ಜಿಲ್ಲೆಯೆಲ್ಲೆಡೆ ಸ್ವರ್ಣಗೌರಿ ವ್ರತ ಸಂಭ್ರಮದ ಆಚರಣೆ: ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ತಯಾರಿ
ಹಾಸನ

ಜಿಲ್ಲೆಯೆಲ್ಲೆಡೆ ಸ್ವರ್ಣಗೌರಿ ವ್ರತ ಸಂಭ್ರಮದ ಆಚರಣೆ: ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ತಯಾರಿ

September 13, 2018

ಹಾಸನ: ಜಿಲ್ಲೆಯೆಲ್ಲೆಡೆ ಇಂದು ಶ್ರದ್ಧಾಭಕ್ತಿಯಿಂದ ಸ್ವರ್ಣಗೌರಿ ಹಬ್ಬ ಆಚರಿ ಸಲಾಯಿತು. ವಿಘ್ನನಿವಾರಕನ ಪ್ರತಿಷ್ಠಾಪ ನೆಗೆ ಅಗತ್ಯ ತಯಾರಿ ನಡೆದಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ನಗರದ ಅರಳೇ ಪೇಟೆಯ ಶ್ರೀ ಬಸವೇಶ್ವರ ದೇಗುಲದಲ್ಲಿ ಸ್ವರ್ಣಗೌರಿಯನ್ನು ಪ್ರತಿಷ್ಠಾ ಪಿಸಲಾಗಿತ್ತು. ಬೆಳಗ್ಗಿನಿಂದಲೇ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಇದೇ ವೇಳೆ ಪ್ರಸಾದ ವಿತರಣೆ ಏರ್ಪಡಿ ಸಲಾಗಿತ್ತು. ಹಲವು ಮನೆಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಭರ್ಜರಿ ತಯಾರಿ: ನಾಳೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣಪತಿ ಕೂರಿಸಲು ಮಕ್ಕಳು, ಯುವ ಸಮೂಹ ಸೇರಿದಂತೆ ಜಿಲ್ಲೆಯ ಜನತೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ನಗರದ ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರು ಕಟ್ಟೆಯಲ್ಲಿ ಗಣಪನ ಮೂರ್ತಿ ಖರೀದಿಸಲು ಜನ ಮುಗಿಬಿದ್ದರು. ಹಳೆ ಬಸ್‍ನಿಲ್ದಾಣ ರಸ್ತೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ 68ನೇ ವರ್ಷದ ಪೆಂಡಲ್ ಗಣಪತಿ ಪ್ರತಿಷ್ಠಾಪಿ ಸಲಾಗುತ್ತಿದ್ದು, ಸಿದ್ಧತೆ ಪೂರ್ಣಗೊಂಡಿದೆ. ವಿವಿಧ ಭಾಗಗಳಲ್ಲೂ ಗಣಪತಿ ಕೂರಿಸಲು ಯುವ ಸಮೂಹ, ಮಕ್ಕಳು ಕೆಲ ದಿನಗಳಿಂದಲೇ ಸಿದ್ಧತೆ ಮಾಡಿಕೊಂಡಿದ್ದು, ಮುನ್ನ ದಿನವಾದ ಇಂದು ಚಪ್ಪರ, ಶೆಡ್‍ಗಳ ನಿರ್ಮಾಣ ಮಾಡಿ ದರು. ನೆನ್ನೆಯಿಂದಲೇ ಮೂರ್ತಿ ಖರೀದಿ ಆರಂಭವಾಗಿದ್ದು, ಇಂದು ಸಹ ಖರೀದಿ ಭರಾಟೆ ಕಂಡು ಬಂತು. ಗಣೇಶ ಪ್ರತಿಷ್ಠಾ ಪನೆಗೆ ಜನ ಕಾಯುತ್ತಿದ್ದು, ಹಬ್ಬ ಹಿನ್ನೆಲೆ ನಗರದ ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರು ಕಟ್ಟೆಯಲ್ಲಿ ಹಬ್ಬದ ಅಗತ್ಯ ಸಾಮಗ್ರಿ ಖರೀ ದಿಗೆ ಸಾರ್ವಜನಿಕರು ಮುಗಿ ಬಿದ್ದಿದ್ದರು. ವಿವಿಧ ವಸ್ತುಗಳ ಬೆಲೆ ಸಾಮಾನ್ಯವಾ ಗಿದ್ದರೂ ಬಾಳೆಹಣ್ಣು ಕೆ.ಜಿ.ಗೆ 100ರಿಂದ 120 ರೂ. ಗಳವರೆಗೂ ಏರಿಕೆ ಕಂಡು ಬಂತು. ಉಳಿದಂತೆ ಮಾವಿನಸೊಪ್ಪು ಕಟ್ಟಿಗೆ 10 ರೂ, ಬಳೆ ಡಜೆನ್‍ಗೆ 20ರಿಂದ 40 ರೂಗಳು. ಬಾಳೆಕಂಬ ಜೋಡಿ ಗಾತ್ರಕ್ಕನುಗುಣ ದರ ನಿಗದಿ ಯಾಗಿತ್ತು. ಸೇಬು ಕೆ.ಜಿ.ಗೆ 100ರಿಂದ 140 ರೂ. ಇತ್ತು. ಒಟ್ಟಾರೇ ಮಹಿಳೆಯರು ಗೌರಿ ಹಬ್ಬ ಆಚರಿಸಿ ಸಂಭ್ರಮಿಸಿದರೆ, ಜಿಲ್ಲಾದ್ಯಂತ ವಿಘ್ನನಿವಾರಕನ ಆರಾಧನೆಗೆ ಸಡಗರ -ಸಂಭ್ರಮ ಮನೆ ಮಾಡಿದೆ.

Translate »