ಮೈಸೂರು: ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಕೋವಿಡ್ -19 ನಿಂದಾಗಿ ಲಾಕ್ ಡೌನ್ ಆಗಿರುವ ಕಾರಣ 3ನೇ ದಿನವೂ ಸಹ 500ಕ್ಕೂ ಹೆಚ್ಚು ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ,ಮಹಿಳೆಯರಿಗೆ ಉಚಿತ ಮಾಸ್ಕ್, ನೀರು, ಆಹಾರ ವಿತರಣೆ ಮೈಸೂರು ನಗರದ ರೈಲ್ವೆ ನಿಲ್ದಾಣದ ಬಳಿ ಜರುಗಿತು.
ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಯವರಾದ ಶ್ರೀ ಪ್ರಕಾಶ್ ಗೌಡರವರು ಸಹಕಾರ ನೀಡಿದರು.
ಪಾಲಿಕೆ ಸದಸ್ಯ ಗೋಪಿ,ವಿಶ್ವ,ಗುಣಶೇಖರ್,ನಾಗಮಹದೇವ,ಹರ್ಷ ಮತ್ತಿತರರು ಉಪಸ್ಥಿತರಿದ್ದರು.ಸೋಸಿಯಲ್ ಡಿಸ್ಟೆನ್ಸ್ ಕಾಪಾಡಲು ದೇವರಾಜ ಪೊಲೀಸ್ ಠಾಣೆ ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದರು.