ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ
ಮೈಸೂರು

ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

June 25, 2018

ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಜರ್‍ಬಾದ್‍ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ರಘುನಾಯ್ಕರ್ ಪತ್ನಿ ಶ್ರೀಮತಿ ಶೋಭಾ(27) ನೇಣಿಗೆ ಶರಣಾದವರು. ಮೂಲತಃ ಹೆಚ್.ಡಿ.ಕೋಟೆ ತಾಲೂಕು ಗಂಗಡಹೊಸಹಳ್ಳಿಯವರಾದ ಶೋಭಾರನ್ನು 8 ವರ್ಷಗಳ ಹಿಂದೆ ರಘುನಾಯ್ಕ ಜೊತೆ ಮದುವೆ ಮಾಡಿಕೊಡಲಾಗಿತ್ತು. ಸುಮಂಗಲಿ ಸಿಲ್ಕ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ನಜರ್‍ಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »