ಲಾಕ್ ಡೌನ್ ಆರ್ಡರ್;ಎರಡನೇ ದಿನವೂ ಮಂಡ್ಯ ಶ್ತಬ್ಧ.!
ಮಂಡ್ಯ

ಲಾಕ್ ಡೌನ್ ಆರ್ಡರ್;ಎರಡನೇ ದಿನವೂ ಮಂಡ್ಯ ಶ್ತಬ್ಧ.!

March 26, 2020

ಅವಶ್ಯವಸ್ತು ಖರೀದಿ ಅಂಗಡಿಗಳ ಬಳಿ ಲಕ್ಷ್ಮಣ ರೇಖೆ ಎಳೆದ ಪೊಲೀಸರು

ಮಂಡ್ಯ,ಮಾ.೨೬(ನಾಗಯ್ಯ): ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕರೋನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಲಾಕ್‌ಡೌನ್ ಆದೇಶದ ೨ ನೇ ದಿನವಾದ ಇಂದು ಕೂಡ ಮಂಡ್ಯಜಿಲ್ಲೆ ಬಹುತೇಕ ಸ್ತಬ್ಧವಾಗಿತ್ತು.

ಜಿಲ್ಲಾಕೇಂದ್ರ ಮಂಡ್ಯ,ಮದ್ದೂರು,ಮಳವಳ್ಳಿ,ಪಾAಡವಪುರ,ಶ್ರೀರAಗಪಟ್ಟಣ,ಕೆ.ಆರ್.ಪೇಟೆ,ನಾಗಮAಗಲ ತಾಲ್ಲೂಕು ಕೇಂದ್ರಗಳೂ ಸೇರಿದಂತೆ ಪ್ರಮುಖ ಗ್ರಾಮೀಣ ಭಾಗಗಳಲ್ಲೂ ಜನರು ಮನೆಯಿಂದ ಹೊರ ಬಂದು ಸ್ವೇಚ್ಚೆಯಾಗಿ ಓಡಾಡುವುದು ಸ್ಥಗಿತಗೊಂಡಿತ್ತು.

ಎಂದಿನಂತೆ ಇಂದು ಕೂಡ ಜನರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ಹೆದ್ದಾರಿಯ ಪ್ರಮುಖ ವೃತ್ತಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು . ಹಾಲು ಮಾರುವ ಅಂಗಡಿಗಳು, ಮಾರುಕಟ್ಟೆ,ಮೆಡಿಕಲ್ಸ್ ಸ್ಟೋರ್ಸ್ ಗಳು,ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಕಾರ್ಯನಿರ್ವಹಿಸಿದ್ದು ಹೊರತು ಪಡಿಸಿದರೆ ,ರೈಲ್ವೆ,ಬಸ್ ನಿಲ್ದಾಣ,ಮಾರ್ಕೇಟ್ ,ಪೇಟೆಬೀದಿಗಳು, ಸಿನಿಮಾಥಿಯೇಟರ್ ಬಹುತೇಕ ಆಸ್ಪತ್ರೆಗಳು,ಬಿಗ್ ಬಜಾರ್,ಗಿರಿಯಾಸ್‌ನಂತಹ ದೊಡ್ಡ ದೊಡ್ಡ ಮಾಲ್‌ಗಳು, ಬಾರ್ & ವೈನ್ ಸ್ಟೋರ್ಸ್ಗಳು ಅಷ್ಟೇ ಏಕೆ ರಸ್ತೆ ಬದಿಯ ಕೈಗಾಡಿ, ಟೀ ಅಂಗಡಿ ಗಳು ಕೂಡ ಬಂದ್ ಆಗಿದ್ದವು.

ಅಲ್ಲೊಂದಿಲ್ಲೊಂದು ಬೈಕ್ ಗಳು,ಲಾರಿಗಳು,ಆಟೋಗಳು, ಎಮರ್ಜೆನ್ಸಿ ಆಂಬುಲೆನ್ಸ್,ಗಸ್ತು ತಿರುಗೋ ಪೊಲೀಸ್ ವಾಹನಗಳನ್ನು ಬಿಟ್ಟರೆ ಸಂಪೂರ್ಣವಾಗಿ ವಾಹನಸಂಚಾರ ಬಂದ್ ಆಗಿತ್ತು.ಹೊರ ಜಿಲ್ಲೆಗಳಿಂದ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಪ್ರವೇಶ ಸರ್ಕಲ್‌ಗಳಲ್ಲಿ ಮಾತ್ರವಲ್ಲದೆ ನಗರದ ಪ್ರಮುಖ ಸರ್ಕಲ್ ಗಳಲ್ಲಿಯೂ ಸಹ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ನಿರ್ಬಂಧ ವಿಧಿಸಿದ್ದರಲ್ಲದೆ, ಯುಗಾದಿ ಹಬ್ಬದ ವರ್ಷತೊಡಕಿನ ನಡುವೆಯೂ ಹೊರಗಿನಿಂದ ಬರುವ ಬೈಕ್, ಕಾರು ಇತ್ಯಾಧಿ ವಾಹನದಲ್ಲಿ ಆಗಮಿಸುವ ಎಲ್ಲರಿಗೂ ನಿರ್ಬಂಧ ಹೇರಲಾಗುತ್ತಿತ್ತು.

ಮೆಡಿಕಲ್ ಶಾಪ್‌ಗೆ ಬರುವವರನ್ನು,ರೋಗಿಗಳನ್ನು ಚೀಟಿ ಮತ್ತು ದಾಖಲಾತಿ ನೋಡಿಯೇ ಒಳಬಿಡುತ್ತಿದ್ದರು, ಬ್ಯಾಂಕ್ ಮತ್ತು ಕೆಲವು ಸರ್ಕಾರಿ ಕಛೇರಿಗಳಿಗೆ ಹೋಗುವವರಿಗೆ ಮಾತ್ರ ತಿಳಿಹೇಳಿ ಕಳುಹಿಸಲಾಗುತ್ತಿತ್ತು ಸುಖಸುಮ್ಮನೇ ಬೈಕ್‌ನಲ್ಲಿ ಬರುವವರನ್ನು ತರಾಟೆಗೆ ತೆಗೆದುಕೊಂಡು ಮತ್ತೊಮ್ಮೆ ಬಂದರೆ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದುದು ಕಂಡು ಬಂತು.

ಲಕ್ಷ್ಮಣ ರೇಖೆ ಎಳೆದ ಪೊಲೀಸರು

ಜಿಲ್ಲಾಡಳಿತವು ೧೪೪ ಸೆಕ್ಷನ್ ಜಾರಿ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಕೇಂದ್ರಗಳ ಬಳಿ ಕನಿಷ್ಠ ಮೂರು ಅಡಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿತ್ತು. ಆದರೂ ಕೂಡ ಜನರು ತಮ್ಮ ನಡುವೆ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು.ಈ ಹಿನ್ನೆಲೆೆಯಲ್ಲಿ ಯುಗಾದಿ ಹಬ್ಬದ ದಿನವಾದ ಬುಧವಾರವೇ ಪೊಲೀಸರು ರಂಗೋಲಿ, ಸೀಮೆಸುಣ್ಣ ಹಾಗೂ ಬಿಳಿ ಬಣ್ಣವನ್ನು ಬಳಸಿ ದಿನಸಿ ಅಂಗಡಿ, ಹಾಪ್ ಕಾಮ್ಸ್, ಹಾಲಿನ ಖರೀದಿ ಕೇಂದ್ರಗಳ ಬಳಿ ಬಣ್ಣದ ಪಟ್ಟೆಗಳನ್ನು ಎಳೆದು ಲಕ್ಷ್ಮಣ ರೇಖೆಯನ್ನು ದಾಟದಂತೆ ಸೂಚನೆ ನೀಡಿದ್ದರು. ಅಂತೆಯೇ ನಗರಪ್ರದೇಶ ಮತ್ತು ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಮಾತ್ರ ಯುಗಾದಿ ಹಬ್ಬ ಮತ್ತು ವರ್ಷ ತೊಡಕಿನ ಪ್ರಯುಕ್ತ ಅಲ್ಲಲ್ಲಿ ಮಾಂಸ ಮಾರಾಟ ಕೇಂದ್ರಗಳು,ತರಕಾರಿ,ದಿನಸಿ ಅಂಗಡಿಗಳು,ಹಾಲು ಮಾರಾಟ ಕೇಂದ್ರಗಳಲ್ಲಿ ಸಾಮಾಜಿಕ ಅಂತರದಲ್ಲಿ ನಿಂತು ಗ್ರಾಹಕರು ನಿತ್ಯಬಳಕೆ ವಸ್ತುಗಳನ್ನು ಖರೀದಿಸುತ್ತಿದ್ದುದು ವಿಶೇಷವಾಗಿತ್ತು.

ಮಂಡ್ಯನಗರದ ಜೆ.ಸಿ.ವೃತ್ತದಲ್ಲಿ ಚೀಫ್ ಟ್ರಾಫಿಕ್‌ವಾರ್ಡನ್ ಡಿ.ವಿನ್ಸೆಂಟ್ ನೇತೃತ್ವದಲ್ಲಿಟ್ರಾಫಿಕ್ ವಾರ್ಡನ್ ಸಿಬ್ಬಂದಿಗಳು ಹೆದ್ದಾರಿಹಾಗೂ ಹೊಳಲು ವೃತ್ತದ ರಸ್ತೆಗಳಲ್ಲಿಸಂಚರಿಸುವ ವಾಹನ ಸವಾರರನ್ನು ತಡೆದು,ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದುದು ಗೋಚರಿಸಿತು.

Translate »