ಸೆ.16ರಂದು ಶತಕೋಟಿ ಶ್ರೀ ಶಂಕರ ನಾಮಜಪ ಯಜ್ಞ
ಮೈಸೂರು

ಸೆ.16ರಂದು ಶತಕೋಟಿ ಶ್ರೀ ಶಂಕರ ನಾಮಜಪ ಯಜ್ಞ

September 13, 2018

ಮೈಸೂರು:  ಶ್ರೀ ಶಂಕರ ನಾಮಜಪ ಯಜ್ಞ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಶತಕೋಟಿ ಶ್ರೀ ಶಂಕರ ನಾಮಜಪ ಯಜ್ಞದ ಉದ್ಘಾಟನಾ ಸಮಾರಂಭ ಸೆ.16ರಂದು ನಡೆಯಲಿದೆ ಎಂದು ಸಮಿತಿಯ ಸಂಯೋಜಕ ಪ್ರಸನ್ನ ಪ್ರಕಾಶ್ ತಿಳಿಸಿದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೊಸದುರ್ಗ ತಾಲೂಕು ಬೆಳಗೂರಿನ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿಯ ಶ್ರೀ ಬಿಂದು ಮಾಧವ ಅವಧೂತ ಸ್ವಾಮೀಜಿ ಸಾನಿಧ್ಯದಲ್ಲಿ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥ ಸ್ವಾಮಿ ಯುಕ್ತೇಶಾ ನಂದಜೀ ಮಹಾರಾಜ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಅತಿಥಿಗಳಾಗಿ ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್, ಮೈಸೂರಿನ ಶ್ರೀ ಶಂಕರಮಠದ ಧರ್ಮಾಧಿಕಾರಿ ಹೆಚ್.ರಾಮಚಂದ್ರ, ಜ್ಯೋತಿಷಿ ಡಾ.ಭಾನುಪ್ರಕಾಶ ಶರ್ಮ, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ವಿದ್ವಾನ್ ಟಿ.ಎನ್.ಪ್ರಭಾಕರ್, ವಿದ್ವಾಂಸ ಡಾ.ಟಿ.ವಿ.ಸತ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ. ಒಂದು ವರ್ಷದವರೆಗೆ ಶತಕೋಟಿ ಶ್ರೀ ಶಂಕರ ನಾಮಜಪ ಯಜ್ಞದ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನಾ ಸಮಾ ರಂಭದಲ್ಲಿ ಚಾಲನೆ ನೀಡುವ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಂಡು `ಶ್ರೀ ಶಂಕರಾಚಾರ್ಯ ಸದ್ಗುರುವೇ ನಮಃ’ ಎಂಬ ಜಪವನ್ನು ದಾಖಲಿಸಬೇಕು ಎಂದು ಹೇಳಿದರು.

ವೆಬ್‍ಸೈಟ್‍ನಲ್ಲಿ ದಾಖಲು ಮಾಡಲಾಗದವರಿಗಾಗಿ ಕಾರ್ಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಯಾವುದೇ ಜಾತಿ-ಮತ, ಪಂಥ-ಲಿಂಗದ ಭೇದವಿಲ್ಲ. ಸದಾಚಾರ ಮೈಗೂಡಿಸಿಕೊಳ್ಳಲು ಹಾಗೂ ಲೋಕ ಕಲ್ಯಾಣಾರ್ಥ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ.ಸಂ. 9916564360, 9481232249 ಅನ್ನು ಸಂಪರ್ಕಿಬಹುದು ಎಂದರು. ವಿದ್ವಾಂಸ ಡಾ.ಟಿ.ವಿ.ಸತ್ಯನಾರಾಯಣ ಮಾತನಾಡಿ, ಶಂಕರಾಚಾರ್ಯರು ಯಾವುದೇ ಸಾರಿಗೆ ಸೌಲಭ್ಯ ಇಲ್ಲದ ಅಂದಿನ ಸಂದರ್ಭದಲ್ಲಿ ಬರಿಗಾಲಿನಲ್ಲಿ ದೇಶಾದ್ಯಂತ ಸಂಚರಿಸಿ ಜ್ಞಾನ ಪ್ರಸಾರ ಮಾಡುತ್ತಾರೆ. ಸಂಸ್ಕøತ ಭಾಷೆ 400ಕ್ಕೂ ಕೃತಿಗಳನ್ನು ರಚಿಸಿ ಜನಸಾಮಾನ್ಯರಿಗೆ ಜ್ಞಾನ ರವಾನಿಸುತ್ತಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂಬ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅವರ ನಾಮ ಜಪಿಸುವ ಮೂಲಕ ಸದಾಚಾರ, ಸದ್ಗುಣ ನಮ್ಮಲ್ಲೂ ಮೂಡಲು ಪ್ರೇರಣೆ ದೊರೆಯಲಿದೆ. ಆ ಮೂಲಕ ಲೋಕ ಕಲ್ಯಾಣ ಸಾಧ್ಯವಾಗಲಿದೆ ಎಂದು ನುಡಿದರು. ಸಮಿತಿ ಅಧ್ಯಕ್ಷ ಭವಾನಿ ಶಂಕರ್, ಕಾರ್ಯದರ್ಶಿ ಎಸ್.ವಿ.ಶ್ರೀನಿ ವಾಸಮೂರ್ತಿ, ವಿದ್ವಾನ್ ಟಿ.ಎನ್.ಪ್ರಭಾಕರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »