ಗುಂಡ್ಲುಪೇಟೆಯಲ್ಲಿ ಗೌರಿ ಹಬ್ಬದ ಸಂಭ್ರಮ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಗೌರಿ ಹಬ್ಬದ ಸಂಭ್ರಮ

September 13, 2018

ಗುಂಡ್ಲುಪೇಟೆ: ಪಟ್ಟಣ ಹಾಗೂ ತಾಲೂಕಿನಾದ್ಯಂತ ಗೌರಿ ಹಬ್ಬವನ್ನು ಹೆಂಗಳೆಯರು ಸಂಭ್ರಮ ಮತ್ತು ಸಡಗರದಿಂದ ಆಚರಣೆ ಮಾಡಿದರು. ಪಟ್ಟಣ ದಲ್ಲಿ ಮುಂಜಾನೆ 5ರಿಂದಲೇ ದೇವಸ್ಥಾನ ಗಳಿಗೆ ತೆರಳಿ ಮಾತೆ ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದು, ಬಾಗಿನ ಅರ್ಪಿಸು ವುದು ನಿರಂತರವಾಗಿ ಸಾಗಿತು. ಈ ಸಂಖ್ಯೆ ಗಂಟೆಗಳು ಕಳೆಯುತ್ತಿದ್ದಂತೆಯೇ ತಂಡೋ ಪತಂಡವಾಗಿ ಸುಮಂಗಲಿಯರು ಗೌರಿ ಪ್ರತಿಷ್ಠಾಪಿಸಿರುವ ಪ್ರಸನ್ನ ಗಣಪತಿ ದೇವಾ ಲಯ, ರಾಮೇಶ್ವರ ದೇವಾಲಯ ಮತ್ತು ಮನೆಗಳಿಗೆ ತೆರಳಿ ತಮ್ಮ ಬಂಧು ಬಾಂಧವ ರಿಗೆ ಬಾಗಿನ ಅರ್ಪಿಸಿ, ಗೌರಿ ಮಾತೆಗೆ ಪೂಜೆ, ಪಾರ್ಥನೆ ಸಲ್ಲಿಸಿ ಪುನೀತರಾದರು.

ಇಷ್ಟಲ್ಲದೇ ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ತಮ್ಮ ಪೆÇೀಷಕರೊಂ ದಿಗೆ ಟಾಕುಟೀಕಿನಿಂದಲೇ ದೇವಾಲಯ ಕಡೆಗೆ ಹೆಜ್ಜೆ ಇಡುತ್ತಿದ್ದುದು ಸಾಮಾನ್ಯವಾಗಿತ್ತು. ಬೆಲೆ ಏರಿಕೆಯನ್ನು ಲೆಕ್ಕಿಸದೇ ಗೌರಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದುದು ಎಲ್ಲೆಡೆ ಕಂಡು ಬಂದಿತು.

ಮಳೆರಾಯನ ಕಿರಿಕಿರಿ: ಮಧ್ಯಾಹ್ನ ಕಳೆಯು ತ್ತಿದ್ದಂತೆ ಧೋ ಎಂದು ಸುರಿದ ಮಳೆಗೆ ಹಬ್ಬದ ಸಡಗರ ಕೊಂಚ ಮಂಕಾಯಿತು. ಜಿಟಿ ಜಿಟಿ ಮಳೆಯೊಂದಿಗೆ ಶುರುವಾದ ಹನಿಯು, ಧೋ ಎಂದು ಅರ್ಧ ತಾಸಿಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ದೇವಾ ಲಯಕ್ಕೆ ತೆರಳುತ್ತಿದ್ದ ಜನತೆಗೆ ಮತ್ತು ವ್ಯಾಪಾ ರಸ್ಥರಿಗೆ ತೀವ್ರ ತೊಂದರೆಯಾಯಿತು. ಇದ ಲ್ಲದೇ ಅಕ್ಕ ಪಕ್ಕದ ಊರುಗಳಿಗೆ ಗಣಪನ ಮೂರ್ತಿಯನ್ನು ಕೊಂಡೊಯ್ಯಲು ಮಳೆ ರಾಯ ಅಡ್ಡಿಯಾಗಿ ಕೆಲಕಾಲ ಕಿರಿಕಿರಿ ಅನುಭವಿಸಬೇಕಾಯಿತು.

ಟ್ರಾಫಿಕ್ ಜಾಮ್: ಪಟ್ಟಣದ ಪ್ರಮುಖ ರಸ್ತೆಯಾದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಯಲ್ಲಿರುವ ದೇವಾಲಯಗಳಿಗೆ ಭಕ್ತಾದಿ ಗಳು ತಂಡೋಪತಂಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಜನಸಂಚಾರ ಹೆಚ್ಚಾಗಿತ್ತು. ಇದಲ್ಲದೇ ಗಣಪತಿ ಮೂರ್ತಿಗಳನ್ನು ಮತ್ತು ವಿವಿಧ ಹಣ್ಣು ತರಕಾರಿಯನ್ನು ಕೊಳ್ಳು ವುದಕ್ಕೆ ಜನರು ಮುಗಿ ಬೀಳುತ್ತಿದ್ದ ಹಿನ್ನೆಲೆ ಯಲ್ಲಿ ದ್ವಿಚಕ್ರ ವಾಹನಗಳು, ಆಟೋ, ಕಾರು ಸೇರಿದಂತೆ ಹಲವು ಮಾದರಿಯ ವಾಹನಗಳು ಕೆಲಕಾಲ ಟ್ರಾಫಿಕ್ ಸಮಸ್ಯೆ ಯನ್ನು ಎದುರಿಸಬೇಕಾಯಿತು. ಇನ್ನಾದರೂ ಈ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿಸುವುದರೊಂದಿಗೆ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ಪೆÇಲೀಸರು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವ ಜನಿಕರು ಮಾತನಾಡಿಕೊಳ್ಳುತ್ತಿದ್ದದು ಕಂಡು ಬಂತು.

Translate »