ಹಾಸನ:ಆರೋಗ್ಯ ಕರ್ನಾಟಕ ಜಾರಿ
ಹಾಸನ

ಹಾಸನ:ಆರೋಗ್ಯ ಕರ್ನಾಟಕ ಜಾರಿ

September 13, 2018

ಹಾಸನ: ಹಲವು ಯೋಜನೆಗಳ ವಿಲೀನದೊಂದಿಗೆ ಪ್ರಸ್ತುತ ಆರೋಗ್ಯ ಕರ್ನಾ ಟಕ ಯೋಜನೆ ಜಾರಿಗೆ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿಯ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿನಿ, ವಾಜಪೇಯಿ ಆರೋ ಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಹಿರಿಯ ನಾಗರಿಕರಿಗೆ ರೆಸ್ಬಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ, ರಾಷ್ಟ್ರೀಯ ಬಾಲ ಸ್ವಾಸ್ಥ್ಯಾ ಯೋಜನೆ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ ಸೇರಿದಂತೆ ಇಂದಿರಾ ಸುರಕ್ಷಾ ಯೋಜನೆಗಳೊಂದಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಆರೋಗ್ಯ ಕರ್ನಾಟಕ ಯೋಜನೆಗೆ ವಿಲೀನ ಗೊಳಿಸಲಾಗಿದೆ ಎಂದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಭಿವೃದ್ಧಿಪಡಿಸುವ ಐಟಿ ಸಾಫ್ಟ್‍ವೇರ್ ಬಳಸಿಕೊಂಡು ರೋಗಿಗಳು ಮೊದಲ ಬಾರಿಗೆ ಯಾವುದೇ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತೆಗೆ ತೆರಳಿದಾಗ ಒಂದು ಬಾರಿ ಹೆಸರು ನೋಂದಣಿ ಮಾಡಿಸಿ ಕೊಂಡರೆ ಸಾಕು ಎಂದರು.

ತುರ್ತು ವೇಳೆ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನ ಹೊರತಾಗಿ ಖಾಸಗಿ ಆಸ್ಪತ್ರೆ ರೋಗಿ ಸಂಪರ್ಕಿಸಿದಾಗಲೂ ನೋಂದಣಿ ಮಾಡಿಕೊಳ್ಳಲಾಗುವುದು. ಇದಕ್ಕೆ ಆಧಾರ್ ಮತ್ತು ಪಡಿತರ ಚೀಟಿ ಇದ್ದರೆ ಸಾಕು ಎಂದು ತಿಳಿಸಿದರು.

ರೋಗಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ನಂತರ ದಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾ ರಸು ಮಾಡಿದರೆ ಖಾಸಗಿ ಆಸ್ಪತ್ರೆಗೆ ಹೋಗ ಬಹುದಾಗಿದೆ. ಇದರಲ್ಲಿ ಎಲ್ಲಾ ಚಿಕಿತ್ಸೆ ಉಚಿತವಾಗಿ ಕೊಡಲಾಗುತ್ತದೆ. ಎಫ್‍ಎಸ್‍ಎ (ಬಿಪಿಎಲ್) ಅರ್ಹ ಕುಟುಂಬಗಳಿಗೆ 5 ಜನ ಸದಸ್ಯರು ಇರುವ ಒಂದು ಅರ್ಹತಾ ಕುಟುಂಬಕ್ಕೆ ಸೂಚಿತ ಚಿಕಿತ್ಸೆಗಾಗಿ ವರ್ಷಕ್ಕೆ 30 ಸಾವಿರ ರೂ. ವರೆಗೂ ಆರ್ಥಿಕ ನೆರ ವನ್ನು ನೀಡಲಾಗುವುದು. ತೃತೀಯ ಹಂತದ ಆರೋಗ್ಯ ಚಿಕಿತ್ಸೆಗೆ ವರ್ಷಕ್ಕೆ ರೂ 1.5 ಲಕ್ಷ ರೂ.ವರೆಗೂ ನೆರವು ಒದಗಿಸ ಲಾಗು ವುದು. ತೀವ್ರ ತುರ್ತು ಚಿಕಿತ್ಸಾ ಸಂದರ್ಭ ದಲ್ಲಿ ಇನ್ನು 50 ಸಾವಿರ ರೂ. ಹೆಚ್ಚು ಆರ್ಥಿಕ ನೆರವನ್ನು ಒದಗಿಸಲಾಗುವುದು. ಬಿಪಿಎಲ್ ಕುಟುಂಬದವರಿಗೆ ಮಾರಣಾಂತಿಕ ಕಾಯಿಲೆಗಳಾದ ಹೃದಯ ರೋಗ, ಕ್ಯಾನ್ಸರ್, ನರರೋಗ, ಮೂತ್ರ ಪಿಂಡದ ಸಮಸ್ಯೆ, ಸುಟ್ಟಗಾಯ, ನವಜಾತ ಶಿಶು ಮತ್ತು ಮಕ್ಕಳ ಕಾಯಿಲೆಗಳು, ಪಾಲಿ ಟ್ರಾಮ ಕಾಯಿಲೆ ಕಾಡಿದರೆ ಚಿಕಿತ್ಸೆಗೆ ವಾರ್ಷಿಕ 1.5 ಲಕ್ಷದಿಂದ 2 ಲಕ್ಷ ರೂ.ವರೆಗೂ ನೆರವು ನೀಡಲಾಗುತ್ತದೆ. ದ್ವಿತೀಯ ಹಂತದ ಕಾಯಿಲೆಗಳಾದ ಕಣ್ಣು, ದಂತ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸ್ತ್ರೀರೋಗ, ಕೀಲು ಮತ್ತು ಮೂಳೆ ಮೊದಲಾದ ಕಾಯಿಲೆಗಳಿಗೆ ವಾರ್ಷಿಕ 30 ಸಾವಿರ ರೂ.ವರೆಗೂ ಚಿಕಿತ್ಸೆ ವೆಚ್ಚ ಭರಿಸಲಾಗುವುದು ಎಂದರು.

ನಗರದ ಆರ್.ಸಿ ರಸ್ತೆಯ ಜನತಾ ಆಸ್ಪತ್ರೆ, ಶಂಕರ ಮಠ ರಸ್ತೆಯ ಜನಪ್ರಿಯ ಆಸ್ಪತ್ರೆ, ಮೈಸೂರು ರಸ್ತೆಯಲ್ಲಿರುವ ಚನ್ನ ರಾಯಪಟ್ಟಣದ ನಾಗೇಶ್ ಆಸ್ಪತ್ರೆ, ಕೆ.ಆರ್ ಪುರಂನಲ್ಲಿರುವ ಎಸ್‍ಎಸ್‍ಎಂ ಆಸ್ಪತ್ರೆ, ಸಂಪಿಗೆ ರಸ್ತೆಯಲ್ಲಿರುವ ಮಂಗಳಾ ಆಸ್ಪತ್ರೆ ಸೇರಿದಂತೆ ಒಟ್ಟು 15 ಖಾಸಗಿ ಆಸ್ಪತ್ರೆಗಳು ಆರೋಗ್ಯ ಕರ್ನಾಟಕ ಯೋಜನೆಗೆ ಒಳ ಪಡಲಿವೆÉ ಎಂದರಲ್ಲದೆ, ಯೋಜನೆಗೆ ಒಳಪಟ್ಟ ಆಸ್ಪತ್ರೆಗಳು ಕಡ್ಡಾಯವಾಗಿ ನಾಮ ಫಲಕ ಹಾಕಬೇಕು. ಇರುವ ಸೌಲಭ್ಯವನ್ನು ಬಡವರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಸೂಚನೆ ನೀಡಿ ದರು. ಆರೋಗ್ಯ ಇಲಾಖೆ ರಾಜಗೋಪಾಲ್, ಜಿಲ್ಲಾ ಸಂಯೋಜಕ ಪವನ್ ಕುಮಾರ್, ಆರೋಗ್ಯ ಯೋಜನೆ ವಿಭಾಗದ ಶಿವಾನಂದ್ ಇತರರು ಈ ವೇಳೆ ಉಪಸ್ಥಿತರಿದ್ದರು.

Translate »