ನಿರಾಶ್ರಿತ ಕುಟುಂಬದ ಯುವತಿಗೆ ವಿವಾಹ ಭಾಗ್ಯ
ಕೊಡಗು

ನಿರಾಶ್ರಿತ ಕುಟುಂಬದ ಯುವತಿಗೆ ವಿವಾಹ ಭಾಗ್ಯ

September 13, 2018

ಮಡಿಕೇರಿ: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಕುಟುಂಬ ಸಹಿತ ನಿರಾಶ್ರಿತ ಶಿಬಿರ ಸೇರಿದ್ದ ಹೆಣ್ಣು ಮಗಳೊಬ್ಬಳ ವಿವಾಹಕ್ಕೆ ಗೌರಿ ಹಬ್ಬದ ಶುಭ ದಿನದಂದು ನಗರದ ಓಂಕಾರೇಶ್ವರ ದೇವಾಲಯ ಸಾಕ್ಷಿಯಾಯಿತು.

ಭೂ ಕುಸಿತ ಮತ್ತು ಪ್ರವಾಹದಿಂದ ಸಂತ್ರಸ್ಥರಾದ ಮಕ್ಕಂದೂರು ಹೆಮ್ಮೆತ್ತಾಳು ಗ್ರಾಮದ ರಾಟೆಮನೆ ಪೈಸಾರಿ ನಿವಾಸಿ ರಂಜಿತಾ ಮತ್ತು ಕೇರಳ ಕಣ್ಣೂರಿನ ರಂಜಿತ್ ಅವರುಗಳು ಸರಳ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಗರದ ನಿರಾಶ್ರಿತರ ಶಿಬಿರದಲ್ಲಿದ್ದ ರಂಜಿತಾ ಅವರ ಕುಟುಂಬಕ್ಕೆ ಸೇವಾ ಭಾರತಿ, ಲಯನ್ಸ್ ಮತ್ತು ವಿವಿಧ ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚುವ ಮೂಲಕ ವಿವಾಹ ನೆರವೇರಿಸಿದರು.

ಆಗಸ್ಟ್ 16 ರಂದು ಮಕ್ಕಂದೂರು ವಿನಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ರಂಜಿತಾ ಅವರ ಕುಟುಂಬ ಮನೆಯನ್ನು ಕಳೆದುಕೊಂಡಿತ್ತು. ಮಾತ್ರವಲ್ಲದೆ, ಸೆ.12ರ ಮದುವೆಗೆಂದು ಖರೀದಿಸಿದ್ದ ಬಟ್ಟೆ, ಆಭ ರಣಗಳು ಸೇರಿದಂತೆ ಅಮೂಲ್ಯ ವಸ್ತು ಳು ಮಣ್ಣು ಪಾಲಾಗಿದ್ದವು.

ಈ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸೇವಾಭಾರತಿ ಸೇರಿ ದಂತೆ ವಿವಿಧ ಸಂಘ ಸಂಸ್ಥೆಗಳು ಮುಂದೆ ನಿಂತು ಬಡ ಕುಟುಂಬದ ಹೆಣ್ಣು ಮಗಳಿಗೆ ಕಂಕಣ ಭಾಗ್ಯ ಕಲ್ಪಿಸಿದರು.

Translate »