ಇಂದು ದೊಡ್ಡ ಗಣಪತಿ ಪ್ರತಿಷ್ಠಾಪನೆ
ಚಾಮರಾಜನಗರ

ಇಂದು ದೊಡ್ಡ ಗಣಪತಿ ಪ್ರತಿಷ್ಠಾಪನೆ

September 13, 2018

ಚಾಮರಾಜನಗರ: ಚಾಮರಾಜನಗ ರದಲ್ಲಿ 1962 ರಿಂದಲೂ ಅಸ್ಥಿ ತ್ವದಲ್ಲಿ ಇರುವ ಶ್ರೀವಿದ್ಯಾ ಗಣ ಪತಿ ಮಂಡಳಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ರಥದ ಬೀದಿಯಲ್ಲಿ ಗಣ ಪತಿಯನ್ನು ಪ್ರತಿಷ್ಠಾಪಿಸಲಿದೆ.

ಸಿಂಹಾಸನದ ಮೇಲೆ ವಿರಾಜಮಾನ ರಾಗಿ ಕುಳಿತಿರುವ ದರ್ಬಾರ್ ಗಣಪತಿಯನ್ನು ಈ ವರ್ಷ ಪ್ರತಿಷ್ಠಾಪಿಸಲಾಗುವುದು. ಗಣೇಶ ಹಬ್ಬದ ದಿನವಾದ ಗುರುವಾರ ದರ್ಬಾರ್ ಗಣಪತಿಯನ್ನು ಕೂರಿಸಲು ಸಿದ್ಧತೆಗಳು ನಡೆ ದಿದೆ ಎಂದು ಗಣಪತಿ ಮಂಡಳಿ ಅಧ್ಯಕ್ಷ ಎಂ.ಜಿ.ಗಣೇಶ್ ತಿಳಿಸಿದ್ದಾರೆ. ಶ್ರೀ ವಿದ್ಯಾ ಗಣಪತಿ ಮಂಡಳಿಯು ಪ್ರತಿ ವರ್ಷವೂ ವಿಭಿನ್ನ ಶೈಲಿಯ ಗಣಪತಿಯನ್ನು ಪ್ರತಿಷ್ಠಾ ಪಿಸುವುದು ವಿಶೇಷ. ಇದಲ್ಲದೇ ಗಣೇಶ ಹಬ್ಬದ ದಿನದಂದು ಚಿಕ್ಕ ಗಣಪತಿಯನ್ನು ಪ್ರತಿಷ್ಠಾಪಿಸಲಾಗು ತ್ತಿತ್ತು. ಆದರೆ ಈ ಬಾರಿ ಗಣೇಶ ಹಬ್ಬದ ದಿನದಂದೇ ದೊಡ್ಡ ಗಣಪತಿ ಯನ್ನು ಪ್ರತಿಷ್ಠಾಪಿಸುತ್ತಿರುವುದು ವಿಶೇಷವಾಗಿದೆ.

Translate »