ಜಿಲ್ಲೆಯಾದ್ಯಂತ ಸಂಭ್ರಮದಿಂದ ಗೌರಿ ಹಬ್ಬ ಆಚರಣೆ
ಚಾಮರಾಜನಗರ

ಜಿಲ್ಲೆಯಾದ್ಯಂತ ಸಂಭ್ರಮದಿಂದ ಗೌರಿ ಹಬ್ಬ ಆಚರಣೆ

September 13, 2018

ಗೌರಿ ಪೂಜೆ ಖ್ಯಾತಿಯ ಕುದೇರಿನಲ್ಲಿ ಸಂಭ್ರಮ
ಚಾಮರಾಜನಗರ:  ಚಾಮರಾಜನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಬುಧವಾರ ಗೌರಿ ಹಬ್ಬವನ್ನು ಅದ್ಧೂರಿ ಯಾಗಿ ಆಚರಿಸಲಾಯಿತು. ಜಿಲ್ಲೆಯಲ್ಲಿ ಗೌರಿ ಪೂಜೆಗೆ ಹೆಸರುವಾಸಿ ಆಗಿರುವ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಗ್ರಾಮದ ಶ್ರೀ ಸ್ವರ್ಣಗೌರಮ್ಮ ದೇವಸ್ಥಾನಕ್ಕೆ ಆಗ ಮಿಸಿದ ಮುತ್ತೈದೆಯರು ಗೌರಿಗೆ ಪೂಜೆ ಸಲ್ಲಿಸಿದರು.

ಜಿಲ್ಲೆಯ ಅನೇಕ ದೇವಾಲಯಗಳಲ್ಲಿ, ಪ್ರಮುಖರ ಮನೆಗಳಲ್ಲಿ ಗೌರಿಯನ್ನು ಪ್ರತಿ ಷ್ಠಾಪಿಸಲಾಗಿತ್ತು. ಇಲ್ಲಿಗೆ ಆಗಮಿಸಿದ ಮುತ್ತೈ ದೆಯರು, ಗೌರಿಗೆ ಪೂಜೆ ಸಲ್ಲಿಸಿ ನಮಿಸಿ ದರು. ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸಿದರು. ನಂತರ ಸ್ಥಳದ ಲ್ಲಿದ್ದ ಮುತ್ತೈದೆಯರಿಗೆ ಹರಿಸಿನ-ಕುಂಕುಮ ನೀಡಿದರು. ತದನಂತರ ಅಕ್ಕ-ಪಕ್ಕದ ಮನೆ ಯವರು, ಸಂಬಂಧಿಕರ ಮನೆಗೆ ತೆರಳಿ ಕುಂಕುಮ ನೀಡುತ್ತಿದ್ದ ದೃಶ್ಯ ಕಂಡು ಬಂತು.

ಗೌರಿ ಹಬ್ಬ ಬಂತೆಂದರೆ ಚಾಮರಾಜ ನಗರ ತಾಲೂಕಿನ ಕುದೇರು ಗ್ರಾಮಕ್ಕೆ ಎಲ್ಲಿ ಲ್ಲದ ಬೇಡಿಕೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮದ ದೊಡ್ಡಕೆರೆ ಯಮುನಾ ತಡಿಯಲ್ಲಿ ಮರಳಿನ ಗೌರಿ ವಿಗ್ರಹವನ್ನು ತಯಾರಿಸಲಾಗಿತ್ತು. ಇಂದು ಬೆಳಿಗ್ಗೆ ಗೌರಿಗೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶ್ರೀ ಸ್ವರ್ಣಗೌರಿಯನ್ನು ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲಾಯಿತು.

ಗೌರಿ ಗಣೇಶ ಹಬ್ಬ ಎಂದರೆ ಗೌರಿ ಗಣ ಪತಿ ಪ್ರತಿಷ್ಠಾಪಿಸುವುದು ಸರ್ವೇ ಸಾಮಾನ್ಯ. ಆದರೆ ಕುದೇರು ಗ್ರಾಮದಲ್ಲಿ ಗೌರಿ ಹಬ್ಬಕ್ಕೆ ಮಾತ್ರ ಪ್ರಾಧ್ಯಾನತೆ, ಹೀಗಾಗಿ ಈ ಗ್ರಾಮ ಗೌರಿಗೆ ಹೆಸರುವಾಸಿ. ಇದರಿಂದ ಜಿಲ್ಲೆಯ ನಾನಾ ಭಾಗಗಳಿಂದ ಹಾಗೂ ಹೊರ ಜಿಲ್ಲೆಗಳಿಂದಲೂ ಸಹ ಇಲ್ಲಿಗೆ ಮುತ್ತೈದೆ ಯರು ಹಾಗೂ ಸಂಬಂಧಿಕರು ಆಗಮಿಸಿ ಪೂಜೆ ಸಲ್ಲಿಸಿದರು. 12 ದಿನದವರೆಗೂ ಗೌರಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗು ವುದು. ನಂತರ ಮೆರವಣಿಗೆ ಮಾಡಿ ವಿಸರ್ಜಿಸ ಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Translate »