ಮೈಸೂರು: ಗಣೇಶ ಹಬ್ಬದ ಮುನ್ನಾ ದಿನದ ಸ್ವರ್ಣ ಗೌರಿ ಹಬ್ಬವನ್ನು ಬುಧವಾರ ಮೈಸೂರಿನಲ್ಲಿ ಮಹಿಳೆಯರು ಭಕ್ತಿ ಭಾವದಿಂದ ಆಚರಿ ಸಿದರು. ಮೈಸೂರಿನ ವಿವಿಧ ದೇವಾ ಲಯಗಳಲ್ಲಿ ಸ್ಥಾಪಿಸಲಾಗಿದ್ದ ಸ್ವರ್ಣಗೌರಿ ಮೂರ್ತಿಗೆ ಮಹಿಳೆಯರು ಬಾಗಿನ ಸಮರ್ಪಿಸಿ ಭಕ್ತಿ ಭಾವ ಮೆರೆದರು.
ಮೈಸೂರಿನ ಅಗ್ರಹಾರ ನೂರೊಂದು ಗಣಪತಿ ದೇವಸ್ಥಾನ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆಯ ಅಮೃ ತೇಶ್ವರ ದೇವಸ್ಥಾನ, ವಿದ್ಯಾರಣ್ಯಪುರಂ ಸೂಯೇಜ್ ಫಾರಂ ರಸ್ತೆಯ ಕರು ಮಾರಿಯಮ್ಮ ದೇವಸ್ಥಾನ, ಕೆ.ಜಿ.ಕೊಪ್ಪಲು ಚಾಮುಂಡೇಶ್ವರಿ ದೇವಸ್ಥಾನ, ಕುವೆಂಪು ನಗರದ ಆದಿಶಕ್ತಿ ಬಂದಂತಮ್ಮ ಕಾಳಮ್ಮ ದೇವಸ್ಥಾನ, ಸಿದ್ದಾರ್ಥನಗರ ಸಿದ್ದಿವಿನಾ ಯಕ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಸ್ವರ್ಣಗೌರಿ ಮೂರ್ತಿ ಯನ್ನು ಸ್ಥಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಹಿಳೆಯರು, ಯುವತಿಯರು ಹೊಸ ಸೀರೆ, ಬಟ್ಟೆ ಧರಿಸಿ, ಕೈಯ್ಯಲ್ಲಿ ಬಾಗಿನ ಹಿಡಿದು ದೇವಾಲಯಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. 5 ರೀತಿಯ ಧಾನ್ಯ, 5 ರೀತಿಯ ಹಣ್ಣು, ಅರಿಶಿನ, ಕುಂಕುಮ, ಬಳೆ ಬಿಚ್ಚಾಲೆ, ರವಿಕೆ ಕಣ ಒಳಗೊಂಡಿ ರುವ ಬಾಗಿನವನ್ನು ಗೌರಿಗೆ ಸಮರ್ಪಿಸಿ ದರು. ತಮ್ಮ ಪತಿಗೆ, ಕುಟುಂಬಕ್ಕೆ ಒಳ್ಳೆಯ ದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಬಲಗೈ ಮುಂಗಟ್ಟಿಗೆ ಹೂವು, ದಾರದಿಂದ ಮಾಡಿರುವ ಕಂಕಣ ಕಟ್ಟಿಸಿ ಕೊಂಡರು. ಹೊಸದಾಗಿ ಮದುವೆಯಾ ದವರು ತಮ್ಮ ಪತಿಗೆ, ಕುಟುಂಬಕ್ಕೆ ಒಳ್ಳೆಯ ದಾಗಲಿ, ಸುಮಂಗಲಿತನ ಉಳಿಯಲಿ, ಸದಾಕಾಲ ನೆಮ್ಮದಿ ಇರಲಿ ಎಂದು ಬೇಡಿ ದರೆ, ಅವಿವಾಹಿತ ಯುವತಿಯರು ಶಿವ ನಂತಹ ಗಂಡನನ್ನು ಕರುಣಿಸಲಿ, ಶೀಘ್ರ ವಿವಾಹ ಪ್ರಾಪ್ತಿಯಾಗಲಿ ಎಂದು ಗೌರಿ ಯನ್ನು ಸ್ತುತಿಸಿದರು.