ಶಿಕ್ಷಕಿಯಾಗಬೇಕೆಂಬ ಆಸೆ ಹೊತ್ತಿದ್ದ ಶಿವಮೊಗ್ಗ ವಿದ್ಯಾರ್ಥಿನಿ ಗೌಹಾಟಿ ಐಐಟಿಯಲ್ಲಿ ಆತ್ಮಹತ್ಯೆ
ಮೈಸೂರು

ಶಿಕ್ಷಕಿಯಾಗಬೇಕೆಂಬ ಆಸೆ ಹೊತ್ತಿದ್ದ ಶಿವಮೊಗ್ಗ ವಿದ್ಯಾರ್ಥಿನಿ ಗೌಹಾಟಿ ಐಐಟಿಯಲ್ಲಿ ಆತ್ಮಹತ್ಯೆ

September 13, 2018

ಗೌಹಾಟಿ: ಅಸ್ಸಾಂ ಗೌಹಾಟಿಯ ಐಐಟಿಯಲ್ಲಿ ಮೊದಲ ವರ್ಷ ಬಿ.ಟೆಕ್ ಅಧ್ಯಯನ ನಡೆಸಿದ್ದ ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.

ಶಿವಮೊಗ್ಗ ಹೊಸನಗರ ಮೂಲದ ಎಸ್.ಸಿ. ನಾಗಶ್ರೀ(18) ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. “ತನಗೆ ಟೀಚರ್ ಆಗುವ ಹಂಬಲವಿತ್ತು, ಇಂಜಿನಿಯರಿಂಗ್ ಮಾಡಲು ಇಷ್ಟವಿರಲಿಲ್ಲ. ಪೆÇೀಷಕರು ಬಯಸುವಂತೆ ಬದುಕಲು ಸಾಧ್ಯವಾಗದೆ ಇರುವುದಕ್ಕಿಂತ ಸಾವು ಉತ್ತಮವಾಗಿದೆ’’ ಎಂದು ನಾಗಶ್ರೀ ಆತ್ಮಹತ್ಯೆಗೆ ಮುನ್ನ ಬರೆದಿರುವ ಡೆತ್ ನೋಟ್‍ನಲ್ಲಿ ಬರೆದಿದ್ದಾಗಿ ಪೆÇಲೀಸರು ಮಾಹಿತಿ ನೀಡಿದರು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಗೌಹಾಟಿಯ ಹಾಸ್ಟೆಲ್ ಕೋಣೆ ಯಲ್ಲಿ ವಿದ್ಯಾರ್ಥಿನಿ ನೇಣು ಹಾಕಿಕೊಂಡಿರುವುದನ್ನು ಕಿಟಕಿ ಮೂಲಕ ಸೆಕ್ಯೂರಿಟಿ ಗಾರ್ಡ್ ಪತ್ತೆ ಮಾಡಿ ಪೆÇಲೀಸರಿಗೆ ತಿಳಿಸಿದ್ದರು. ಅನಾರೋಗ್ಯದ ಕಾರಣ ಈ ದಿನ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಹಪಾಠಿಗೆ ನಾಗಶ್ರೀ ಹೇಳಿದ್ದಾಗಿ ಸಹಪಾಠಿ ವಿವರಿಸಿದ್ದು ಆಕೆ ಮೊದಲ ಅವಧಿ ತರಗತಿಗಳು ಮುಗಿದಾಗ ಹಾಸ್ಟೆಲ್‍ಗೆ ವಾಪಾಸಾಗಿದ್ದಾಳೆ. ಆಗ ನಾಗಶ್ರೀ ಕೊಠಡಿಯ ಬಾಗಿಲು ಹಾಕಿಕೊಂಡಿರುವುದು ಕಂಡು ಸೆಕ್ಯೂರಿಟಿ ಗಾರ್ಡ್‍ಗೆ ವಿಚಾರ ತಿಳಿಸಿದ್ದಾಳೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಹೊಸನಗರದಲ್ಲಿನ ನಾಗಶ್ರೀ ಪೆÇೀಷಕರಿಗೆ ವಿಚಾರ ತಲುಪಿಸಲಾಗಿದೆ.

Translate »