ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಸೂಚನೆ
ಚಾಮರಾಜನಗರ

ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಸೂಚನೆ

September 13, 2018

ಚಾಮರಾಜನಗರ:  ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು 213 ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣ ದಲ್ಲಿ ಇರುವ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾ ಖೆಯ ಪ್ರಭಾರ ಇಂಜಿನಿಯರ್ ರವಿಕುಮಾರ್, ಜಿಲ್ಲೆಯಲ್ಲಿ ವಿವಿಧ ಇಲಾಖೆಯಿಂದ 213 ಶುದ್ಧಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕಾಗಿದೆ. ನಮ್ಮ ಇಲಾಖೆಯಿಂದ 90 ಘಟಕಗಳನ್ನು ಪ್ರಾರಂಭಿಸಲು ಉದ್ದೇ ಶಿಸಲಾಗಿದ್ದು, 16 ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಸಚಿವ ಪುಟ್ಟರಂಗಶೆಟ್ಟಿ, ಇದು ವರೆಗೆ ಎಷ್ಟು ಘಟಕಗಳನ್ನು ಸ್ಥಾಪಿಸಲಾ ಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿ ಸಿದ ರವಿಕುಮಾರ್, ಒಂದು ಘಟಕ ಆರಂಭವಾಗಿದೆ. ಉಳಿದ ಘಟಕಗಳ ಸ್ಥಾಪ ನೆಗೆ ಕ್ರಮ ವಹಿಸಲಾಗಿದೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಗಳ ಅವಶ್ಯಕತೆ ಇದೆ. ಘಟಕಗಳ ಸ್ಥಾಪನೆಗೆ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸುವಂತೆ ಸೂಚಿಸಿದರು.

591.52 ಎಕರೆ ಫಸಲು ಹಾನಿ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರು ಮಲೇಶ್ ಮಾತನಾಡಿ, ಕಾವೇರಿ ನದಿ ಪ್ರವಾಹ ಪೀಡಿತ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ದಾಸನಪುರ, ಹಳೆ ಹಂಪಾ ಪುರ, ಹಳೆ ಅಣಗಳ್ಳಿ ಸೇರಿದಂತೆ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ 591.52 ಎಕರೆ ಯಲ್ಲಿ ಭತ್ತ, ಕಬ್ಬು, ಮುಸುಕಿನ ಜೋಳ ಬೆಳೆಗಳು ಜಲಾವೃತಗೊಂಡಿವೆ ಎಂದರು.
ನಷ್ಟ ಅನುಭವಿಸಿರುವ ರೈತರಿಗೆ 32.33 ಲಕ್ಷ ರೂ. ಬೆಳೆ ಪರಿಹಾರ ವಿತರಿಸಬೇಕಾ ಗಿದೆ. ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 13,500 ರೂ. ಪರಿಹಾರ ನಿಗದಿ ಮಾಡಲಾ ಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.

ಕಾಮಗಾರಿ ಆರಂಭಿಸಿ: ಸುವರ್ಣಾವತಿ ಜಲಾಶಯದ ಜೆಇ ಮಹೇಶ್ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಹುತ್ತೂರು ಮತ ಯೋಜನೆಯ 1ನೇ ಹಂತದ ಕಾಮ ಗಾರಿ ಬಹುತೇಕ ಪೂರ್ಣಗೊಂಡಿದೆ. 2ನೇ ಹಂತದ ಕಾಮಗಾರಿ ಇನ್ನೂ ಪ್ರಾರಂಭ ವಾಗಿಲ್ಲ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪುಟ್ಟರಂಗಶೆಟ್ಟಿ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ಶಾಸಕರಾದ ಆರ್.ನಾಗೇಂದ್ರ, ಸಿ.ಎಸ್. ನಿರಂಜನ್‍ಕುಮಾರ್, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ಜಿಪಂ ಸಿಇಓ ಡಾ.ಕೆ.ಹರೀಶ್ ಕುಮಾರ್, ಎಸ್ಪಿ ಧರ್ಮೇಂಧರ್ ಕುಮಾರ್ ಮೀನಾ ಸಭೆಯಲ್ಲಿ ಉಪಸ್ಥಿತರಿದ್ದರು.

ಕೆಟ್ಟಿರುವ ಧ್ವನಿವರ್ಧಕ
ಚಾಮರಾಜನಗರ:  ನಗರದ ಜಿಲ್ಲಾಡಳಿತ ಭವನದ ಆವರಣ ದಲ್ಲಿ ಇರುವ ಜಿಪಂ ನೂತನ ಸಭಾಂಗಣದಲ್ಲಿ ಅಳವಡಿಸಿರುವ ಧ್ವನಿವರ್ಧಕ ಕೆಟ್ಟಿದೆ.

ಧ್ವನಿವರ್ಧಕ ಕೆಟ್ಟಿರುವ ಕಾರಣ ಇಂದಿಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅವ್ಯವಸ್ಥೆ ಯಿಂದ ಕೂಡಿತ್ತು. ಸಚಿವರು, ಶಾಸಕರು ನೀಡುತ್ತಿದ್ದ ಸೂಚನೆ, ಸಲಹೆಗಳು, ಅಧಿಕಾರಿ ಗಳು ನೀಡುತ್ತಿದ್ದ ಮಾಹಿತಿ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಹೀಗಾಗಿ ಸಭೆಯಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ, ಯಾವ ವಿಷಯ ಚರ್ಚೆ ಆಗುತ್ತಿದೆ ಎಂಬುದೇ ತಿಳಿಯದಂತಾಗಿತ್ತು. ಪತ್ರಕರ್ತರ ಗ್ಯಾಲರಿಗಂತೂ ಕೇಳುತ್ತಲೇ ಇರದ ಕಾರಣ ವರದಿಗೆ ತೆರಳಿದ್ದ ಪತ್ರಕರ್ತರ ಪರಿಪಾಟಲು ಹೇಳತೀರದಂತಿತ್ತು.

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಗಮನಕ್ಕೆ ಧ್ವನಿ ವರ್ಧಕ ಸರಿ ಇಲ್ಲದ ಬಗ್ಗೆ ಮಾಧ್ಯಮದವರು ಗಮನ ಸೆಳೆದರು. ಸಂಬಂಧಪಟ್ಟವರು ಬಂದು ಪರಿಶೀಲಿಸಿದಾಗ, ಧ್ವನಿವರ್ಧಕ ಕೆಟ್ಟಿರುವುದು ಬೆಳಕಿಗೆ ಬಂತು.

Translate »