ನರೇಗಾ ಕಾಮಗಾರಿ ಗುಣಮಟ್ಟದಿಂದ ನಿರ್ವಹಿಸಲು ಸೂಚನೆ
ಚಾಮರಾಜನಗರ

ನರೇಗಾ ಕಾಮಗಾರಿ ಗುಣಮಟ್ಟದಿಂದ ನಿರ್ವಹಿಸಲು ಸೂಚನೆ

September 13, 2018

ಯಳಂದೂರು:  ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳ ಗಳಲ್ಲಿ ನರೇಗಾ ಕಾಮಗಾರಿಗಳು ಜಾರಿಗೆ ತರುವುದರ ಜತೆಯಲ್ಲಿ ಕಾಮಗಾರಿಗಳು ಕಳಪೆಯಾಗದಂತೆ ಉತ್ತಮ ಗುಣಮಟ್ಟದ ರಸ್ತೆ, ಚರಂಡಿ ನಿರ್ಮಿಸುವ ಮೂಲಕ ವಿಶ್ವಾಸಪೂರ್ವ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ತಾಪಂ ಇಓ ರಾಜು ಗುತ್ತಿಗೆದಾರರಿಗೆ ಸೂಚಿಸಿದರು.

ತಾಲೂಕಿನ ಅಂಬಳೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಬೀದಿಯಲ್ಲಿ ನರೇಗ ಯೋಜನೆ ಯಲ್ಲಿ ಕೈಗೆತ್ತಿಕೊಂಡಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಗ್ರಾಮದ ಬೀದಿಗಳಲ್ಲಿ ದಶಕಗಳಿಂದ ರಸ್ತೆ, ಚರಂಡಿ ಇಲ್ಲದೆ ಸಾರ್ವಜನಿಕರಿಗೆ ಅನಾ ನುಕೂಲವಾಗಿತ್ತು. ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ಗ್ರಾಮಸ್ಥರ ವಿಶ್ವಾಸಕ್ಕೆ ತೆಗೆದು ಕೊಂಡು ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಸುವ ನಿಟ್ಟಿನಲ್ಲಿ ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ಕಾಮ ಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಇದರಿಂದ ಗ್ರಾಮಕ್ಕೆ ಬೇಕಾದ ಸಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮ ಗಾರಿಗಳನ್ನು ನಡೆಸಲಾಗುತ್ತಿದೆ. ಈಗಾ ಗಲೇ ಕಾಮಗಾರಿ ಸ್ಥಳಕ್ಕೆ ತಾಪಂ ರಾಜು ದಿಢೀರ್ ಭೇಟಿ ನೀಡಿ ಸ್ಥಳೀಯ ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಎಂಜಿನೀಯರ್ ಸಲ್ಮಾನ್ ಅವರಿಗೆ ಯಾವುದೇ ಸ್ಥಳೀಯ ಜನಪ್ರತಿನಿಧಿಗಳ ವಿಶ್ವಾಸಕ್ಕೆ ಜೋತು ಬಿದ್ದು ಕಾಮಗಾರಿಗಳನ್ನು ಕಳಪೆ ಮಾಡ ದಂತೆ ತಾಕೀತು ಮಾಡಿದ್ದರು.

ಕೊಳವೆ ಬಾವಿ ಮುಚ್ಚಿದ ಇಓ: ರಸ್ತೆ ಮಧ್ಯದಲ್ಲಿ ಹಳೆಯ ಬೋರ್ವೇಲ್, ಬಾವಿ ಕೊರೆದು ಹಾಗೆ ಬಿಟ್ಟಿದ್ದರಿಂದ ಬಿದ್ದರಿಂದ ಸ್ವತಹ ಇಓ ರಾಜು ಗಮನಹರಿಸಿ ಕಲ್ಲಿ ನಿಂದ ಮುಚ್ಚಿದ ಬಳಿಕ ಸ್ಥಳೀಯ ಜನ ಪ್ರತಿನಿಧಿಗಳಿಗೆ ಇಂತಹ ಕೊಳವಿ ಬಾವಿ ಮುಚ್ಚದೆ ಹೋದರೆ ಏನಾದರೂ ಅನಾ ಹುತ ಸಂಭವಿಸಿದರೆ ಯಾರು ಹೊಣೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ನಾಗರಾಜು, ಗ್ರಾಪಂ ಸದಸ್ಯ ಹಾಲಿನ ಮಹದೇವಶೆಟ್ಟಿ, ಕೆಂಪರಾಜು, ಎಂಜಿನಿ ಯರ್ ಸಲ್ಮಾನ್ ಇತರರಿದ್ದರು.

Translate »