ನಾಲ್ವರು ಅಂತರ ಜಿಲ್ಲಾ ಖದೀಮರ ಬಂಧನ: 8 ಲಕ್ಷ ಮೌಲ್ಯದ 15 ದ್ವಿ ಚಕ್ರ ವಾಹನ ವಶ
ಮೈಸೂರು

ನಾಲ್ವರು ಅಂತರ ಜಿಲ್ಲಾ ಖದೀಮರ ಬಂಧನ: 8 ಲಕ್ಷ ಮೌಲ್ಯದ 15 ದ್ವಿ ಚಕ್ರ ವಾಹನ ವಶ

September 13, 2018

ಮೈಸೂರು: ದ್ವಿ ಚಕ್ರ ವಾಹನ ಕಳ್ಳತನ ಮತ್ತು ಪಿಕ್‍ಪಾಕೆಟ್ ಮಾಡುತ್ತಿದ್ದ ನಾಲ್ವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಇವರಿಂದ 8 ಲಕ್ಷ ಮೌಲ್ಯದ 15 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಇಲವಾಲದ ಮೋಹಿದ್ದೀನ್ ಪುತ್ರ ತೌಷಿಕ್(25), ಹುಣಸೂರು ತಾಲೂಕು ಧರ್ಮಾಪುರದ ನಿವಾಸಿ ಹಾಲಿ ಹೂಟಗಳ್ಳಿಯಲ್ಲಿ ವಾಸವಾಗಿರುವ ಲೇಟ್ ಚೆನ್ನಪ್ಪರ ಪುತ್ರ ಬಾಲರಾಜ್ @ ಕುಂಡ @ ಬಾಲು(22), ಜಯಪುರ ಹೋಬಳಿಯ ಧನಗಳ್ಳಿಯ ಮಹದೇವನಾಯಕರ ಪುತ್ರ ವಿಜಯ್‍ಕುಮಾರ್ @ವಿಜಿ(22), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪಾಲಳ್ಳಿಯ ಚಂದ್ರ ಶೇಖರ್ ಪುತ್ರ ಸಿ. ಗುಣವರ್ಧನ್ @ ಗುಣ @ ಜೀವನ್(20) ಬಂಧಿತ ಆರೋಪಿಗಳು.

ಮೈಸೂರು ನಗರ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಸಬರ್ಬ್ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದಾಗ ಈ ಘಟನೆ ಬಯಲಿಗೆ ಬಂದಿದೆ. ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ರಾಮನಗರದಲ್ಲಿ ದ್ವಿ ಚಕ್ರ ವಾಹನ ಕಳ್ಳತನ ಹಾಗೂ ಪಿಕ್‍ಪಾಕೆಟ್ ನಡೆಸಿದ್ದ ಮಾಹಿತಿ ನೀಡಿದ್ದಾರೆ.
ಆರೋಪಿಗಳ ಮಾಹಿತಿ ಮೇರೆಗೆ 8 ಲಕ್ಷ ಮೌಲ್ಯದ ವಿವಿಧ ಕಂಪನಿಯ 15 ದ್ವಿಚಕ್ರ ವಾಹನ ಹಾಗೂ ಪಿಕ್‍ಪ್ಯಾಕೆಟ್‍ನಲ್ಲಿ ಖರೀದಿಸಿದ್ದ ಸಾಮಗ್ರಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಿಂದ ಮಂಡ್ಯ ಪೂರ್ವ ಠಾಣೆ-1, ಮೈಸೂರು ನಗರದ ಹೆಬ್ಬಾಳ್ ಠಾಣೆ-1, ಕೆ.ಆರ್.ಠಾಣೆ-1, ಮೇಟಗಳ್ಳಿ ಠಾಣೆ-1, ಬೆಂಗಳೂರಿನ ಚಾಮರಾಜ ಠಾಣೆ-2, ಬ್ಯಾಟರಾಯನಪುರ ಠಾಣೆ-1 ರಾಮ ನಗರದ ಟೌನ್ ಠಾಣೆಯ-1, ಐಜೂರು ಠಾಣೆಯ-1, ಬೆಂಗಳೂರು ರೈಲ್ವೆ ಪೊಲೀಸ್ ಠಾಣೆ-2 ಪ್ರಕರಣ ಸೇರಿದಂತೆ ಒಟ್ಟು 15 ದ್ವಿ ಚಕ್ರ ವಾಹನಗಳು ಪತ್ತೆಯಾಗಿವೆ. ಇದರ ಜೊತೆಗೆ ದೇವರಾಜ ಠಾಣೆಯ 2 ಪಿಕ್‍ಪ್ಯಾಕೆಟ್ ಪ್ರಕರಣಗಳು ಪತ್ತೆಯಾಗಿವೆ.

Translate »