ತಿ.ನರಸೀಪುರ: ಇಲ್ಲಿನ ಪುರಸಭೆಯ ನೂತನ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರನ ಪರ ವಕಾಲತ್ತು ವಹಿಸಿಕೊಂಡು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ನಾಗರತ್ನಮ್ಮ ವಿರುದ್ದ ಸದಸ್ಯ ಬಿ.ಮರಯ್ಯ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಉಮೇಶ್(ಕನಕಪಾಪು) ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಸದಸ್ಯ ಆಲಗೂಡು ನಾಗರಾಜು, ಹಳೆ ಹೆರಿಗೆ ಆಸ್ಪತ್ರೆ ಮುಂಭಾಗ ನೂತನವಾಗಿ ನಿರ್ಮಿಸಲಾಗುತ್ತಿ ರುವ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ನೀರು ಶೇಖರಣೆಯಾಗುತ್ತಿದ್ದು, ಇದನ್ನು ಗಮನಿಸಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯ ಬಿ.ಮರಯ್ಯ ಕಟ್ಟಡ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸುತ್ತಿ ದ್ದಾರೆಂದು ದೂರಿದರು.
ಬೇಸ್‍ಮೆಂಟ್‍ನಲ್ಲಿ ನೀರು ಶೇಖರಣೆ ಯಾಗುವುದರಿಂದ ಕಟ್ಟಡಕ್ಕೆ ಧಕ್ಕೆಯಾಗದು. ಸಮುದ್ರದ ನೀರನ್ನೇ ಸರಿಸಿ ಕಟ್ಟಡ ನಿರ್ಮಾಣ ಮಾಡುತ್ತಾರೆ ಎಂದು ಮುಖ್ಯಾಧಿಕಾರಿ ನಾಗರತ್ನಮ್ಮ ಹೇಳುತ್ತಿದ್ದಂತೆ ಆಕ್ರೋಶ ಗೊಂಡ ಮರಯ್ಯ ಇಲ್ಲಿನ ಗುತ್ತಿಗೆದಾರ ಮೇಧಾವಿ ಏನಲ್ಲ. ನೀವು ಅವರ ಪರ ಮಾತ ನಾಡುತ್ತಿರುವುದರ ಹಿಂದಿನ ಮರ್ಮವೇನು ಎಂದು ಮರು ಪ್ರಶ್ನಿಸಿದರು. ಈ ಸಂದರ್ಭ ಮುಖ್ಯಾಧಿಕಾರಿ ಹಾಗೂ ಬಿ.ಮರಯ್ಯ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
10 ನೇ ವಾರ್ಡ್ ಸದಸ್ಯ ಶ್ರುತಿ ಮಣಿಕಂಠ ಮಾತನಾಡಿ, 2015ರಲ್ಲಿ ನಮ್ಮ ವಾರ್ಡ್‍ಗೆ ರಸ್ತೆ ನಿರ್ಮಾಣ ಮಾಡಲು ಸಭೆಯಲ್ಲಿ ಅನುಮೋದನೆ ನೀಡಿದ್ದರೂ ಇದುವರೆವಿಗೂ ಕಾಮಗಾರಿಗೆ ಹಣ ಮಂಜೂರು ಮಾಡಿಲ್ಲ. ಪುರಸಭೆಗೆ ಕೊಟ್ಯಾಂತರ ರೂ ಅನುದಾನ ಹರಿದು ಬರುತ್ತಿದೆ. ಆದರೂ ವಾರ್ಡ್ ಅನ್ನು ಏಕೆ ನಿರ್ಲಕ್ಷಿಸಿದ್ದೀರಿ. ಈ ಕುರಿತು ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿ ಬಾಕಿ ಉಳಿದಿರುವ ಹಣವನ್ನು ನಮ್ಮ ವಾರ್ಡ್‍ಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಸದಸ್ಯ ನೈಸ್ ಮಹದೇವಸ್ವಾಮಿ ಸಭೆಯಲ್ಲಿ ಮನವಿ ಮಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, 3 ನೇ ವಾರ್ಡ್‍ನಲ್ಲಿ ಕುಡಿಯುವ ನೀರಿನ ಛೇಂಬರ್ ಒಡೆದು 15 ದಿನ ಕಳೆದರೂ ಸರಿಪಡಿಸಲು ಮುಂದಾಗಿಲ್ಲ. ಪಕ್ಕದಲ್ಲೇ ಮಾಂಸದ ಮಾರುಕಟ್ಟೆ ಇದ್ದು, ಅಲ್ಲಿನ ತ್ಯಾಜ್ಯ ವೆಲ್ಲ ನೀರಿನ ಜೊತೆ ಸೇರಿ ಕಲುಷಿತ ಗೊಂಡು ಮನೆಗಳಿಗೆ ಸರಬರಾಜಾಗುತ್ತಿದೆ. ಶೀಘ್ರ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಅಧ್ಯಕ್ಷ ಸಿ.ಉಮೇಶ್ ಸದಸ್ಯರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದಿದ್ದನ್ನು ಗಮನಿಸಿದ ಬಿ.ಮರಯ್ಯ , ಆಲಗೂಡು ನಾಗರಾಜು ಅಧ್ಯಕ್ಷರು ಮೊದಲು ಕಛೇರಿಯಲ್ಲಿ ಕುಳಿತು ಕಡತವನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಕುಳಿತು ಸಂಬಂಧಪಟ್ಟ ಜೆರಾಕ್ಸ್ ಪ್ರತಿ ತರಿಸಿ ಮಾಹಿತಿ ನೀಡುತ್ತಿರುವುದು ಸರಿಯಲ್ಲ. ಈ ನಡೆ ಸದಸ್ಯ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ. ಮುಂದಿನ ಬಾರಿ ಇದು ಪುನರಾರ್ವತನೆ ಆಗುವುದು ಬೇಡ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯ ರಾದ ಮಲ್ಲೇಶ್‍ನಾಯ್ಕ, ಟಿ.ಜಿ.ಪುಟ್ಟಸ್ವಾಮಿ, ಸುಧಾಗುರುಮಲ್ಲಪ್ಪ, ಮೀನಾಕ್ಷಿ, ರಾಜಮ್ಮ, ಶಶಿಕಲಾ ಪ್ರಕಾಶ್, ನಾಗೇಂದ್ರ, ಮುದ್ದ ಬೀರನಹುಂಡಿ ಮಹದೇವು, ಆರೋಗ್ಯ ಧಿಕಾರಿ ಚೇತನ್‍ಕುಮಾರ್, ಜೆಇ ಪುರು ಷೋತ್ತಮ್, ಯೋಜನಾಧಿಕಾರಿ ಕೆಂಪರಾಜು, ವಿನಯ್, ಪುಟ್ಟಸ್ವಾಮಿ, ಪರಿಸರ ಅಧಿ ಕಾರಿ ಮೈತ್ರಾದೇವಿ ಇತರರು ಹಾಜರಿದ್ದರು.