Tag: suicide

ಜಿಗುಪ್ಸೆ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಮೈಸೂರು

ಜಿಗುಪ್ಸೆ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

December 22, 2020

ಮೈಸೂರು,ಡಿ.21(ಆರ್‍ಕೆ)- ಜೀವನ ದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ಭಾನು ವಾರ ರಾತ್ರಿ ಸಂಭವಿಸಿದೆ. ಮೂಲತಃ ಕೊಡಗು ಜಿಲ್ಲೆ, ಕುಶಾಲ ನಗರ ನಿವಾಸಿ ಎಂ.ಎಂ.ಖಾದರ್ ಅವರ ಮಗ ಮೊಹಮದ್ ಶಂಶೀರ್ (32) ನೇಣಿಗೆ ಶರಣಾದವರು. ಮೊಬೈಲ್ ರಿಪೇರಿ ವೃತ್ತಿ ಮಾಡಿ ಕೊಂಡು ಮೈಸೂರಿನ ಸಾತಗಳ್ಳಿ ಮೊದಲನೇ ಹಂತದಲ್ಲಿ ವಾಸವಾಗಿದ್ದ ಶಂಶೀರ್, ಭಾನುವಾರ ರಾತ್ರಿ ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿ ಕೊಂಡು ಸಾವಿಗೀಡಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ…

ಕಲ್ಲು ಕ್ವಾರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ
ಕೊಡಗು

ಕಲ್ಲು ಕ್ವಾರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

December 5, 2018

ಕುಶಾಲನಗರ: ನೀರು ತುಂಬಿದ ಕಲ್ಲುಕ್ವಾರೆಗೆ ಹಾರಿ ತಾಯಿ-ಮಗಳು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಸ್ವಾಮಿನಾಯಕ್ ಎಂಬು ವರ ಪತ್ನಿ ತಾಯಮ್ಮ(40 ವರ್ಷ) ಹಾಗೂ ಮಗಳು ದಿವ್ಯಶ್ರೀ ಅಲಿಯಾಸ್ ಗಾನವಿ (11 ವರ್ಷ) ಮೃತಪಟ್ಟಿರುವ ತಾಯಿ-ಮಗಳು. ಮಗಳು ದಿವ್ಯಶ್ರೀ ಗೊಂದಿ ಬಸವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 5 ತರಗತಿ ವ್ಯಾಸಂಗ ಮಾಡುತ್ತಿ ದ್ದಳು. ತಾಯಮ್ಮನ ಪತಿ ಸ್ವಾಮಿ ನಾಯಕ…

ಶಿಕ್ಷಕಿಯಾಗಬೇಕೆಂಬ ಆಸೆ ಹೊತ್ತಿದ್ದ ಶಿವಮೊಗ್ಗ ವಿದ್ಯಾರ್ಥಿನಿ ಗೌಹಾಟಿ ಐಐಟಿಯಲ್ಲಿ ಆತ್ಮಹತ್ಯೆ
ಮೈಸೂರು

ಶಿಕ್ಷಕಿಯಾಗಬೇಕೆಂಬ ಆಸೆ ಹೊತ್ತಿದ್ದ ಶಿವಮೊಗ್ಗ ವಿದ್ಯಾರ್ಥಿನಿ ಗೌಹಾಟಿ ಐಐಟಿಯಲ್ಲಿ ಆತ್ಮಹತ್ಯೆ

September 13, 2018

ಗೌಹಾಟಿ: ಅಸ್ಸಾಂ ಗೌಹಾಟಿಯ ಐಐಟಿಯಲ್ಲಿ ಮೊದಲ ವರ್ಷ ಬಿ.ಟೆಕ್ ಅಧ್ಯಯನ ನಡೆಸಿದ್ದ ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಶಿವಮೊಗ್ಗ ಹೊಸನಗರ ಮೂಲದ ಎಸ್.ಸಿ. ನಾಗಶ್ರೀ(18) ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. “ತನಗೆ ಟೀಚರ್ ಆಗುವ ಹಂಬಲವಿತ್ತು, ಇಂಜಿನಿಯರಿಂಗ್ ಮಾಡಲು ಇಷ್ಟವಿರಲಿಲ್ಲ. ಪೆÇೀಷಕರು ಬಯಸುವಂತೆ ಬದುಕಲು ಸಾಧ್ಯವಾಗದೆ ಇರುವುದಕ್ಕಿಂತ ಸಾವು ಉತ್ತಮವಾಗಿದೆ’’ ಎಂದು ನಾಗಶ್ರೀ ಆತ್ಮಹತ್ಯೆಗೆ ಮುನ್ನ ಬರೆದಿರುವ ಡೆತ್ ನೋಟ್‍ನಲ್ಲಿ ಬರೆದಿದ್ದಾಗಿ ಪೆÇಲೀಸರು ಮಾಹಿತಿ ನೀಡಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಗೌಹಾಟಿಯ ಹಾಸ್ಟೆಲ್ ಕೋಣೆ…

ವಿದ್ಯಾರ್ಥಿ ನೇಣಿಗೆ ಶರಣು
ಹಾಸನ

ವಿದ್ಯಾರ್ಥಿ ನೇಣಿಗೆ ಶರಣು

July 25, 2018

ಚನ್ನರಾಯಪಟ್ಟಣ: ವಿದ್ಯಾರ್ಥಿವೋರ್ವ ನೇಣಿಗೆ ಶರಣಾಗಿರುವ ಪ್ರಕರಣ ತಾಲೂಕಿನ ಕಾರೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ತಾಲೂಕಿನ ನುಗ್ಗೇಹಳ್ಳಿ ಸಮೀಪದ ತಾವರೆಕೆರೆಯ ಪೃಥ್ವಿರಾಜ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಬೆಳಿಗ್ಗೆ ಎಲ್ಲಾ ವಿದ್ಯಾರ್ಥಿಗಳು ಪ್ರಾರ್ಥನೆಗೆ ತೆರಳಿದ್ದ ವೇಳೆ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಚನ್ನ ರಾಯಪಟ್ಟಣ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡು ಲಾಡ್ಜ್ ನಲ್ಲಿ ಮೈಸೂರು ಉದ್ಯಮಿ ಆತ್ಮಹತ್ಯೆ
ಮೈಸೂರು

ನಂಜನಗೂಡು ಲಾಡ್ಜ್ ನಲ್ಲಿ ಮೈಸೂರು ಉದ್ಯಮಿ ಆತ್ಮಹತ್ಯೆ

July 7, 2018

ನಂಜನಗೂಡು:  ಪಟ್ಟಣದ ಲಾಡ್ಜ್ ವೊಂದರಲ್ಲಿ ಉದ್ಯಮಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಕೆ.ಆರ್ ಮೊಹಲ್ಲಾದ ಹಳೇ ಬಂಡಿಕೇರಿ ನಿವಾಸಿ, ಕೇಬಲ್ ಆಪರೇಟರ್ ಜಿ.ಆರ್. ಬಾಬು(45) ಆತ್ಮಹತ್ಯೆಗೆ ಶರಣಾದವರು. ಪಟ್ಟಣದ ಖಾಸಗಿಬಸ್ ನಿಲ್ದಾಣದ ಸಮೀಪವಿರುವ ಬೃಂದಾವನ್ ಲಾಡ್ಜ್ ನ ಕೊಠಡಿಯಲ್ಲಿ ನಿನ್ನೆ ತಂಗಿದ್ದರು. ಇಂದು ಬೆಳಿಗ್ಗೆ ಕೊಠಡಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು, ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪಿಎಸ್‍ಐ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೊಠಡಿ ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ….

ಪತ್ನಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು
ಹಾಸನ

ಪತ್ನಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

July 3, 2018

ಹಾಸನ: ತನ್ನ ಸಾವಿಗೆ ಪತ್ನಿಯೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ವಿಷ ಸೇವಿಸಿದ್ದ ವ್ಯಕ್ತಿವೋರ್ವ ಚಿಕಿತ್ಸೆ ಫಲಿಸದೆ ಅಸುನೀಗಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ತಾಲೂಕಿನ ಮರ್ಕುಲಿ ಗ್ರಾಮದ ನಿವಾಸಿ ರಾಘವೇಂದ್ರ(45) ಮೃತರು. ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ವಿಷ ಸೇವಿಸಿದ್ದ. ಬಳಿಕ ಆತನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಹಲವು ವರ್ಷಗಳಿಂದ ಪತಿ -ಪತ್ನಿ ನಡುವೆ ಕೌಟುಂಬಿಕ ಕಲಹ ಗಳಿತ್ತು ಎನ್ನಲಾಗಿದ್ದು, ಡೆತ್‍ನೋಟ್ ಆಧರಿಸಿ ರಾಘವೇಂದ್ರನ ಪತ್ನಿ ವಿರುದ್ಧ ಶಾಂತಿ…

ಪ್ರೀತಿಸುವಂತೆ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಚಾಮರಾಜನಗರ

ಪ್ರೀತಿಸುವಂತೆ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

June 30, 2018

ಸಾವು-ಬದುಕಿನ ನಡುವೆ ಹೋರಾಟ ಯುವಕ ನಾಪತ್ತೆ ಚಾಮರಾಜನಗರ: ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ವಿದ್ಯಾರ್ಥಿನಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿ ಸಿರುವ ಘಟನೆ ತಾಲೂಕಿನ ಅಮ್ಮನಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಯತ್ನಿಸಿದ್ದು, ಈಗ ಸಾವು-ಬದು ಕಿನ ನಡುವೆ ಹೋರಾಡುತ್ತಿದ್ದಾಳೆ. ಘಟನೆಯ ವಿವರ: ಅಮ್ಮನಪುರ ಗ್ರಾಮದ ವಿದ್ಯಾರ್ಥಿನಿ ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ…

ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ
ಮೈಸೂರು

ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

June 25, 2018

ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಜರ್‍ಬಾದ್‍ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ರಘುನಾಯ್ಕರ್ ಪತ್ನಿ ಶ್ರೀಮತಿ ಶೋಭಾ(27) ನೇಣಿಗೆ ಶರಣಾದವರು. ಮೂಲತಃ ಹೆಚ್.ಡಿ.ಕೋಟೆ ತಾಲೂಕು ಗಂಗಡಹೊಸಹಳ್ಳಿಯವರಾದ ಶೋಭಾರನ್ನು 8 ವರ್ಷಗಳ ಹಿಂದೆ ರಘುನಾಯ್ಕ ಜೊತೆ ಮದುವೆ ಮಾಡಿಕೊಡಲಾಗಿತ್ತು. ಸುಮಂಗಲಿ ಸಿಲ್ಕ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ನಜರ್‍ಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು…

ಸೊಸೆ ಕಿರುಕುಳಕ್ಕೆ ಬೇಸತ್ತ ಮಾವ ಆತ್ಮಹತ್ಯೆ
ಮಂಡ್ಯ

ಸೊಸೆ ಕಿರುಕುಳಕ್ಕೆ ಬೇಸತ್ತ ಮಾವ ಆತ್ಮಹತ್ಯೆ

June 1, 2018

ಮಂಡ್ಯ: ಸೊಸೆಯ ಕಿರುಕುಳದಿಂದ ಮಾನಸಿಕವಾಗಿ ನೊಂದ ಮಾವ ರಸ್ತೆ ಮೇಲೆ ಬರೆದಿಟ್ಟು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಿರಗಸೂರು ಗ್ರಾಮದಲ್ಲಿ ನಡೆದಿದೆ. ಮಳವಳ್ಳಿ ತಾಲೂಕಿನ ಕಿರಗಸೂರು ಗ್ರಾಮದ ಮರಿಸ್ವಾಮಿ (60) ಮೃತಪಟ್ಟ ದುರ್ದೈವಿ. ಮರಿಸ್ವಾಮಿ ಅವರು 4 ವರ್ಷಗಳ ಹಿಂದೆ ತನ್ನ ಮಗ ಶಿವರಾಜು ಅವರಿಗೆ ಬೆಂಗಳೂರು ಮೂಲದ ಹೇಮಾ ಜೊತೆ ವಿವಾಹ ಮಾಡಿಸಿದ್ದರು. ಆದರೆ ಸೊಸೆ ಮಗನೊಂದಿಗೆ ಒಂದು ತಿಂಗಳು ಕೂಡ ಸಂಸಾರ ಮಾಡದೇ ಜಗಳ ವಾಡಿಕೊಂಡು ತವರು ಮನೆ ಸೇರಿದ್ದಳು. 4…

Translate »