ಅಕ್ರಮ ಮರಳು ಗಣಿಗಾರಿಕೆಗೆ ತಡೆಗೆ ಆಗ್ರಹ
ಹಾಸನ

ಅಕ್ರಮ ಮರಳು ಗಣಿಗಾರಿಕೆಗೆ ತಡೆಗೆ ಆಗ್ರಹ

September 13, 2018

ರಾಮನಾಥಪುರ: ಇಲ್ಲಿನ ಕಾವೇರಿ ನದಿ ಪಾತ್ರದ ಹಿನ್ನೀರು ಪ್ರದೇಶ ಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಯಿಂದ ಜಿಲ್ಲಾ ಮತ್ತು ತಾಲೂಕು ಆಡಳಿತ ನಿರ್ಲ ಕ್ಷ್ಯದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಪ್ರಮಾಣದ ನಷ್ಟ ಉಂಟಾ ಗುತ್ತಿದ್ದು, ನದಿ ವ್ಯಾಪ್ತಿಯ ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಇಲ್ಲಿಯ ಶ್ರೀ ರಾಮೇ ಶ್ವರಸ್ವಾಮಿ ಅಘಸ್ತ್ಯೇಶ್ವರಸ್ವಾಮಿ ಸೇರಿದಂತೆ ಮುಂತಾದ ದೇವಸ್ಥಾನದ ಬಳಿ ಪ್ರತಿನಿತ್ಯ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ದಂಧೆ ಕೋರರು ಮರಳು ತೆಗೆಯುತ್ತಿದ್ದಾರೆ. ಕಾವೇರಿ ನದಿ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕ ಮರಳು ತೆಗೆದಿರುವ ಪರಿಣಾಮ ಈಗಾಗಲೇ ಶ್ರೀರಾಮೇಶ್ವರಸ್ವಾಮಿ ದೇವಸ್ಥಾನದ ಹಿಂಭಾ ಗದ ಪೌಳಿ ಮತ್ತು ಗೋಡೆ ಶಿಥಿಲಗೊಂಡು ಬಿರುಕುಬಿಟ್ಟಿದ್ದು, ಬೀಳುವ ಹಂತ ತಲುಪಿದೆ.

ಕೊಡಗಿನ ತಲಕಾವೇರಿಯಲ್ಲಿ ಬಾರಿ ಮಳೆ ಬಿದ್ದ ಪರಿಣಾಮ ಪ್ರವಾಹದಿಂದ ಕಾವೇರಿ ಪಾತ್ರದಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದ್ದು, ರಾಮನಾಥಪುರ, ಬಸವಪಟ್ಟಣ, ಕೇರಳಾಪುರ, ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ಹಿನ್ನೀರು ಪ್ರದೇಶ ದಲ್ಲಿ ಅವ್ಯಾಹತವಾಗಿ ಮರಳು ಲಭಿಸು ತ್ತಿದೆ. ಇದರಿಂದ ನಿತ್ಯ ರಾತ್ರಿ ವೇಳೆ ಅಕ್ರಮ ಮರಳು ಸಾಗಾಣೆ ಎಗ್ಗಿಲ್ಲದೆ ಸಾಗಿದೆ ಎಂದು ನದಿ ಪಾತ್ರದ ವ್ಯಾಪ್ತಿಯ ಜನರು ನೋವು ವ್ಯಕ್ತಪಡಿಸಿದ್ದಾರೆ.

ಮರಳು ದಂಧೆಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಇದಕ್ಕೆ ಕಡಿವಾಣ ಹಾಕದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಪ್ರಮಾಣದ ನಷ್ಟ ಉಂಟಾಗುತ್ತಿದ್ದು, ಕಾವೇರಿ ನದಿ ಪಾತ್ರದ ವ್ಯಾಪ್ತಿಯಲ್ಲಿ ಈ ಅಕ್ರಮ ಮರಳು ಗಣಿಗಾರಿಕೆ ನಡೆಸದಂತೆ ಜಿಲ್ಲಾ, ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳ ಬೇಕಿದೆ.

Translate »