ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸದ ರಾಶಿ
ಮೈಸೂರು

ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸದ ರಾಶಿ

December 22, 2020

ಮೈಸೂರು, ಡಿ.21(ಎಸ್‍ಪಿಎನ್)- ಮೈಸೂರು ನಗರದ ವಿವಿಧ ರಸ್ತೆಗಳಲ್ಲಿರುವ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸ ಹಾಕುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲರಾಗಿರುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಮೈಸೂರು ನಗರ ಪಾಲಿಕೆ ಆಯುಕ್ತರನ್ನು ಸಾಮಾಜಿಕ ಹೋರಾಟ ಗಾರರು ಒತ್ತಾಯಿಸಿದ್ದಾರೆ.

ಮೈಸೂರು ಟಿ.ಕೆ.ಬಡಾವಣೆ ಸಮೀಪದ ಬಿಎಸ್‍ಎನ್‍ಎಲ್ ಕಚೇರಿ ಮುಂಭಾಗ ಟ್ರಾನ್ಸ್ ಫಾರ್ಮರ್ ಕೆಳಗೆ ಯಾರೋ ಗ್ಲಾಸ್‍ಪೀಸ್, ಪ್ಲಾಸ್ಟಿಕ್ ತ್ಯಾಜ್ಯ, ಅನುಪಯುಕ್ತ ಗೃಹೋಪ ಯೋಗಿ ವಸ್ತುಗಳ ಕಸದ ರಾಶಿ ಹಾಕಿದ್ದು, ಈ ಸಮಸ್ಯೆ ನಗರದ ಬಹುತೇಕ ಟ್ರಾನ್ಸ್ ಫಾರ್ಮರ್ ಬಳಿ ಇದೆ. ಜೊತೆಗೆ ಕೆಲವರು ಇದರ ಕೆಳಗೆ ಶೌಚಕ್ಕೆ ಹೋಗುತ್ತಾರೆ. ಅನಾ ಹುತ ಸಂಭವಿಸಿದರೆ ಯಾರು ಹೊಣೆ? ಎಂದು ಸಾಮಾಜಿಕ ಹೋರಾಟಗಾರ ಬಿ.ಎನ್. ನಾಗೇಂದ್ರ ಪ್ರಶ್ನಿಸಿದ್ದಾರೆ. ವಿದ್ಯುತ್ ಪ್ರಸರಣ ದಲ್ಲಿ ಅಡಚಣೆಯಾದಾಗ ಅದನ್ನು ಸರಿಪಡಿಸಲು ಈ ಕಸದರಾಶಿ ಮೇಲೆಯೇ ಕೆಪಿಟಿಸಿಎಲ್ ಸಿಬ್ಬಂದಿ ನಿಂತು ದುರಸ್ತಿ ಕಾರ್ಯ ನಡೆಸಬೇಕಾ ಗುತ್ತದೆ. ಇದರಿಂದ ಅವರ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಈ ಜಾಗದಲ್ಲಿ ಕಸ ಹಾಕುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.

Translate »