ್ಮಾಣಕ್ಕೆ ಯೋಗ್ಯ ಮರ ಸಿಗದೇ ನಿರ್ಮಾಣ ಕಾಮಗಾರಿಯಲ್ಲಿ ವಿಳಂಬವಾಗಿದೆ. ಯೋಗ್ಯ ವಾದ ಮರವನ್ನು, ಅರಣ್ಯ ಇಲಾಖೆಯ, ಸರ್ಕಾರಿ ಮರ ಮುಟ್ಟು ಸಂಗ್ರಹಾಲಯ ಕಿರುವತ್ತಿ, ಇಲ್ಲಿಂದ 31.12.19 ರಂದು ಖರೀದಿಸಲಾಗಿದೆ. ಮರವನ್ನು ಸಾಮಿಲ್‍ನಲ್ಲಿ ಅಳತೆಗನುಗುಣವಾಗಿ 15.2.20 ರಂದು ಕೊರೆಸ ಲಾಗಿದ್ದು, ರಥ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದೆಂದರು.

Translate »