ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗೌರಿಹಬ್ಬದ ಸಂಭ್ರಮ ಮನೆ ಮಾಡಿದೆ. ಇದರ ಜತೆಗೆ ಮೈಸೂರು ಅರಮನೆಯಲ್ಲೂ ಯುವರಾಣಿ ತ್ರಿಷಿಕಾಕುಮಾರಿ ಒಡೆಯರ್ ಅವರಿಂದ ಗೌರಿ ಪೂಜೆ ನೆರವೇರಿದೆ. ತ್ರಿಷಿಕಾಕುಮಾರಿ ಅವರು ಸಂಪ್ರದಾಯ ಬದ್ಧವಾಗಿ ಗೌರಿ ಪೂಜೆಯನ್ನು ಅರಮನೆಯಲ್ಲಿ ನೆರವೇರಿಸಿರುವ ಫೋಟೋ ಹಾಗೂ ಪೂಜೆಯ ನಂತರ ಅರಮನೆಗೆ ಬಂದಿದ್ದ ಮುತ್ತೈದೆಯರಿಗೆ ಬಾಗಿನ ನೀಡಿ, ಶುಭಾಶಯ ಕೋರುತ್ತಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪತ್ನಿಯ ಪೂಜಾ ಕೈಂಕರ್ಯಗಳ ಫೋಟೋಗಳನ್ನು ಯದುವೀರ್ ಅವರು, ತಮ್ಮ ಫೇಸ್‍ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ…
ಕಾಯೇ ಶ್ರೀ ಗೌರೀ…
September 13, 2018ಮೈಸೂರು: ಗಣೇಶ ಹಬ್ಬದ ಮುನ್ನಾ ದಿನದ ಸ್ವರ್ಣ ಗೌರಿ ಹಬ್ಬವನ್ನು ಬುಧವಾರ ಮೈಸೂರಿನಲ್ಲಿ ಮಹಿಳೆಯರು ಭಕ್ತಿ ಭಾವದಿಂದ ಆಚರಿ ಸಿದರು. ಮೈಸೂರಿನ ವಿವಿಧ ದೇವಾ ಲಯಗಳಲ್ಲಿ ಸ್ಥಾಪಿಸಲಾಗಿದ್ದ ಸ್ವರ್ಣಗೌರಿ ಮೂರ್ತಿಗೆ ಮಹಿಳೆಯರು ಬಾಗಿನ ಸಮರ್ಪಿಸಿ ಭಕ್ತಿ ಭಾವ ಮೆರೆದರು. ಮೈಸೂರಿನ ಅಗ್ರಹಾರ ನೂರೊಂದು ಗಣಪತಿ ದೇವಸ್ಥಾನ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆಯ ಅಮೃ ತೇಶ್ವರ ದೇವಸ್ಥಾನ, ವಿದ್ಯಾರಣ್ಯಪುರಂ ಸೂಯೇಜ್ ಫಾರಂ ರಸ್ತೆಯ ಕರು ಮಾರಿಯಮ್ಮ ದೇವಸ್ಥಾನ, ಕೆ.ಜಿ.ಕೊಪ್ಪಲು ಚಾಮುಂಡೇಶ್ವರಿ ದೇವಸ್ಥಾನ, ಕುವೆಂಪು ನಗರದ ಆದಿಶಕ್ತಿ ಬಂದಂತಮ್ಮ ಕಾಳಮ್ಮ…
ಜಿಲ್ಲೆಯಾದ್ಯಂತ ಸಂಭ್ರಮದಿಂದ ಗೌರಿ ಹಬ್ಬ ಆಚರಣೆ
September 13, 2018ಗೌರಿ ಪೂಜೆ ಖ್ಯಾತಿಯ ಕುದೇರಿನಲ್ಲಿ ಸಂಭ್ರಮ ಚಾಮರಾಜನಗರ: ಚಾಮರಾಜನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಬುಧವಾರ ಗೌರಿ ಹಬ್ಬವನ್ನು ಅದ್ಧೂರಿ ಯಾಗಿ ಆಚರಿಸಲಾಯಿತು. ಜಿಲ್ಲೆಯಲ್ಲಿ ಗೌರಿ ಪೂಜೆಗೆ ಹೆಸರುವಾಸಿ ಆಗಿರುವ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಗ್ರಾಮದ ಶ್ರೀ ಸ್ವರ್ಣಗೌರಮ್ಮ ದೇವಸ್ಥಾನಕ್ಕೆ ಆಗ ಮಿಸಿದ ಮುತ್ತೈದೆಯರು ಗೌರಿಗೆ ಪೂಜೆ ಸಲ್ಲಿಸಿದರು. ಜಿಲ್ಲೆಯ ಅನೇಕ ದೇವಾಲಯಗಳಲ್ಲಿ, ಪ್ರಮುಖರ ಮನೆಗಳಲ್ಲಿ ಗೌರಿಯನ್ನು ಪ್ರತಿ ಷ್ಠಾಪಿಸಲಾಗಿತ್ತು. ಇಲ್ಲಿಗೆ ಆಗಮಿಸಿದ ಮುತ್ತೈ ದೆಯರು, ಗೌರಿಗೆ ಪೂಜೆ…
ಗುಂಡ್ಲುಪೇಟೆಯಲ್ಲಿ ಗೌರಿ ಹಬ್ಬದ ಸಂಭ್ರಮ
September 13, 2018ಗುಂಡ್ಲುಪೇಟೆ: ಪಟ್ಟಣ ಹಾಗೂ ತಾಲೂಕಿನಾದ್ಯಂತ ಗೌರಿ ಹಬ್ಬವನ್ನು ಹೆಂಗಳೆಯರು ಸಂಭ್ರಮ ಮತ್ತು ಸಡಗರದಿಂದ ಆಚರಣೆ ಮಾಡಿದರು. ಪಟ್ಟಣ ದಲ್ಲಿ ಮುಂಜಾನೆ 5ರಿಂದಲೇ ದೇವಸ್ಥಾನ ಗಳಿಗೆ ತೆರಳಿ ಮಾತೆ ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದು, ಬಾಗಿನ ಅರ್ಪಿಸು ವುದು ನಿರಂತರವಾಗಿ ಸಾಗಿತು. ಈ ಸಂಖ್ಯೆ ಗಂಟೆಗಳು ಕಳೆಯುತ್ತಿದ್ದಂತೆಯೇ ತಂಡೋ ಪತಂಡವಾಗಿ ಸುಮಂಗಲಿಯರು ಗೌರಿ ಪ್ರತಿಷ್ಠಾಪಿಸಿರುವ ಪ್ರಸನ್ನ ಗಣಪತಿ ದೇವಾ ಲಯ, ರಾಮೇಶ್ವರ ದೇವಾಲಯ ಮತ್ತು ಮನೆಗಳಿಗೆ ತೆರಳಿ ತಮ್ಮ ಬಂಧು ಬಾಂಧವ ರಿಗೆ ಬಾಗಿನ ಅರ್ಪಿಸಿ, ಗೌರಿ ಮಾತೆಗೆ…
ಜಿಲ್ಲೆಯೆಲ್ಲೆಡೆ ಸ್ವರ್ಣಗೌರಿ ವ್ರತ ಸಂಭ್ರಮದ ಆಚರಣೆ: ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ತಯಾರಿ
September 13, 2018ಹಾಸನ: ಜಿಲ್ಲೆಯೆಲ್ಲೆಡೆ ಇಂದು ಶ್ರದ್ಧಾಭಕ್ತಿಯಿಂದ ಸ್ವರ್ಣಗೌರಿ ಹಬ್ಬ ಆಚರಿ ಸಲಾಯಿತು. ವಿಘ್ನನಿವಾರಕನ ಪ್ರತಿಷ್ಠಾಪ ನೆಗೆ ಅಗತ್ಯ ತಯಾರಿ ನಡೆದಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ನಗರದ ಅರಳೇ ಪೇಟೆಯ ಶ್ರೀ ಬಸವೇಶ್ವರ ದೇಗುಲದಲ್ಲಿ ಸ್ವರ್ಣಗೌರಿಯನ್ನು ಪ್ರತಿಷ್ಠಾ ಪಿಸಲಾಗಿತ್ತು. ಬೆಳಗ್ಗಿನಿಂದಲೇ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಇದೇ ವೇಳೆ ಪ್ರಸಾದ ವಿತರಣೆ ಏರ್ಪಡಿ ಸಲಾಗಿತ್ತು. ಹಲವು ಮನೆಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಭರ್ಜರಿ ತಯಾರಿ: ನಾಳೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣಪತಿ ಕೂರಿಸಲು ಮಕ್ಕಳು,…
ಸ್ವರ್ಣಗೌರಿ ಜಾತ್ರಾ ಮಹೋತ್ಸವಕ್ಕೆ ಮಾಡಾಳು ಸನ್ನದ್ಧ
September 12, 2018ಅರಸೀಕೆರೆ: ರಾಜ್ಯದ ಮೂಲೆ ಮೂಲೆಗಳಲ್ಲೂ ಮಾಡಾಳು ಗೌರಮ್ಮನೆಂದು ಖ್ಯಾತಿಯಾಗಿರುವ ತಾಲೂಕು ಮಾಡಾಳು ಗ್ರಾಮದ ಸ್ವರ್ಣ ಗೌರಿ ಅಮ್ಮನವರ ಒಂಭತ್ತು ದಿನಗಳ ಜಾತ್ರಾ ಮಹೋತ್ಸವ ನಾಳೆ (ಸೆ.12) ಆರಂಭವಾಗಲಿದ್ದು. ಈ 9 ದಿನಗಳಲ್ಲಿ ಆಗಮಿಸುವ ಭಕ್ತ ಸಾಗರ ಸತ್ಕರಿಸಲು ಗ್ರಾಮ ಸರ್ವ ಸನ್ನದ್ಧವಾಗಿದೆ. ಅರಸೀಕೆರೆ ಪ್ರಸನ್ನ ಗಣಪತಿ ರಾಜ್ಯಾದ್ಯಂತ ಹೆಸರುವಾಸಿಯಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಇದೇ ತಾಲೂಕಿನ ಮಾಡಾಳು ಗ್ರಾಮದ ಸ್ವರ್ಣ ಗೌರಿ ಅಮ್ಮನವರು ವಿನಾಯಕ ಚೌತಿ ಹಿಂದಿನ ದಿನ ಸ್ಥಾಪಿತವಾಗಿ ಗಣಪತಿ ಆಗಮನಕ್ಕೆ ಮುನ್ನುಡಿ ಬರೆಯುವುದು ಈ ಹಿಂದಿನಿಂದಲೂ…