ಮೈಸೂರು

ಜಿಗುಪ್ಸೆ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

December 22, 2020

ಮೈಸೂರು,ಡಿ.21(ಆರ್‍ಕೆ)- ಜೀವನ ದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ಭಾನು ವಾರ ರಾತ್ರಿ ಸಂಭವಿಸಿದೆ.

ಮೂಲತಃ ಕೊಡಗು ಜಿಲ್ಲೆ, ಕುಶಾಲ ನಗರ ನಿವಾಸಿ ಎಂ.ಎಂ.ಖಾದರ್ ಅವರ ಮಗ ಮೊಹಮದ್ ಶಂಶೀರ್ (32) ನೇಣಿಗೆ ಶರಣಾದವರು.

ಮೊಬೈಲ್ ರಿಪೇರಿ ವೃತ್ತಿ ಮಾಡಿ ಕೊಂಡು ಮೈಸೂರಿನ ಸಾತಗಳ್ಳಿ ಮೊದಲನೇ ಹಂತದಲ್ಲಿ ವಾಸವಾಗಿದ್ದ ಶಂಶೀರ್, ಭಾನುವಾರ ರಾತ್ರಿ ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿ ಕೊಂಡು ಸಾವಿಗೀಡಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಉದಯಗಿರಿ ಠಾಣೆ ಪೊಲೀಸರು, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾ ಗಾರದಲ್ಲಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸು ದಾರರಿಗೆ ದೇಹ ಒಪ್ಪಿಸಿದರು.

Translate »