ಪತ್ರಕರ್ತರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಅವಿರೋಧ ಆಯ್ಕೆ
ಮಂಡ್ಯ

ಪತ್ರಕರ್ತರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಅವಿರೋಧ ಆಯ್ಕೆ

March 26, 2020

ಮಂಡ್ಯ,ಮಾ.೨೬(ನಾಗಯ್ಯ): ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ವಿವಿದೋದ್ದೇಶ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಸಂಜೆ ಇಂಪು ಪತ್ರಿಕೆ ಸಂಪಾದಕ ಚಲುವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರಿ ಇಲಾಖೆಯ ಸಿಡಿಪಿಓ ಪಾರ್ವತಮ್ಮ ಘೋಷಿಸಿದರು.

ನಿರ್ದೇಶಕರಾಗಿ ಹಿರಿಯ ಪತ್ರಕರ್ತರಾದ ಕೆ.ಎನ್.ರವಿ,ನಾಗಯ್ಯ,ಎಂ.ಎಸ್.ಶಿವಪ್ರಕಾಶ್, ಎಚ್.ಎ.ರಮೇಶ್, ಎಸ್.ನಾರಾಯಣಸ್ವಾಮಿ, ಡಿ.ದಶರಥಕುಮಾರ್, ಕೆ.ಮಹೇಶ್, ಕಿರುಗಾವಲು ಮಂಜುಳಾ, ರುಕ್ಮಿಣಿ ದ್ಯಾವಪ್ಪ, ಅಣ್ಣೂರು ಲಕ್ಷ್ಮಣ್, ಸೂನಗಹಳ್ಳಿ ಪುಟ್ಟಸ್ವಾಮಿ, ಕೆ.ಎನ್.ನವೀನ್ ಕುಮಾರ್, ಕೆಂಪರಾಜು, ನಾಗಯ್ಯ, ವಾಸುದೇವರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ ಪ್ರಮಾಣಪತ್ರವನ್ನು ನೂತನ ನಿರ್ದೇಶಕರುಗಳಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು

Translate »