ಮರಳು ಸಾಗಣೆ ತಡೆಗೆ ಪರಿವರ್ತನಾ ವೇದಿಕೆ ಪ್ರತಿಭಟನೆ
ಹಾಸನ

ಮರಳು ಸಾಗಣೆ ತಡೆಗೆ ಪರಿವರ್ತನಾ ವೇದಿಕೆ ಪ್ರತಿಭಟನೆ

July 5, 2018

ಹಾಸನ: ಮಳೆಗಾಲ ಮುಗಿಯುವವರೆಗೂ ಮರಳು ಸಾಗಾಣೆ ತಡೆಯುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕು ಪರಿವರ್ತನಾ ವೇದಿಕೆಯಿಂದ ಪ್ರತಿಭಟಿಸಲಾಯಿತು. ನಗರದ ಡಿಸಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗುವ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಕಳೆದ 3 ತಿಂಗಳಿಂದ ಸಕಲೇಶಪುರ ತಾಲೂಕಿನ ನಿಡಿಗೆರೆ ಹಾಗೂ ಹಳ್ಳಿ ಬಯಲು ಗ್ರಾಮದಲ್ಲಿ ಹೆಚ್ಚು ಲಾರಿಗಳು ಮರಳು ಸಾಗಾಣೆ ಮಾಡುತ್ತಿರುವುದರಿಂದ ಗ್ರಾಮದ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದೆ. ಯಾವುದೇ ಸಣ್ಣಪುಟ್ಟ ವಾಹನಗಳ ಮೂಲಕ ನಮ್ಮ ಗದ್ದೆ ತೋಟಗಳಿಗೆ ಗೊಬ್ಬರ ಹಾಗೂ ಇತರೆ ಕೃಷಿಕರ ವಸ್ತುಗಳನ್ನೂ ಕೊಂಡೊಯ್ಯ ದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಲವತ್ತುಕೊಂಡರು.

ಸಮಸ್ಯೆಗಳ ಬಗ್ಗೆ ಸಕಲೇಶಪುರ ತಾಲೂಕಿನ ಎಸಿ ಅವರಿಗೆ ಕಳೆದ ತಿಂಗಳು ಮನವಿ ಮಾಡಲಾಗಿತ್ತು. ಜೊತೆಗೆ ಜಿಲ್ಲಾ ಎಸ್ಪಿಗೂ ದೂರು ನೀಡಲಾಗಿದ್ದರೂ ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ದೂರಿದರು.

ಮರಳು ಲಾರಿ ಸಂಚಾರದ ಪರಿಣಾಮ ರಸ್ತೆ ಪಕ್ಕದಲ್ಲಿದ್ದ ಒಂದು ಕೊಳವೆ ಬಾವಿ ಸಂಪೂರ್ಣ ಹಾಳಾಗಿದೆ. ಜನರು ಈ ಭಾಗದಲ್ಲಿ ಸಂಚರಿಸದಷ್ಟು ರಸ್ತೆ ಹಾಳಾಗಿದ್ದು, ಪ್ರತಿನಿತ್ಯ ಸಮಸ್ಯೆ ಎದುರಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದ ಕಾರಣ ಗ್ರಾಮಸ್ಥರೆಲ್ಲಾ ಸೇರಿ ಮರಳು ಸಾಗಾಣೆ ಸಂಚಾರಕ್ಕೆ ಅಡ್ಡಿಪಡಿಸಲು ರಸ್ತೆ ತಡೆದರೂ. ಗುತ್ತಿಗೆದಾರರು ಪೊಲೀಸ್ ಸರ್ಪಗಾವಲಿನಲ್ಲಿ ನಮ್ಮನ್ನು ಬೆದರಿಸಿ ಮರಳು ಸಾಗಾಣಿಕೆಗೆ ಅವಕಾಶ ಮಾಡಿ ಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ಪಡೆಯುವಾಗ ನೀಡಲಾಗಿದ್ದ ಯಾವುದೇ ಮಾನದಂಡ ಮತ್ತು ಷರತ್ತುಗಳನ್ನು ಗುತ್ತಿಗೆದಾರರು ಪಾಲಿಸುತ್ತಿಲ್ಲ. ನಿಯಮದ ಪ್ರಕಾರ ಬೆಳಿಗ್ಗೆ 6 ಗಂಟೆಯಿಂದ ಮರಳು ಸಾಗಾಣೆ ಮಾಡಬೇಕು. ಆದರೆ ರಾತ್ರಿ ವೇಳೆಯಲ್ಲಿ ಅಧಿಕಾರಿಗಳೇ ಮುಂದೆ ನಿಂತು ಮರಳು ಸಾಗಾಣಿಗೆ ನೆರವು ನೀಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ ರಲ್ಲ್ರದೆ, ಕೂಡಲೇ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಪಡಿಸಿ, ಮಳೆಗಾಲ ನಿಲ್ಲುವವರೆಗೂ ಮರಳು ಸಾಗಾಣೆ ತಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಜಿಲ್ಲಾಡಳಿ ತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಕಲೇಶಪುರ ಪರಿವರ್ತನಾ ವೇದಿಕೆ ತಾಲೂಕು ಅಧ್ಯಕ್ಷ ಎನ್.ಸಿ. ಗೋವಿಂದರಾಜು, ಸಂಯೋಜಕ ಸ್ಟೀವನ್ ಪ್ರಕಾಶ್, ಪಾರ್ವತಿ, ಸಾವಿತ್ರಿ, ನಾಗೇಶ್, ಲಕ್ಷ್ಮಣ್ ಇತರರಿದ್ದರು.

Translate »