ಸೆ.17ರಿಂದ 26ರವರೆಗೆ ಭ್ರಷ್ಟಾಚಾರ ನಿಗ್ರಹ ದಳ ಡಿವೈಎಸ್‍ಪಿಯಿಂದ ಸಾರ್ವಜನಿಕರ ದೂರು ಸ್ವೀಕಾರ
ಮೈಸೂರು

ಸೆ.17ರಿಂದ 26ರವರೆಗೆ ಭ್ರಷ್ಟಾಚಾರ ನಿಗ್ರಹ ದಳ ಡಿವೈಎಸ್‍ಪಿಯಿಂದ ಸಾರ್ವಜನಿಕರ ದೂರು ಸ್ವೀಕಾರ

September 13, 2018

ಮೈಸೂರು: ಮೈಸೂರು ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ಯವರು ಸೆ.17ರಿಂದ 26ರವರೆಗೆ ಜಿಲ್ಲೆಯ ವಿವಿಧೆಡೆ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಹಾಗೂ ದೂರು ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಅವರು ಸೆ.17ರಂದು ಬೆಳಿಗ್ಗೆ 10.30ರಿಂದ 11.30ರವರೆಗೆ ನಂಜನಗೂಡು ಪರಿವೀಕ್ಷಣಾ ಮಂದಿರದಲ್ಲಿ, ಮಧ್ಯಾಹ್ನ 12ರಿಂದ 1.30ರವರೆಗೆ ಹುಲ್ಲಹಳ್ಳಿ ನಾಡ ಕಚೇರಿಯಲ್ಲಿ 2.30ರಿಂದ 3.30ರವರೆಗೆ ಕವಲಂದೆ ನಾಡ ಕಚೇರಿಯಲ್ಲಿ ಸಂಜೆ 4.30ರಿಂದ 5.30ರವರೆಗೆ ಕಡಕೊಳ ನಾಡ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮಾಡಲಿದ್ದಾರೆ.

ಸೆ.18ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರವರೆಗೆ ಹುಣಸೂರು ಪರಿವೀಕ್ಷಣಾ ಮಂದಿರದಲ್ಲಿ, ಮಧ್ಯಾಹ್ನ 2.30ರಿಂದ 3.30ರವರೆಗೆ ಹುಣಸೂರು ಕಸಬಾ ನಾಡ ಕಚೇರಿಯಲ್ಲಿ ಸಂಜೆ 4.30ರಿಂದ 5.30ರವರೆಗೆ ಬಿಳಿಕೆರೆ ನಾಡ ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.

ಸೆ.19ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಹೆಚ್.ಡಿ.ಕೋಟೆ ಪರಿವೀಕ್ಷಣಾ ಮಂದಿರದಲ್ಲಿ 12.30ರಿಂದ 1.30ರವರೆಗೆ ಸರಗೂರು ಪರಿವೀಕ್ಷಣಾ ಮಂದಿರದಲ್ಲಿ, 3ರಿಂದ 4ರವರೆಗೆ ಹಂಪಾಪುರ ನಾಡ ಕಚೇರಿಯಲ್ಲಿ, 4.30ರಿಂದ 5.30ರವರೆಗೆ ಜಯಪುರ ನಾಡ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮಾಡಲಿದ್ದಾರೆ.

ಸೆ.24ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರವರೆಗೆ ಕೆ.ಆರ್.ನಗರ ಪರಿವೀಕ್ಷಣಾ ಮಂದಿರದಲ್ಲಿ, 2.30ರಿಂದ 3.30ರವರೆಗೆ ಸಾಲಿಗ್ರಾಮ ಪರಿವೀಕ್ಷಣಾ ಮಂದಿರದಲ್ಲಿ, ಸಂಜೆ 4.30ರಿಂದ 5.30ರವರೆಗೆ ಇಲವಾಲ ನಾಡ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ. ಸೆ.25ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಪಿರಿಯಾಪಟ್ಟಣ ಪರಿವೀಕ್ಷಣಾ ಮಂದಿರದಲ್ಲಿ, 3ರಿಂದ 4ರವರೆಗೆ ಬೆಟ್ಟದಪುರ ಪರಿವೀಕ್ಷಣಾ ಮಂದಿರದಲ್ಲಿ, ಸಂಜೆ 4.30ರಿಂದ 5.30ರವರೆಗೆ ಬೈಲುಕುಪ್ಪೆ ಪರಿವೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.

ಸೆ.26ರಂದು ಬೆಳಿಗ್ಗೆ 10.30ರಿಂದ 11.30ರವರೆಗೆ ಬನ್ನೂರು ಪರಿವೀಕ್ಷಣಾ ಮಂದಿರದಲ್ಲಿ, ಮಧ್ಯಾಹ್ನ 12.30ರಿಂದ 1.30ರವರೆಗೆ ತಿ.ನರಸೀಪುರ ಪರಿವೀಕ್ಷಣಾ ಮಂದಿರದಲ್ಲಿ ಮಧ್ಯಾಹ್ನ 3ರಿಂದ 4ರವರೆಗೆ ತಲಕಾಡು ಪರಿವೀಕ್ಷಣಾ ಮಂದಿರದಲ್ಲಿ ಸಂಜೆ 4.30ರಿಂದ 5.30ರವರೆಗೆ ವರುಣಾ ನಾಡ ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿಯವರು ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ

Translate »